ಯಳಂದೂರು: ಹಿಂದುಳಿದ ವರ್ಗಗಳ ಒಕ್ಕೂಟದ ಜಿಲ್ಲಾಧ್ಯಕ್ಷರಾಗಿ ಮಂಗಲ ಶಿವಕುಮಾರ್ ಅವಿರೋಧವಾಗಿ ಆಯ್ಕೆಯಾದರು. ಈ ಸಂಬಂಧ ಸಂತೆಮರಹಳ್ಳಿ ಸಮೀಪದ ವಿಂಟೇಜ್ ಇನ್ ಫ್ಯಾಮಿಲಿ ರೆಸ್ಟೋರೆಂಟ್ ಸಭಾಂಗಣದಲ್ಲಿ ಹಿಂದುಳಿದ ವರ್ಗಗಳ ಒಕ್ಕೂಟದ ಹಮ್ಮಿಕೊಂಡಿದ್ದ ಸಭೆಯಲ್ಲಿ ಇವರನ್ನು ಅವಿರೋಧವಾಗಿ ಆಯ್ಕೆ ಮಾಡಲಾಯಿತು.
ಈ ಸಂದರ್ಭದಲ್ಲಿ ನೂತನ ಅಧಕ್ಷ ಮಂಗಲ ಶಿವಕುಮಾರ್ ಮಾತನಾಡಿ, ಜಿಲ್ಲೆಯಲ್ಲಿ ಹಿಂದುಳಿದ ವರ್ಗ ಎಲ್ಲಾ ಸೌಲಭ್ಯಗಳಿಂದ ವಂಚಿತವಾಗಿದೆ. ಇದು ದುಡಿಯುವ ವರ್ಗವಾಗಿದೆ. ದೇಶದಲ್ಲಿ ಈ ವರ್ಗದ ಜನಸಂಖ್ಯೆಯೂ ಅಧಿಕವಾಗಿದ್ದು ಅನೇಕ ಸೌಲಭ್ಯಗಳಿಂದ ಇವರು ವಂಚಿತರಾಗಿದ್ದಾರೆ. ಇವರನ್ನು ಸಂಘಟಿಸಿ, ಇವರಿಗೆ ಸಿಗುವ ಎಲ್ಲಾ ಸೌಲಭ್ಯಗಳನ್ನು ಒದಗಿಸುವ ನಿಟ್ಟಿನಲ್ಲಿ, ಮುಂಬರುವ ದಿನಗಳಲ್ಲಿ ಕಾಂತರಾಜ್ ವರದಿಯನ್ನು ಜಾರಿಗೆ ಮಾಡುವಲ್ಲಿ ಒತ್ತಡ ಹೇರುವ ಸಲುವಾಗಿ ನಮ್ಮ ಒಕ್ಕೂಟ ಕೆಲಸ ಕೈಗೊಳ್ಳಲಿದೆ ಎಂದರು.
ಕಾರ್ಯಾಧ್ಯಕ್ಷ ವೆಂಕಟೇಶ್ ಮಾತನಾಡಿ, ಜಿಲ್ಲೆಯ ೫ ತಾಲೂಕುಗಳಲ್ಲೂ ಕಾಯಕ ಸಮಾಜದ ಎಲ್ಲಾ ವರ್ಗಗಳ ಜನರನ್ನು ಜೊತೆಗೆ ಕೊಂಡೊಯ್ಯುವ, ಆರ್ಥಿಕ, ಸಾಮಾಜಿ, ರಾಜಕೀಯವಾಗಿ ಹಿಂದುಳಿದವರಿಗೆ ಧ್ವನಿಯಾಗುವ ಕೆಲಸವನ್ನು ಒಕ್ಕೂಟ ಮಾಡಲಿದೆ. ಅಲ್ಲದೆ ಪ್ರತಿ ತಾಲೂಕಿಗೂ ಈ ಒಕ್ಕೂಟವನ್ನು ರಚಿಸಿ ಅದರ ಮೂಲಕ ಸಾಮಾಜಿಕ ನ್ಯಾಯವನ್ನು ಒದಗಿಸಲು ಹೋರಾಟ ಮಾಡಲಾಗುವುದು ಎಂದರು. ಒಕ್ಕೂಟದ ಕಾರ್ಯಾಧ್ಯಕ್ಷರಾಗಿ ವೆಂಕಟೇಶ್ ಪ್ರಧಾನ ಕಾರ್ಯದರ್ಶಿಗಳಾಗಿ ರಾಮಶೆಟ್ಟಿ, ನಟರಾಜ್ ಗೌಡ, ಶಿವಮೂರ್ತಿ ಉಪಾಧ್ಯಕ್ಷರಾಗಿ ವೈ.ಕೆ. ಮೋಳೆ ನಾಗರಾಜು, ಬೂದಿತಿಟ್ಟು ಲಕ್ಷ್ಮಣ್, ವೆಂಕಟರಾಮು, ಅರಸುಶೆಟ್ಟಿ, ಸೋಮಣ್ಣ, ಕಾರ್ಯಕಾರಿಣಿ ಸದಸ್ಯರಾಗಿ ವೆಂಕಟ, ಮಹೇಶ್, ಕೃಷ್ಣ, ಸೋಮಣ್ಣ, ದೊಡ್ಡರಾಜು, ನಾಗರಾಜುರನ್ನು ಆಯ್ಕೆ ಮಾಡಲಾಯಿತು. ಮುಖಂಡರಾದ ಸೋಮಣ್ಣ ಉಪ್ಪಾರ್, ಮಹೇಶ್, ಕೃಷ್ಣ, ವೈ.ಕೆ. ರಾಜು, ಲೋಕೇಶ್‌ಜಟ್ಟಿ, ಬಸವರಾಜು ಸೇರಿದಂತೆ ಅನೇಕರು ಇದ್ದರು.