Monday, April 21, 2025
Google search engine

Homeರಾಜ್ಯಅಪೂರ್ಣವಸ್ಥೆಯಲ್ಲಿ ರಾಮಮಂದಿರ ಉದ್ಘಾಟನೆ ಮಾಡುವುದು ಧರ್ಮಶಾಸಕ್ಕೆ ಮಾಡುವ ಅಪಚಾರ: ರಾಜೇಶ್ ಪವಿತ್ರನ್

ಅಪೂರ್ಣವಸ್ಥೆಯಲ್ಲಿ ರಾಮಮಂದಿರ ಉದ್ಘಾಟನೆ ಮಾಡುವುದು ಧರ್ಮಶಾಸಕ್ಕೆ ಮಾಡುವ ಅಪಚಾರ: ರಾಜೇಶ್ ಪವಿತ್ರನ್

ಮಂಗಳೂರು (ದಕ್ಷಿಣ ಕನ್ನಡ): ಕೇಂದ್ರ ಸರಕಾರವು ಲೋಕಸಭೆ ಚುನಾವಣಾ ದೃಷ್ಟಿಯಿಂದ ಪ್ರಭು ಶ್ರೀರಾಮನ ಮಂದಿರವನ್ನು ಅಪೂರ್ಣವಸ್ಥೆಯಲ್ಲಿ ಉದ್ಘಾಟನೆ ಮಾಡುವುದು ಧರ್ಮಶಾಸಕ್ಕೆ ಮಾಡುವ ಅಪಚಾರ. ಶ್ರೀರಾಮನನ್ನು ಚುನಾವಣಾ ಸರಕನ್ನಾಗಿ ಮಾಡಿದ್ದೆ ಆದಲ್ಲಿ ಭಾರತೀಯ ಜನತಾ ಪಕ್ಷದ ನೇತೃತ್ವದ ಕೇಂದ್ರ ಸರಕಾರಕ್ಕೆ ಪ್ರಭು ಶ್ರೀರಾಮನ ಶಾಪ ತಗಲುಲಿದೆ ಎಂದು ಹಿಂದೂ ಮಹಾಸಭಾ ಕರ್ನಾಟಕದ ಸಂಸ್ಥಾಪಕ ರಾಜೇಶ್ ಪವಿತ್ರನ್ ಹೇಳಿದ್ದಾರೆ.

ಅವರು ಮಂಗಳೂರು ನಗರದ ಖಾಸಗಿ ಹೊಟೇಲ್ ನಲ್ಲಿ ನಡೆದ ಸುದ್ದಿಗೋಷ್ಟಿಯಲ್ಲಿ ಮಾತನಾಡುತ್ತಾ, ಕೇಂದ್ರ ಸರಕಾರದ ಈ ನಡೆಯನ್ನು ಹಿಂದೂ ಮಹಾಸಭಾ ಖಂಡಿಸುತ್ತದೆ.

ಹಿಂದೂ ಮಹಾಸಭಾ ಶ್ರೀರಾಮನ ವಿಚಾರವನ್ನು ಎಂದಿಗೂ ರಾಜಕೀಯವಾಗಿ ಬಳಸಿಕೊಂಡಿಲ್ಲ. ಅಯೋಧ್ಯೆಯಲ್ಲಿ ಶ್ರೀ ರಾಮಚಂದ್ರರ ಪ್ರಾಣ ಪ್ರತಿಷ್ಠಾಪನಾ ಕಾರ್ಯಕ್ರಮಕ್ಕೆ ಮೂಲ ವಕಾಲತ್ತುದಾರರಾದ ಹಿಂದೂ ಮಹಾಸಭಾ ಹಾಗೂ ನಿರ್ಮೂಯಿ ಅಖಾಡಕ್ಕೆ ಆಮಂತ್ರಣ ನೀಡದಿರುವುದು ಕೇಂದ್ರ ಸರಕಾರದ ಸ್ವಾರ್ಥದ ರಾಜಕಾರಣಕ್ಕೆ ಸಾಕ್ಷಿಯಾಗಿದೆ ಎಂದರು.

RELATED ARTICLES
- Advertisment -
Google search engine

Most Popular