ಕೆ.ಆರ್.ಪೇಟೆ : ಬೆಂಗಳೂರಿನ ಟಾಟಾ ಮೋಟಾರ್ಸ್ ಪ್ರೋವಿಜ್ ಮ್ಯಾನ್ ಸಿಸ್ಟಮ್ ವತಿಯಿಂದ ಇದೇ ಜ.೨೧ರಂದು ಕೆ.ಆರ್.ಪೇಟೆ ಪಟ್ಟಣದ ಕೆ.ಪಿ.ಎಸ್ ಶಾಲೆಯ ಆವರಣದಲ್ಲಿ ಚಾಲಕರ ಬೃಹತ್ ಉದ್ಯೋಗ ಮೇಳವನ್ನು ಶಾಸಕ ಹೆಚ್.ಟಿ.ಮಂಜು ನೇತೃತ್ವದಲ್ಲಿ ಆಯೋಜಿಸಲಾಗಿದೆ ಎಂದು ಕಂಪನಿಯ ಹೆಚ್.ಆರ್. ಕ್ಲಸ್ಟರ್ ಮುಖ್ಯಸ್ಥ ಆರ್.ಯತೀಂದ್ರ ತಿಳಿಸಿದರು. ಡ್ರೈವಿಂಗ್ ಲೈಸೆನ್ಸ್ ಹಾಗೂ ಸೂಕ್ತ ಅನುಭವ ಹೊಂದಿರುವ ಚಾಲಕರಿಗೆ ಉದ್ಯೋಗ ಖಚಿತವಾಗಿದೆ. ತಾಲ್ಲೂಕಿನ ಅರ್ಹ ನಿರುದ್ಯೋಗಿ ಯುವಕರು ಇದರ ಸದುಪಯೋಗ ಪಡೆಯಬೇಕು ಎಂದರು.
ಗ್ರಾಮೀಣ ಪ್ರದೇಶದ ವಾಹನ ಚಾಲಕರಿಗೆ ಉದ್ಯೋಗ ಕಲ್ಪಿಸುವ ಉದ್ದೇಶದಿಂದ ಭಾರತದ ಅತಿ ದೊಡ್ಡ ವಾಣಿಜ್ಯ ತಯಾರಿಕಾ ಘಟಕವಾದ ಟಾಟಾ ಮೋಟರ್ಸ್ ಈ ಉದ್ಯೋಗ ಮೇಳವನ್ನು ಆಯೋಜಿಸಿದೆ. ಉದ್ಯೋಗ ಮೇಳದಲ್ಲಿ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಹೆವಿ ಡಿ.ಎಲ್ ಹಾಗೂ ಬ್ಯಾಡ್ಜ್ ಹೊಂದಿರಬೇಕು. ಎರಡು ವರ್ಷಗಳ ಬಸ್ ಅಥವಾ ಟ್ರಕ್ ಚಾಲನೆ ಮಾಡಿದ ಅನುಭವ ಇರಬೇಕು.
ಕಂಪನಿಯು ಸ್ಥಳೀಯರಿಗೆ ಉದ್ಯೋಗಾವಕಾಶಗಳನ್ನು ಕಲ್ಪಿಸುವ ನಿಟ್ಟಿನಲ್ಲಿ ತೀರ್ಮಾನ ಕೈಗೊಂಡಿದ್ದು ತಾಲೂಕಿನ ಎಲ್ಲಾ ಹೋಬಳಿಗಳ ಗ್ರಾಮಗಳಲ್ಲಿ ಇರುವ ವಾಹನ ಚಾಲಕರು ಈ ಶಿಬಿರದ ಪ್ರಯೋಜನವನ್ನು ಪಡೆದುಕೊಳ್ಳಬೇಕು ಎಂದು ಯತೀಂದ್ರ ಮನವಿ ಮಾಡಿದ್ದಾರೆ.