Wednesday, April 23, 2025
Google search engine

Homeರಾಜ್ಯಮಂಡ್ಯದಲ್ಲಿ ಜ.22ರಂದು ಶ್ರೀರಾಮ ಮಂದಿರ ಉದ್ಘಾಟನೆ: ಭಾವೈಕ್ಯತೆ ಸಂದೇಶ ಸಾರಿದ ಮುಸ್ಲೀಮರು

ಮಂಡ್ಯದಲ್ಲಿ ಜ.22ರಂದು ಶ್ರೀರಾಮ ಮಂದಿರ ಉದ್ಘಾಟನೆ: ಭಾವೈಕ್ಯತೆ ಸಂದೇಶ ಸಾರಿದ ಮುಸ್ಲೀಮರು

ಮಂಡ್ಯ: ಮಂಡ್ಯದಲ್ಲಿ ಜ.22ರಂದೇ ಲೇಬರ್ ಕಾಲೋನಿಯಲ್ಲಿರುವ ಶ್ರೀರಾಮ ಮಂದಿರ ಉದ್ಘಾಟನೆ ಹಿನ್ನೆಲೆ  ಮುಸ್ಲಿಂ ಭಾಂದವರಿಂದ ರಾಶಿ ರಾಶಿ ಹೂವುಗಳನ್ನು ಸಮರ್ಪಿಸಿದ್ದಾರೆ.

ದೇವಸ್ಥಾನದಲ್ಲಿ ನಿನ್ನೆಯಿಂದ ಪೂಜಾ-ಕೈಂಕರ್ಯ ಆರಂಭವಾಗಿದ್ದು,  ಮುಸ್ಲಿಂ ಮುಖಂಡರು ಒಟ್ಟಾಗಿ ಬಂದು ಹೂವುಗಳ ಕೊಡುಗೆ ನೀಡಿದ್ದಾರೆ.

ಶ್ರೀರಾಮನಿಗೆ ಹೂವು ನೀಡಿದ ಬಳಿಕ ಶ್ರೀರಾಮ ಸಭಾ ವೇದಿಕೆಯಲ್ಲಿ ಭಾಗಿಯಾಗಿದ್ದಾರೆ.

ನಮ್ಮ ಏರಿಯಾದಲ್ಲಿ ಹಿಂದೂ-ಮುಸ್ಲಿಂರು ಅಣ್ಣ-ತಮ್ಮಂದಿರಂತೆ ಇದ್ದೇವೆ. ಅವರ ಆಚರಣೆಯಲ್ಲಿ ಪಾಲ್ಗೊಳ್ಳುವುದು ನಮ್ಮ ಧರ್ಮ. ಶ್ರೀರಾಮನ ದೇಗುಲಕ್ಕೆ ನಮ್ಮಿಂದ ಸಾಧ್ಯವಾದಷ್ಟು ನೆರವು ನೀಡಿದ್ದೇವೆ.  ನಾವೆಲ್ಲರೂ ಸೋದರರಂತೆ, ಭಾವೈಕ್ಯತೆಯಿಂದ ಇರುತ್ತೇವೆ ಎಂದು ಹಿಂದೂ-ಮುಸ್ಲಿಂ ಮುಖಂಡರು ಹೇಳಿದ್ದಾರೆ.

RELATED ARTICLES
- Advertisment -
Google search engine

Most Popular