ಗುಂಡ್ಲುಪೇಟೆ: ತಾಲೂಕಿನ ಮಡಹಳ್ಳಿ ಗ್ರಾಮದ ಹೊರ ವಲಯದ ಮೂವರು ರೈತರ ನೀರಾವರಿ ಜಮೀನುಗಳಲ್ಲಿ ಕೇಬಲ್ ಕಳ್ಳತನ ನಡೆದಿದೆ. ಗ್ರಾಮದ ಗುರುಸ್ವಾಮಿ, ಚಿನ್ನಾರಿಮುತ್ತ, ಕಿರಣ್ ಎಂಬುವರ ಜಮೀನುಗಳಲ್ಲಿ ಕಳ್ಳರು ಕೇಬಲ್ ಕಳ್ಳತನ ಮಾಡಿದ್ದಾರೆ.
ರೈತರ ಚಲನವಲನದ ಮೇಲೆ ನಿಗಾ ಇಡುವ ಮೂಲಕ ವ್ಯವಸ್ಥಿತ ರೀತಿಯಲ್ಲಿ ಕಳ್ಳತನ ಮಾಡಲಾಗುತ್ತಿದೆ. ವಿದ್ಯುತ್ ಸಂಪರ್ಕ ಕಡಿತ ಮಾಡಿದ ನಂತರ ಕೇಬಲ್ ಕಳವು ಮಾಡುತ್ತಿದ್ದಾರೆ. ಕಿರಣ್ ಎಂಬುವರ ಜಮೀನಿನಲ್ಲಿ ಕೃಷಿ ಹೊಂಡಕ್ಕೆ ಅಳವಡಿಸಿರುವ ಮೋಟಾರ್ ಕಳವಿಗೂ ಯತ್ನ ನಡೆದಿದೆ.
ಈಚೆಗೆ ಗ್ರಾಮದ ಎಂ.ಎಸ್.ನಾಗಮಲ್ಲಪ್ಪ ಮತ್ತು ಸೋಮೇಶ್ ಎಂಬ ರೈತರ ಜಮೀನುಗಳಲ್ಲಿ ಕೇಬಲ್ ಕಳವು ನಡೆದಿತ್ತು. ಈಗ ಇನ್ನೊಂದು ಭಾಗದಲ್ಲಿ ಕಳ್ಳತನ ನಡೆದಿದೆ. ಆದ್ದರಿಂದ ಪೊಲೀಸರು ಈ ಬಗ್ಗೆ ಕ್ರಮ ಕೈಗೊಳ್ಳಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.