Saturday, April 19, 2025
Google search engine

Homeಅಪರಾಧವಿಮಾನ ನಿಲ್ದಾಣದಲ್ಲಿ ೨೬ಕೋಟಿ ಕೊಕೇನ್ ವಶ: ಮಹಿಳೆ ಬಂಧನ

ವಿಮಾನ ನಿಲ್ದಾಣದಲ್ಲಿ ೨೬ಕೋಟಿ ಕೊಕೇನ್ ವಶ: ಮಹಿಳೆ ಬಂಧನ

ಬೆಂಗಳೂರು: ಇಲ್ಲಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ೨೬ ಕೋಟಿ ರೂಪಾಯಿ ಮೌಲ್ಯದ ಕೊಕೇನ್‌ನೊಂದಿಗೆ ಕೀನ್ಯಾ ಮೂಲದ ಮಹಿಳೆಯನ್ನು ಕಂದಾಯ ಗುಪ್ತಚರ ನಿರ್ದೇಶನಾಲಯ(ಡಿಆರ್‌ಐ) ಬಂಧಿಸಿದೆ. ದೇವನಹಳ್ಳಿ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಖಚಿತವಾದ ಮಾಹಿತಿಯನ್ನು ಆಧರಿಸಿ ಕಾರ್ಯಾಚರಣೆ ಕೈಗೊಂಡ ಕಂದಾಯ ಗುಪ್ತಚರ ನಿರ್ದೇಶನಾಲಯದ ಅಧಿಕಾರಿಗಳು ೨.೬ ಕೆಜಿ ಕೊಕೇನ್ ಸಮೇತ ಮಹಿಳೆಯನ್ನು ಬಂಧಿಸಿದ್ದಾರೆ.

ಪ್ರವಾಸಿ ವೀಸಾ ಮೆರೆಗೆ ಭಾರತಕ್ಕೆ ಬಂದಿದ್ದ ಕೀನ್ಯಾ ಮೂಲದ ೩೬ ವರ್ಷದ ಮಹಿಳೆ ದೇವನಹಳ್ಳಿ ಬಳಿಯ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇಂಡಿಗೋ ವಿಮಾನ ಮೂಲಕ ದೆಹಲಿಗೆ ತೆರಳಲು ಚೆಕ್ ಇನ್ ಆಗುತ್ತಿದ್ದಾಗ ಬಂಧಿಸಲಾಗಿದೆ. ಕೊಕೈನ್ ಸಮೇತ ಮಹಿಳೆಯನ್ನು ವಶಕ್ಕೆ ಪಡೆದ ಅಧಿಕಾರಿಗಳು ಬೆಂಗಳೂರಿನ ಡಿಆರ್‌ಐ ಕಚೇರಿಯಲ್ಲಿ ವಿಚಾರಣೆ ನಡೆಸುತ್ತಿದ್ದಾರೆ.

RELATED ARTICLES
- Advertisment -
Google search engine

Most Popular