ವರದಿ: ವಿನಯ್ ದೊಡ್ಡಕೊಪ್ಪಲು
ಕೆ.ಆರ್.ನಗರ: ಕಾಯಕ ತತ್ವವನ್ನು ಆಳಿದ ಜಗಜ್ಯೋತಿ ಬಸವೇಶ್ವರರ ಕಾಲದ ಯೋಗಿ ಡಾ.ಶಿವಕುಮಾರ್ ಎಂದು ಶಾಸಕ ಡಿ.ರವಿಶಂಕರ್ ಹೇಳಿದರು. ಪಟ್ಟಣದ ಲಿಂಗಾಯತ ಸಂಘಟನಾ ವೇದಿಕೆಯ ಮಹಿಳಾ ಮತ್ತು ಪುರುಷ ಘಟಕಗಳ ವತಿಯಿಂದ ಬಸವೇಶ್ವರ ಬಡಾವಣೆಯ ಮಹದೇಶ್ವರ ದೇವಸ್ಥಾನದ ಆವರಣದಲ್ಲಿ ನಡೆದ ಶಿವಕುಮಾರ ಸ್ವಾಮಿಗಳ ಪುಣ್ಯ ಸ್ಮರಣೆ, ದಾಸೋಹ ದಿನಾಚರಣೆ ಹಾಗೂ ಪ್ರತಿಭಾ ಪುರಸ್ಕಾರದ ಸಾನ್ನಿಧ್ಯ ವಹಿಸಿ ಮಾತನಾಡಿದರು.
ತುಮಕೂರಿನ ಸಿದ್ದಗಂಗಾ ಮಠವು ನಾಡಿನ ಎಲ್ಲ ಮಠಗಳಿಗೆ ದಾರಿದೀಪವಾಗಿದ್ದು, ನಾವೆಲ್ಲರೂ ಸಿದ್ದಗಂಗಾ ಶ್ರೀಗಳ ಆದರ್ಶಗಳನ್ನು ತಪ್ಪದೇ ಪಾಲಿಸಬೇಕು ಎಂದು ನುಡಿದರು.ಬಡವರ, ನೊಂದವರಿಗೆ ಅಕ್ಷರ, ಅನ್ನ ನೀಡುವ ಮೂಲಕ ಅವರ ಸುಧಾರಣೆಗೆ ನೆರವಾದ ಸಿದ್ದಗಂಗಾ ಶ್ರೀಗಳು. , ಶಿಕ್ಷಣ, ದಾಸೋಹ, ಅವರ ಆಶೀರ್ವಾದ ಸದಾ ನಮ್ಮನ್ನು ಕಾಯುತ್ತಿದೆ ಎಂದರು.ತಾಲೂಕು ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಸಿ.ಪಿ.ರಮೇಶ್ ಮಾತನಾಡಿ, ಸಮಾನತೆಯ ಸಮಾಜ ನಿರ್ಮಾಣಕ್ಕೆ ತಮ್ಮ ಜೀವನವನ್ನೇ ಮುಡಿಪಾಗಿಟ್ಟು ದಾಸೋಹ ಸಂಸ್ಕೃತಿಯನ್ನು ನಾಡಿಗೆ ಪರಿಚಯಿಸಿದ ಶಿವಕುಮಾರ ಮಹಾಸ್ವಾಮಿಗಳು ಭಗವಂತನ ಕೃಪೆಗೆ ಪಾತ್ರರಾದ ಮಹಾನುಭಾವರು ಎಂದರು.
