ಮೈಸೂರು: ವಿ.ಆರ್.ಟ್ರಸ್ಟ್ ವತಿಯಿಂದ ಜ.೨೨ರಂದು ಬೆಳಗ್ಗೆ ೯.೩೦ರಿಂದ ಮಧ್ಯಾಹ್ನ ೧೨.೩೦ರವರೆಗೆ ನಗರದ ಆಲಮ್ಮ ಛತ್ರದಲ್ಲಿನ ಕುಂಚಿಟಿಗರ ಸಂಘದಲ್ಲಿ ಸಾರ್ವಜನಿಕರಿಗೆ ಉಚಿತ ಆರೋಗ್ಯ ತಪಾಸಣಾ ಶಿಬಿರ ಆಯೋಜಿಸಲಾಗಿದೆ ಎಂದು ಸಂಸ್ಥಾಪಕ ಅಧ್ಯಕ್ಷ ಡಾ.ಶುಶ್ರುತ ಗೌಡ ತಿಳಿಸಿದರು. ಶಿಬಿರದಲ್ಲಿ ರಕ್ತದೊತ್ತಡ, ಮಧುಮೇಹ ಮೊದಲಾದ ಸಮಸ್ಯೆಗಳಿಗೆ ತಜ್ಞ ವೈದ್ಯರಿಂದ ಉಚಿತ ತಪಾಸಣೆ ಮತ್ತು ಸಲಹೆ ದೊರೆಯಲಿದೆ. ಅಲ್ಲದೆ, ಶಿಬಿರದಲ್ಲಿ ಪಾಲ್ಗೊಂಡವರ ಆರೋಗ್ಯದ ಮೇಲೆ ವರ್ಷ ಪೂರ್ತಿ ನಿಗಾ ಇರಿಸಿ ಸಲಹೆ ಸೂಚನೆ ನೀಡಲಾಗುವುದೆಂದರು.
ಅಂದೇ ಅದೇ ಸ್ಥಳದಲ್ಲಿ ಅಯೋಧ್ಯಯಲ್ಲಿನ ಶ್ರೀರಾಮ ಮಂದಿರದಲ್ಲಿನ ವಿಗ್ರಹ ಪ್ರತಿಷ್ಠಾಪನೆ ದೃಶ್ಯವನ್ನು ಬೃಹತ್ ಎಲ್‌ಇಡಿ ಟಿವಿ ಮೂಲಕ ನೇರ ಪ್ರಸಾರ ಮಾಡಲಾಗುವುದು. ಜತೆಗೆ ಜಿಲ್ಲಾ ಅರ್ಚಕರ ಮತ್ತು ಪುರೋಹಿತರ ಸಂಘದ ಸಹಯೋಗದಲ್ಲಿ ಶ್ರೀರಾಮಮ ತಾರಕ ಹೋಮ ಸಹಾ ಆಯೋಜಿಸಲಾಗಿದೆ ಎಂದು ಮಾಹಿತಿ ನೀಡಿದರು.