Monday, April 21, 2025
Google search engine

Homeರಾಜ್ಯಸುದ್ದಿಜಾಲ‘ನಮ್ಮ‌ ನಡೆ‌ ಸ್ವಚ್ಛ ಗುಂಡ್ಲುಪೇಟೆ ‌ಕಡೆ’ ಅಭಿಯಾನಕ್ಕೆ ಚಾಲನೆ

‘ನಮ್ಮ‌ ನಡೆ‌ ಸ್ವಚ್ಛ ಗುಂಡ್ಲುಪೇಟೆ ‌ಕಡೆ’ ಅಭಿಯಾನಕ್ಕೆ ಚಾಲನೆ

ಗುಂಡ್ಲುಪೇಟೆ: ಪುರಸಭೆ ಕಾರ್ಯಲಯ ಗುಂಡ್ಲುಪೇಟೆ‌  ವತಿಯಿಂದ‌ ನಡೆಸುತ್ತಿರುವ “ನಮ್ಮ‌ ನಡೆ‌ ಸ್ವಚ್ಛ ಗುಂಡ್ಲುಪೇಟೆ ‌ಕಡೆ” ಕಾರ್ಯಕ್ರಮದ ಭಾಗವಾಗಿ ಇಂದು  ವಾರ್ಡ್ ನಂಬರ್ 22 ಜನತಾ ಕಾಲೋನಿಯಲ್ಲಿ ವಾರ್ಡ್ ‌ಕೌನ್ಸಿಲರ್ ರಮೇಶ್ ರವರ ನೇತೃತ್ವದಲ್ಲಿ  ಜನತಾ‌ ಕಾಲೋನಿಯ ಅರಳಿಮರ ಪಾರ್ಕ್ ನ ಬಳಿ ಸ್ವಚ್ಚತಾ ಶ್ರಮದಾನ ಮಾಡಿ, ಗಿಡ ನೆಡುವುದರ ಮೂಲಕ ಅಭಿಯಾನಕ್ಕೆ ಚಾಲನೆ ನೀಡಲಾಯಿತು.

ವಾರ್ಡ್ ನ ಪ್ರತಿ ಮನೆ-ಮನೆಗಳಿಗು ತೆರಳಿ ಕರಪತ್ರವನ್ನು ನೀಡಿ ಕಸ ವಿಂಗಡಣೆ, ವಿಲೇವಾರಿ, ಏಕ ಬಳಕೆ ಪ್ಲಾಸ್ಟಿಕ್ ನಿಷೇಧ ಕುರಿತು ಜಾಗೃತಿ ಮೂಡಿಸಿದರು.

ಮುಂದಿನ ದಿನ ಗಳಲ್ಲಿ ಕಸ ನಿರ್ವಹಣೆಗೆ ಸಹಕರಿಸದ ಸಾರ್ವಜನಿಕರಿಗೆ ದಂಡ ವಿಧಿಸುವ ಬಗ್ಗೆ, ನಿಯಮ ಪಾಲನೆ ಬಗ್ಗೆ ಅರಿವು ಮೂಡಿಸಿ ಸಾರ್ವಜನಿಕರೊಂದಿಗೆ ಸ್ವಚ್ಛತೆ ಕುರಿತು ಪ್ರತಿಜ್ಞಾವಿಧಿ ಬೋಧಿಸಲಾಯಿತು.

ವಾರ್ಡ್ ಕೌನ್ಸಿಲರ್ ರಮೇಶ್, ಪುರಸಭೆ ಮುಖ್ಯಾಧಿ ಕಾರಿ ಕೆ.ಪಿ.ವಸಂತ ಕುಮಾರಿ, ಆರೋಗ್ಯ ನಿರೀಕ್ಷಕ ಗೋಪಿ,ಮಹೇಶ್, ಮತ್ತು ಸಿಬ್ಬಂದಿ ನಮ್ಮ ಗುಂಡ್ಲು ಪೇಟೆ ತಂಡದ ಅರುಣ್, ಪರಶಿವಮೂರ್ತಿ, ಕುಮಾರ್, ಗಣೇಶ್, ತಾರಾ‌ನಾಗೇಂದ್ರ , ಆರ್.ಕೆ‌ ಮಧು ವನ್ಯ ಜೀವಿ ಛಾಯ ಗ್ರಾಹಕರು, ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರು ಶೈಲೇಶ್ ಕುಮಾರ್, ಸಮತಾ ತಂಡ ಮತ್ತು ಅಂಗನವಾಡಿ ,ಆಶಾ ಕಾರ್ಯಕರ್ತೆಯರು ಹಾಗೂ ‌ಸಾರ್ವಜನಿಕರು ಭಾಗವಹಿಸಿದ್ದರು.

RELATED ARTICLES
- Advertisment -
Google search engine

Most Popular