Monday, April 21, 2025
Google search engine

Homeಸ್ಥಳೀಯಸೇವಾ ಮನೋಭಾವವುಳ್ಳ ಸಂಸ್ಥೆಗಳ ಸಂಖ್ಯೆ ಹೆಚ್ಚಲಿ. ಎಂ.ಎಲ್.ಸಿ. ಮಂಜೇಗೌಡ

ಸೇವಾ ಮನೋಭಾವವುಳ್ಳ ಸಂಸ್ಥೆಗಳ ಸಂಖ್ಯೆ ಹೆಚ್ಚಲಿ. ಎಂ.ಎಲ್.ಸಿ. ಮಂಜೇಗೌಡ

ಮೈಸೂರು: ದೇಶದಲ್ಲಿ ಸೇವಾ ಮನೋಭಾವವುಳ್ಳ ಸೇವಾ ಸಂಸ್ಥೆಗಳ ಸಂಖ್ಯೆ ಹೆಚ್ಚಾಗಬೇಕು ಇದರಿಂದ ಸಾರ್ವಜನಿಕರಿಗೆ ಅನುಕೂಲವಾಗಬೇಕೆಂದು ವಿಧಾನಪರಿಷತ್ ಸದಸ್ಯ ಸಿ.ಎನ್. ಮಂಜೇಗೌಡ ಕರೆ ನೀಡಿದರು.

ಮೈಸೂರಿನ ನಂಜರಾಜ ಬಹದ್ದೂರ್ ಸಭಾಂಗಣದಲ್ಲಿ ಲಯನ್ಸ್ ಅಂತರಾಷ್ಟ್ರೀಯ ಸೇವಾಸಂಸ್ಥೆ, ಜೈನ್ ಮಿಲನ್ ಚಾರಿಟೆಬಲ್ ಟ್ರಸ್ಟ್, ನಾರಾಯಣ ಸೇವಾ ಸಂಸ್ಥಾನ, ಶ್ರೀ ಗುರು ಪುಷ್ಕರ ಜೈನ್ ಸೇವಾ ಸಮಿತಿ ಬಳ್ಳಾರಿ ಸಹಯೋಗದೊಂದಿಗೆ ನಡೆದ ವಿಕಲಚೇತನರಿಗೆ ಮಾಡ್ಯುಲರ್ ಕೃತಕ ಕೈ ಮತ್ತು ಕಾಲಿನ ಅಂಗಗಳ ವಿತರಣಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ಸ್ವಾರ್ಥವೇ ತುಂಬಿರುವ ಸಮಾಜದಲ್ಲಿ ನಿಸ್ವಾರ್ಥ ಸೇವೆ ಮಾಡುವ ಇಂತಹ ಸೇವಾ ಸಂಸ್ಥೆಗಳ ಸೇವೆ ಮೆಚ್ಚುವಂತಹದ್ದು. ರಾಜಕಾರಣಿಗಳು ಚುನಾವಣೆಯಲ್ಲಿ ಗೆಲ್ಲುವುದಕೊಸ್ಕರ ಸಾಮಾಜಿಕ ಕಾರ್ಯಕ್ರಮಗಳನ್ನು ಮಾಡುತ್ತಾರೆ.

ಆದರೆ ಇಂತಹ ಸೇವಾ ಸಂಸ್ಥೆಗಳ ಕಾರ್ಯ ದೇವರೇ ಮೆಚ್ಚುವಂತಹದ್ದಾಗಿದೆ. ಯಾವುದೇ ಜಾತಿ, ಭೇಧವಿಲ್ಲದೆ ಸುಮಾರು ೪೦೦ ಜನರಿಗೆ ಕೃತಕ ಅಂಗಾಂಗಗಳ ಜೋಡಣೆಯನ್ನು ಮಾಡುತ್ತಿದ್ದಾರೆ. ಎಲ್ಲವನ್ನೂ ಸರ್ಕಾರವೇ ಮಾಡಲು ಸಾಧ್ಯವಿಲ್ಲದ್ದರಿಂದ ಇದರ ಜೊತೆಗೆ ದಾನಿಗಳು ಸಹ ಕೈಜೋಡಿಸಬೇಕು. ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚು ಜನರಿಗೆ ಕೃತಕ ಅಂಗಾಂಗಗಳ ಅವಶ್ಯಕತೆ ಇದ್ದು, ನನ್ನ ಕಡೆಯಿಂದ ವೈಯಕ್ತಿಕವಾಗಿ ೧ ಲಕ್ಷ ರೂಗಳ ದೇಣಿಗೆಯನ್ನು ನೀಡುವುದಾಗಿ ತಿಳಿಸಿದರು.

ಈ ಸಂದರ್ಭದಲ್ಲಿ ಲಯನ್ ಹೇಮಂತ್‌ಕುಮಾರ್‌ಬನ್ಸಾಲಿ, ಶಾಸಕ ಶ್ರೀವತ್ಸ, ಮಾಜಿ ನಗರಪಾಲಿಕೆ ಸದಸ್ಯ ಶಿವಣ್ಣ, ಟಿ.ಸುರೇಶ್ ಗೋಲ್ಡ್, ಲಯನ್ಸ್ ಸುಬ್ರಹ್ಮಣ್ಯ, ಪ್ರಮೀಳಾ ಎಸ್. ಆಚಾರ್, ಮುಖೇಶ್‌ಕುಮಾರ್ ಶರ್ಮ, ಅಶೋಕ್ ಭಂಢಾರಿ, ಗುರುರಾಜ್, ವಿನೋದ್ ತಿವಾರಿ, ವಿಜಯಲಕ್ಷ್ಮಿ, ಮದನ್ ಲಾಲ್ ಮಾರೋ, ಮಹಾವೀರ್ ಚಂದ್ ಬನ್ಸಾಲಿ, ಜಿಲ್ಲಾ ವಯಸ್ಕರ ಶಿಕ್ಷಣ ಸಮಿತಿಯ ನಿವೃತ್ತ ಅಧಿಕಾರಿ ಡಾ.ಕೆ.ಶಂಕರೇಗೌಡ ಕಾರ್ಯಕ್ರಮ ನಿರೂಪಿಸಿದರು.

RELATED ARTICLES
- Advertisment -
Google search engine

Most Popular