ಮಂಡ್ಯ: ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ನಡೆಯುತ್ತಿರುವ ಅಂಗನವಾಡಿ ಬಿಸಿಯೂಟ ನೌಕರರ ಸಂಸದರ ಕಚೇರಿ ಚಲೋ ಎರಡನೇ ದಿನಕ್ಕೆ ಕಾಲಿಟ್ಟಿದೆ.
ನೆನ್ನೆಯಿಂದ ಹಗಲು-ರಾತ್ರಿ ಪ್ರತಿಭಟನಾ ಧರಣಿ ಆರಂಭಿಸಿರುವ ಜಿಲ್ಲೆಯ ಅಂಗನವಾಡಿ ಬಿಸಿಯೂಟ ನೌಕರರು, ಕಾರ್ಯಕರ್ತರು ಮಂಡ್ಯದ ಡಿಸಿ ಕಚೇರಿ ಬಳಿ ಧರಣಿ ಕುಳಿತಿದ್ದಾರೆ.
ಕೇಂದ್ರ ಸರ್ಕಾರ ಹಾಗೂ ಸಂಸದರ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿರುವ ಪ್ರತಿಭಟನಾಕಾರರು, ಪ್ರತಿಭಟನಾ ಸ್ಥಳಕ್ಕೆ ಸಂಸದೆ ಸುಮಲತಾ ಬರುವಂತೆ ಕಾರ್ಯಕರ್ತ ಆಗ್ರಹಿಸಿದ್ದು, ಸಂಸದರ ಕಚೇರಿ ಬಳಿ ಧರಣಿ ಕುಳಿತು ಮನವಿ ಸ್ವೀಕರಿಸಲು ಆಗ್ರಹಿಸಿದರು.
ಅಂಗನವಾಡಿ, ಬಿಸಿಯೂಟ ನೌಕರರನ್ನ ಖಾಯಂ ಮಾಡಬೇಕು. ಕಾರ್ಮಿಕರ ಪರ ಸಂಸದರು ಧ್ವನಿ ಎತ್ತಬೇಕು. ಸುಮಲತಾ ಸ್ಥಳಕ್ಕೆ ಬಂದು ಮನವಿ ಸ್ವೀಕರಿಸಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದ್ದಾರೆ.