Saturday, April 19, 2025
Google search engine

Homeರಾಜ್ಯಸುದ್ದಿಜಾಲನೂತನ ಅಧ್ಯಕ್ಷರಾಗಿ ಯೋಗೇಶ್ ಆಯ್ಕೆ

ನೂತನ ಅಧ್ಯಕ್ಷರಾಗಿ ಯೋಗೇಶ್ ಆಯ್ಕೆ

ವರದಿ : ವಿನಯ್ ದೊಡ್ಡಕೊಪ್ಪಲು
ಕೆ.ಆರ್.ನಗರ
: ಸಾಲಿಗ್ರಾಮ ತಾಲೂಕಿನ ತಂದ್ರೆ ಅಂಕನಹಳ್ಳಿ  ಗ್ರಾಮದಲ್ಲಿ ನಡೆದ ಹಾಲು ಉತ್ಪಾದಕರ ಸಹಕಾರ ಸಂಘದ ನೂತನ ಅಧ್ಯಕ್ಷರಾಗಿ ಯೋಗೇಶ್ ಆಯ್ಕೆಯಾಗಿದ್ದಾರೆ.
ಸಂಘದ ಕಚೇರಿಯಲ್ಲಿ ನಡೆದ ಚುನಾವಣೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ದಿಸಿದ್ದ ಯೋಗೇಶ್ 8 ಮತಗಳನ್ನು ಪಡೆದು ಗೆಲುವು ಸಾಧಿಸಿದರೆ, ಪ್ರತಿ ಸ್ಪರ್ಧಿಯಾಗಿದ್ದ ನಾಗೇಂದ್ರ ರವರು ಕೇವಲ 1 ಮತ ಪಡೆಯುವುದರ ಮೂಲಕ ಪರಾಭವಗೊಂಡರು . ಚುನಾವಣಾ ಸಭೆಯಲ್ಲಿ ಒಟ್ಟು 10 ನಿರ್ದೇಶಕರಲ್ಲಿ 9 ಮಂದಿ ಭಾಗವಹಿಸಿ, ಒರ್ವ ಗೈರು ಹಾಜರಾಗಿದ್ದರು.ಉಪಾಧ್ಯಕ್ಷ ಸ್ಥಾನಕ್ಕೆ ಶಿವಣ್ಣ ರವರು ಒಬ್ಬರೇ ನಾಮಪತ್ರ ಸಲ್ಲಿಸಿದ್ದರಿಂದ ಅವರು ಅವಿರೋಧವಾಗಿ ಆಯ್ಕೆ ಯಾದರು.
ಚುನಾವಣಾಧಿಕಾರಿಯಾಗಿ ಸಿ.ಆರ್.ಪಿ ಶಂಕರೇಗೌಡ ಕಾರ್ಯ ನಿರ್ವಹಿಸಿದ್ದರು. ಈ ಸಂದರ್ಭದಲ್ಲಿ ಸಂಘದ ನಿರ್ದೇಶಕರಾದ ಯೋಗೇಶ್, ರಾಜಶೇಖರ್, ನಾಗೇಂದ್ರ, ಶಿವಣ್ಣ, ಪಾಲಾಕ್ಷ, ರುದ್ರೇಶ್, ನೀಲಮ್ಮ, ಗೌರಮ್ಮ, ಸಿದ್ದನಾಯಕ,  ಕಾರ್ಯದರ್ಶಿ  ಕಾರ್ತಿಕ್, ತಾಲೂಕು ಪಂಚಾಯತಿ ಮಾಜಿ ಸದಸ್ಯ ರಘು, ಬಸವರಾಜ್ , ನಟೇಶ್, ಶಿವಣ್ಣ ಸೇರಿದಂತೆ ಇನ್ನಿತರರು ಹಾಜರಿದ್ದರು.

RELATED ARTICLES
- Advertisment -
Google search engine

Most Popular