Monday, April 21, 2025
Google search engine

Homeಅಪರಾಧಕಾನೂನುಡಾ.ಬಿ.ಆರ್. ಅಂಬೇಡ್ಕರ್ ಪುತ್ಥಳಿಗೆ ಅಪಮಾನ: ನಾಲ್ವರ ಬಂಧನ

ಡಾ.ಬಿ.ಆರ್. ಅಂಬೇಡ್ಕರ್ ಪುತ್ಥಳಿಗೆ ಅಪಮಾನ: ನಾಲ್ವರ ಬಂಧನ

ಕಲಬುರಗಿ: ಕೋಟನೂರ (ಡಿ) ಪ್ರದೇಶದ ಲುಂಬಿಣಿ ಉದ್ಯಾನದಲ್ಲಿನ ಡಾ.ಬಿ.ಆರ್. ಅಂಬೇಡ್ಕರ್ ಪುತ್ಥಳಿಗೆ ಅಪಮಾನ ಮಾಡಿದ ಪ್ರಕರಣ ಸಂಬಂಧ ಪೊಲೀಸರು ನಾಲ್ವರು ಆರೋಪಿಗಳನ್ನು ಬಂಧಿಸಿ, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

ವಿಶ್ವವಿದ್ಯಾಲಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಆರೋಪಿಗಳ ಯಾವುದೇ ಮಾಹಿತಿ ಹಂಚಿಕೊಂಡಿಲ್ಲ. ಸೂಕ್ತ ತನಿಖೆಯ ಬಳಿಕ ಆರೋಪಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

ಕಲಂ 295 ಐಪಿಸಿ ಹಾಗೂ 3(1)(ಯು)(ವಿ)(ಟಿ) ಎಸ್‌ಸಿ/ಎಸ್‌ಟಿ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಸಾರ್ವಜನಿಕರು  ಹಾಗೂ ಸಂಘ ಸಂಸ್ಥೆಗಳು ಶಾಂತತೆಯನ್ನು ಕಾಪಾಡಬೇಕು ಎಂದು ಪೊಲೀಸರು ಕೋರಿದ್ದಾರೆ.

ಪ್ರಕರಣದ ಬಗ್ಗೆ ಚರ್ಚಿಸಲು ದಲಿತ ಮುಖಂಡರು, ಹೋರಾಟಗಾರರು ಇಂದು‌ ಸಂಜೆ 4.30 (ಬುಧವಾರ) ಲುಂಬಿಣಿ ಉದ್ಯಾನದ ಪುತ್ಥಳಿ ಆವರಣದಲ್ಲಿ ಸಭೆ ನಡೆಸುವರು.

RELATED ARTICLES
- Advertisment -
Google search engine

Most Popular