ಮಂಡ್ಯ: ಗ್ಯಾರಂಟಿ ಯೋಜನೆಯಿಂದ ಕ್ಷೇತ್ರದ ಅಭಿವೃದ್ಧಿ ಕುಂಠಿತವಾಗಿದ್ದು, ಸರ್ಕಾರದಲ್ಲಿ ದುಡ್ಡಿಲ್ಲ, ಅಷ್ಟೋಂದು ಗ್ರ್ಯಾಂಟ್ ಬರ್ತಿಲ್ಲ ಎಂದುಕಾಂಗ್ರೆಸ್ ಸರ್ಕಾರದ ವಿರುದ್ಧ ಮೇಲುಕೋಟೆ ಕ್ಷೇತ್ರದ ಶಾಸಕ ದರ್ಶನ್ ಪುಟ್ಟಣ್ಣಯ್ಯ ಬೇಸರ ವ್ಯಕ್ತಪಡಿಸಿದ್ದಾರೆ
ಮಂಡ್ಯದಲ್ಲಿ ಮಾತನಾಡಿದ ಶಾಸಕ ದರ್ಶನ್ ಪುಟ್ಟಣ್ಣಯ್ಯ, ಸರ್ಕಾರದ ಬಳಿ ಎಲ್ಲರ ತರ ನಾವು ಕೇಳಿಕೊಳ್ತಿದ್ದೇವೆ. ಸಮಸ್ಯೆಗಳ ಬಗ್ಗೆ ಸರ್ಕಾರಕ್ಕೆ ತಿಳಿಸುವ ಪ್ರಯತ್ನ ಮಾಡಿದ್ದೇನೆ. ಸರ್ಕಾರದಲ್ಲಿ ದುಡ್ಡಿಲ್ಲ, ಅಷ್ಟೋಂದು ಗ್ರ್ಯಾಂಟ್ ಬಂದಿಲ್ಲ. ಹಳೆ ಗ್ರ್ಯಾಂಟ್ ಗಳನ್ನೆ ವಾಪಸ್ ಪಡೆದಿದ್ರು. ಅದನ್ನೆ ವಾಪಸ್ ಪಡೆದುಕೊಳ್ಳಲು ಇನ್ನು ಹೋರಾಟ ಮಾಡ್ತಿದ್ದೇವೆ. ಸ್ವಲ್ಪ ಮಟ್ಟಿಗೆ ಕೊಟ್ಟಿದ್ದಾರೆ ಅಷ್ಟೆ ಎಂದರು.
ಯಾವ ಕ್ಷೇತ್ರದಲ್ಲೂ ಅಭಿವೃದ್ಧಿ ಆಗ್ತಿಲ್ಲ. ಅನುದಾನ ಎಲ್ಲಾ ಗ್ಯಾರಂಟಿಗೆ ಹೋಗ್ತಿದೆ. ಗ್ಯಾರಂಟಿ ಬಗ್ಗೆ ಯಾರಿಗೂ ಅರಿವು ಆಗ್ತಿಲ್ಲ. ಅದು ಎಷ್ಟು ಇಂಪ್ಯಾಕ್ಟ್ ಆಗ್ತಿದೆ ಅಂತ ಜನರಿಗೆ ಗೊತ್ತಿಲ್ಲ. ಪ್ರತಿ ಊರಿನಲ್ಲಿ ರಸ್ತೆ, ಶಾಲೆ ಸರಿಲ್ಲ ಅಂತ ನಮ್ಮನ್ನು ಅಡ್ಡ ಹಾಕ್ತಾರೆ. ನಮ್ಮ ಕ್ಷೇತ್ರಕ್ಕೆ ಅನುದಾನ ಕೊಡ್ತೇವೆ ಅಂತ ಹೇಳಿದ್ದಾರೆ ಅಷ್ಟೆ ಇನ್ನು ನಮ್ಮ ಕೈ ಸೇರಿಲ್ಲ. ಗ್ಯಾರಂಟಿ ಯೋಜನೆಯಿಂದ ಕ್ಷೇತ್ರದ ಅಭಿವೃದ್ಧಿ ಕುಂಟಿತವಾಗ್ತಿದೆ. ಇದು ನಮಗೆಲ್ಲ ಅಭ್ಯಾಸ ಆಗೋಗಿದೆ. ಗ್ರ್ಯಾಂಟ್ ಬರಬೇಕು ಅಭಿವೃದ್ಧಿ ಮಾಡಿದ್ರೆ ಮಾತ್ರ ಅಭಿವೃದ್ಧಿಯಾಗಿದೆ ಅಂತ ಕಣ್ಣಿಗೆ ಕಾಣಿಸೋದು ಎಂದು ಬೇಸರ ವ್ಯಕ್ತಪಡಿಸಿದರು.
ಲೋಕಲ್ ಎಕಾನಮಿಯಲ್ಲಿ ದುಡ್ಡು ಓಡಾಡ್ತಿದೆ. ಒಂದು ಕುಟುಂಬಕ್ಕೆ 5 ಮತ್ತೊಂದು ಕುಟುಂಬಕ್ಕೆ 5 ಅಂತ ದುಡ್ಡು ಚಲಾವಣೆಯಲ್ಲಿದೆ. ಅರ್ಥಿಕವಾಗಿ ಬೆಳೆಯುತ್ತಿದೆ ನಮಗೆ ಕಾಣ್ತಿಲ್ಲ. ಅರ್ಥಿಕತೆ ಬೆಳೆಸಬೇಕು ಇಲ್ಲ ಅಭಿವೃದ್ಧಿ ಆಗ್ತಿಲ್ಲ. ದುಡ್ಡು ಬೇರೆತರ ಹೋಗ್ತಿದೆ ಅಷ್ಟೆ. ಸರ್ಕಾರ ಯಾವ ತರ ಬ್ಯಾಲೆನ್ಸ್ ಮಾಡ್ತಾರೆ ನೋಡಬೇಕು ಎಂದರು.