ಈ ಸಂದರ್ಭದಲ್ಲಿ ಶಾಸಕ ಡಿ.ರವಿಶಂಕರ್, ವೀರಶೈವ ಲಿಂಗಾಯತ ಸಂಘಟನೆ ವೇದಿಕೆಯ ಜಿಲ್ಲಾ ಉಪಾಧ್ಯಕ್ಷರಾಗಿ ನೇಮಕಗೊಂಡ ಸಿ.ಪಿ.ರಮೇಶ್ ಕುಮಾರ್ ಅವರನ್ನು ಸನ್ಮಾನಿಸಿ, ಪ್ರತಿಭಾನ್ವಿತ ವಿದ್ಯಾರ್ಥಿನಿಯರನ್ನು ಸನ್ಮಾನಿಸಲಾಯಿತು.ವೀರಶೈವ ಲಿಂಗಾಯತ ಸಂಘಟನಾ ವೇದಿಕೆ ಮಹಿಳಾ ಘಟಕದ ಅಧ್ಯಕ್ಷೆ ರೇಖಾರವೀಂದ್ರ, ಪುರುಷ ಘಟಕದ ಅಧ್ಯಕ್ಷ ಕೆ.ಎಸ್.ರಾಜು, ಉಪಾಧ್ಯಕ್ಷ ಅಧ್ಯಕ್ಷರಾದ ಕುಸುಮಾಮಹೇಶ್, ಭಾರತಿಶಿವಕುಮಾರ್, ಪ್ರಧಾನ ಕಾರ್ಯದರ್ಶಿ ಲತಾಸುಭಾಷ್, ಸಂಘಟನಾ ಕಾರ್ಯದರ್ಶಿ ಈ ಸಂದರ್ಭದಲ್ಲಿ ಶಾಸಕ ಡಿ.ರವಿಶಂಕರ್, ವೀರಶೈವ ಲಿಂಗಾಯತ ಸಂಘಟನೆಯ ವೇದಿಕೆಯ ಜಿಲ್ಲಾ ಉಪಾಧ್ಯಕ್ಷರಾಗಿ ನೇಮಕಗೊಂಡ ಸಿ.ಪಿ.ರಮೇಶ್ ಕುಮಾರ್ ಅವರನ್ನು ಸನ್ಮಾನಿಸಿ, ಪ್ರತಿಭಾನ್ವಿತ ವಿದ್ಯಾರ್ಥಿನಿಯರನ್ನು ಸನ್ಮಾನಿಸಲಾಯಿತು.
ವೀರಶೈವ ಲಿಂಗಾಯತ ಸಂಘಟನಾ ವೇದಿಕೆ ಮಹಿಳಾ ಘಟಕದ ಅಧ್ಯಕ್ಷೆ ರೇಖಾರವೀಂದ್ರ, ಪುರುಷ ಘಟಕದ ಅಧ್ಯಕ್ಷ ಕೆ.ಎಸ್.ರಾಜು, ಉಪಾಧ್ಯಕ್ಷರು. ಕುಸುಮಾಮಹೇಶ್, ಭಾರತಿಶಿವಕುಮಾರ್, ಪ್ರಧಾನ ಕಾರ್ಯದರ್ಶಿ ಲತಾಸುಭಾಷ್, ಸಂಘಟನಾ ಕಾರ್ಯದರ್ಶಿಗಳಾದ ಶೋಭಾಪ್ರಕಾಶ್, ರೂಪತೀಶ್, ಪ್ರಮೋದಮಹದೇವ್ ವಕ್ತಾರ ರತ್ನಮ್ಮ, ಸಂಚಾಲಕರಾದ ಜಮುನಾ, ಶಶಿಕಲಾ, ಜಿಲ್ಲಾ ಉಪಾಧ್ಯಕ್ಷ ಶೋಭಪ್ಪ, ತೋಟ. ಪುರಸಭೆ ಸದಸ್ಯೆ ವೀಣಾ ವೃಷಬೇಂದ್ರ, ನಗರ ಯೋಜನಾ ಪ್ರಾಧಿಕಾರದ ಮಾಜಿ ನಿರ್ದೇಶಕ ಕೆ.ಎಸ್.ಮಹೇಶ್, ಗುಬ್ಬಿ ತೋಟದಪ್ಪ ವಿದ್ಯಾರ್ಥಿ ನಿಲಯ ಅಧ್ಯಕ್ಷ ಚಂದ್ರಶೇಖರ್, ಮಲೆ ಮಹದೇಶ್ವರ ದೇವಸ್ಥಾನ ಟ್ರಸ್ಟ್ ನಿರ್ದೇಶಕ ಎಸ್.ವಿ.ಎಸ್.ಸುರೇಶ್ ಮತ್ತಿತರರು ಉಪಸ್ಥಿತರಿದ್ದರು.