Tuesday, April 22, 2025
Google search engine

Homeಸ್ಥಳೀಯಮೈಸೂರು ಫೆಸ್ಟ್: ಸ್ಥಳದಲ್ಲೇ ಚಿತ್ರ ಬಿಡಿಸಿ ಬೈಸಿಕಲ್ ಗೆಲ್ಲಿ

ಮೈಸೂರು ಫೆಸ್ಟ್: ಸ್ಥಳದಲ್ಲೇ ಚಿತ್ರ ಬಿಡಿಸಿ ಬೈಸಿಕಲ್ ಗೆಲ್ಲಿ

ಮೈಸೂರು: ಮೈಸೂರು ಫೆಸ್ಟ್ ಕಾರ್ಯಕ್ರಮದ ಪ್ರಯುಕ್ತ “ನಮ್ಮ ಪರಂಪರೆ, ನಿಮ್ಮ ತಾಣ” (“our heritage, your destination) ಮೈಸೂರು ಪ್ರವಾಸೋದ್ಯಮವನ್ನು ಪ್ರತಿಬಿಂಬಿಸುವ ಚಿತ್ರಕಲಾ ಸ್ಪರ್ಧೆ ಕಾರ್ಯಕ್ರಮವನ್ನು ಪ್ರವಾಸೋದ್ಯಮ ಇಲಾಖೆಯಿಂದ ಜ. 27 ರಂದು ಮೈಸೂರು ವಿಶ್ವವಿದ್ಯಾನಿಲಯದ ಗಣಿತ ಶಾಸ್ತ್ರ ವಿಭಾಗದ ಮುಂಭಾಗ ಬೆಳಗ್ಗೆ 9.30 ರಿಂದ 11.೦೦ ಗಂಟೆವರೆಗೆ ನಡೆಸಲಾಗುತ್ತದೆ.

8 ರಿಂದ 12ನೇ ತರಗತಿಯ ಆಸಕ್ತ ವಿದ್ಯಾರ್ಥಿಗಳು ಅರ್ಜಿಗಳನ್ನು https://forms.gle/BbWdJUzv1uFAeuXb8 ಲಿಂಕ್ನ ಮೂಲಕ ಸಲ್ಲಿಸಬಹುದಾಗಿದ್ದು, ಸ್ಥಳ ನೋಂಣಿಗೆ ಅವಕಾಶವಿರುತ್ತದೆ. ಸ್ಪರ್ಧೆಯಲ್ಲಿ ವಿಜೇತರಾದ ಮೊದಲ ಮೂರು ಸ್ಪರ್ಧಿಗಳಿಗೆ ಬೈಸಿಕಲ್, ಟ್ರೋಫಿ ಹಾಗೂ ಪ್ರಮಾಣ ಪತ್ರವನ್ನು ವಿತರಿಸಲಾಗುವುದು. ಸ್ಪರ್ಧೆಯಲ್ಲಿ ಭಾಗವಹಿಸಿದ ಎಲ್ಲಾ ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರ ನೀಡಲಾಗುತ್ತದೆ.

ಹೆಚ್ಚಿನ ಮಾಹಿತಿಗಾಗಿ 7411564510 ಅನ್ನು ಹಾಗೂ ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂ visit_mysuru ಪೇಜನ್ನು ಫಾಲೋ ಮಾಡಿ ಎಂದು ಪ್ರವಾಸೋದ್ಯಮ ಇಲಾಖೆ ಸಹಾಯಕ ನಿರ್ದೇಶಕರಾದ ಟಿ.ಕೆ. ಹರೀಶ್ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

RELATED ARTICLES
- Advertisment -
Google search engine

Most Popular