Sunday, April 20, 2025
Google search engine

Homeರಾಜ್ಯಸುದ್ದಿಜಾಲಶ್ರೀ ಮಹಾಯೋಗಿ ವೇಮನರುದೇಶಕಂಡ ಮಹಾಕವಿ: ಗೋವಿಂದರಾಜು

ಶ್ರೀ ಮಹಾಯೋಗಿ ವೇಮನರುದೇಶಕಂಡ ಮಹಾಕವಿ: ಗೋವಿಂದರಾಜು

ರಾಮನಗರ: ವೇಮನರು ವೈರಾಗಿಯಾಗಿತಮ್ಮ ಕವಿತೆಗಳನ್ನು ತಾಳೆಗರಿಗಳಲ್ಲಿ ರಚಿಸುತ್ತಿದ್ದರು. ಶ್ರೀಮಹಾಯೋಗಿ ವೇಮನ ಅವರುತೆಲುಗಿನ ಶ್ರೇಷ್ಠ ಕವಿಯಾಗಿದ್ದು, ಅವರು ರಚಿಸಿರುವ ಕವನಗಳಲ್ಲಿ ಸಮಾಜದಲ್ಲಿ ಸಮಾನತೆಯನ್ನು ಮೂಡಿಸಬೇಕು ಎಂದು ವೇಮನ ಸಮುದಾಯದ ಮುಖಂಡ ಗೋವಿಂದರಾಜು ಅವರು ತಿಳಿಸಿದರು.

ಅವರು ಇಂದು ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಏರ್ಪಡಿಸಲಾಗಿದ್ದ ಶ್ರೀ ಮಹಾಯೋಗಿ ವೇಮನ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು. ವೇಮನರುದೇಶಕಂಡ ಸರಳ, ಸಂತ ಕವಿ ಚೈತನ್ಯಇವರುರಾಜಮನೆತನದಲ್ಲಿ ಜನಿಸಿದರೂ ಎಲ್ಲವನ್ನು ತ್ಯಜಿಸಿ ತ್ರಿಲೋಕ ಸಂಚಾರಿಯಾಗಿ ಲೋಕಜ್ಞಾನಿಯಾದರುಎಂದು ತಿಳಿಸಿದರು.


ವೇಮನರುತೆಲಗು ಸಾಹಿತ್ಯದಅಗ್ರಗಣ್ಯರು, ಆಧ್ಯಾತ್ಮಿಕಚಿಂತಕರು.ವೇಮನರು ಮೊದಲು ದುಶ್ಚಟಗಳ ದಾಸರಾಗಿದ್ದರು.ಅವರಅತ್ತಿಗೆ ಹೇಮರೆಡ್ಡಿ ಮಲ್ಲಮ್ಮ ವೇಮನರ ತಪ್ಪುಗಳನ್ನು ತಿದ್ದಿಅವರನ್ನು ಮಹಾನ್ ವ್ಯಕ್ತಿಯಾಗಿ ಮಾಡಿದರು.ಅವರು ಬರೆದಂತಹ ಅನೇಕ ಕವಿತೆಗಳನ್ನು ಕೈವಾರದತಾತಯ್ಯಅವರು ಬೆಳಕಿಗೆ ತಂದರುಎಂದು ತಿಳಿಸಿದರು. ಜಿಲ್ಲಾಧಿಕಾರಿಡಾ. ಅವಿನಾಶ್ ಮೆನನ್‌ರಾಜೇಂದ್ರನ್‌ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿ, ಶ್ರೀ ಮಹಾಯೋಗಿ ವೇಮನ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿದರು.

ಈ ಸಂದರ್ಭದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ರಮೇಶ್ ಬಾಬು, ಸಮುದಾಯದ ಮುಖಂಡರುಗಳಾದ ಚಂದ್ರಶೇಖರ್‌ರೆಡ್ಡಿ, ದರ್ಶನ್‌ರೆಡ್ಡಿ, ಮನ್‌ಶಾನ್‌ರೆಡ್ಡಿ, ಸುರೇಂದ್ರರೆಡ್ಡಿ, ಸಂದೀಪ್‌ರೆಡ್ಡಿ, ಸರ್ವೇಶ್‌ರೆಡ್ಡಿ, ವನಮಾಲ ರೆಡ್ಡಿ, ನಿರ್ಮಲ ರೆಡ್ಡಿ, ಶಾರದಾರೆಡ್ಡಿಹಾಗೂ ಇತರರು, ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದ ಅಧಿಕಾರಿಗಳುಉಪಸ್ಥಿತರಿದ್ದರು.

RELATED ARTICLES
- Advertisment -
Google search engine

Most Popular