ಮೈಸೂರು : ಸಾಲಭಾಧೆಯಿಂದ ಯುವಕನೊಬ್ಬ ನೇಣುಬಿಗಿದು ಆತ್ಮಹತ್ಯೆಗೆ ಶರಣಾದ ಘಟನೆ ಮೈಸೂರಿನ ವಿದ್ಯಾರಣ್ಯಪುರಂ ಪೊಲೀಸ್ ಠಾಣಾ ವ್ಯಾಪ್ತಿಯ ಮಹದೇವಪುರದಲ್ಲಿ ನಡೆದಿದೆ.
ದರ್ಶನ್(೨೪) ಮೃತ ದುರ್ದೈವಿ. ಕ್ಯಾಟರಿಂಗ್ ನಲ್ಲಿ ಕೆಲಸ ಮಾಡುತ್ತಾ ಕರಸ್ಪಾಂಡೆನ್ಸ್ ಕೋರ್ಸ್ ಮಾಡುತ್ತಿದ್ದ ದರ್ಶನ್ ವ್ಯಾಸಂಗ ಪೂರೈಸಿದ್ದ. ಸಾಕಷ್ಟು ಸಾಲ ಮಾಡಿದ್ದ ದರ್ಶನ್ ಜೀವನದಲ್ಲಿ ಜಿಗುಪ್ಸೆ ಹೊಂದಿ ತನ್ನ ಮನೆಯಲ್ಲೇ ನೇಣಿಗೆ ಶರಣಾಗಿದ್ದಾನೆ. ವಿದ್ಯಾರಣ್ಯಪುರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.