Monday, April 21, 2025
Google search engine

Homeರಾಜ್ಯಏಪ್ರಿಲ್ ೧೬ಕ್ಕೆ ಲೋಕಸಭೆ ಚುನಾವಣೆ !: ಸಿದ್ಧತೆಗೆ ತಾತ್ಕಾಲಿಕ ದಿನಾಂಕ ಪ್ರಕಟ, ಚುನಾವಣಾ ಆಯೋಗ

ಏಪ್ರಿಲ್ ೧೬ಕ್ಕೆ ಲೋಕಸಭೆ ಚುನಾವಣೆ !: ಸಿದ್ಧತೆಗೆ ತಾತ್ಕಾಲಿಕ ದಿನಾಂಕ ಪ್ರಕಟ, ಚುನಾವಣಾ ಆಯೋಗ

ನವದೆಹಲಿ: ದೆಹಲಿ ಮುಖ್ಯ ಚುನಾವಣಾ ಅಧಿಕಾರಿಯ ಕಚೇರಿಯು ಆಂತರಿಕ ಅಧಿಸೂಚನೆ ಬಹಿರಂಗವಾಗಿದ್ದು, ಅದರಲ್ಲಿ ಏಪ್ರಿಲ್ ೧೬ರಂದು ಲೋಕಸಭೆ ಚುನಾವಣೆ ನಡೆಸಲಿದೆ ಎಂದು ಹೇಳಲಾಗಿದೆ. ಈ ಅಧಿಸೂಚನೆಯ ಪ್ರತಿ ವೈರಲ್ ಆಗಿದ್ದು, ಈ ಬಗ್ಗೆ ಸ್ಪಷ್ಟನೆ ನೀಡಿದ ಮುಖ್ಯ ಚುನಾವಣಾ ಆಯೋಗ, ಚುನಾವಣಾ ಆಯೋಗದ ಅಧಿಕಾರಿಗಳ ಕರ್ತವ್ಯ ಪಾಲನೆಗೆ ಸಿದ್ಧತೆ ಮಾಡಿಕೊಳ್ಳಲು ತಾತ್ಕಾಲಿಕ ದಿನಾಂಕವನ್ನು ಪ್ರಕಟಿಸಲಾಗಿದೆ ಎಂದು ಹೇಳಿದೆ.

ಈ ಬಗ್ಗೆ ಪ್ರತಿಕ್ರಿಯಿಸಿದ ಮುಖ್ಯ ಚುನಾವಣಾಧಿಕಾರಿಗಳ ಕಚೇರಿ, ಚುನಾವಣೆಗೆ ತಯಾರಿ ನಡೆಸಲು ಹಾಗೂ ಎಲ್ಲ ಅಧಿಕಾರಿಗಳು ಚುನಾವಣಾ ಕಾರ್ಯಯೋಜನೆಯನ್ನು ರೂಪಿಸಿಕೊಳ್ಳಲು ತಾತ್ಕಾಲಿಕ ದಿನಾಂಕವನ್ನು ನಿಗದಿಪಡಿಸಲಾಗಿದೆ ಎಂದು ಸ್ಪಷ್ಟಪಡಿಸಿದೆ. ಏಪ್ರಿಲ್ ೧೬ರಿಂದ ಲೋಕಸಭೆ ಚುನಾವಣೆಯ ಪ್ರಕಿಯೆಗಳು ಆರಂಭವಾಗಲಿವೆ. ಈ ಕಾರಣಕ್ಕೆ ದೆಹಲಿಯ ೧೧ ಜಿಲ್ಲೆಗಳಲ್ಲಿರುವ ಚುನಾವಣಾ ಅಧಿಕಾರಿಗಳಿಗೆ ಲೋಕಸಭೆ ಚುನಾವಣೆಗೆ ಸಿದ್ಧತೆ ಮಾಡಿಕೊಳ್ಳುವಂತೆ ಆದೇಶ ಹೊರಡಿಸಲಾಗಿದೆ ಎಂದು ಚುನಾವಣಾ ಆಯೋಗ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದೆ.

RELATED ARTICLES
- Advertisment -
Google search engine

Most Popular