Monday, April 21, 2025
Google search engine

Homeಅಪರಾಧಗಂಗಾ ನದಿಯಲ್ಲಿ ಮಗನನ್ನು ಮುಳುಗಿಸಿದ ಪೋಷಕರು: ಉಸಿರುಗಟ್ಟಿ ಬಾಲಕ ಸಾವು

ಗಂಗಾ ನದಿಯಲ್ಲಿ ಮಗನನ್ನು ಮುಳುಗಿಸಿದ ಪೋಷಕರು: ಉಸಿರುಗಟ್ಟಿ ಬಾಲಕ ಸಾವು

ಉತ್ತರಾಖಂಡ: ಗಂಗಾ ನದಿಯಲ್ಲಿ ಪೋಷಕರು ಮಗನನ್ನು ಮುಳುಗಿಸಿದ ಪರಿಣಾಮ ಬಾಲಕ ಉಸಿರುಗಟ್ಟಿ ಸಾವನ್ನಪ್ಪಿರುವ ಘಟನೆ ಉತ್ತರಾಖಂಡದಲ್ಲಿ ನಡೆದಿದೆ.

ಏಳು ವರ್ಷದ ಮಗ ಕ್ಯಾನ್ಸರ್ ​ನಿಂದ ಬಳಲುತ್ತಿದ್ದ, ಗಂಗಾ ನದಿಯಲ್ಲಿ ಸ್ನಾನ ಮಾಡಿಸಿದರೆ ರೋಗದಿಂದ ಚೇತರಿಕೆ ಕಾಣಬಹುದು ಎಂಬ ಹಂಬಲದಲ್ಲಿದ್ದ ಪೋಷಕರು ನೀರಿನಲ್ಲಿ ನಿಲ್ಲಿಸಿ ಮಗನನ್ನು ಮುಳುಗಿಸಿದ್ದಾರೆ ಆಗ ಬಾಲಕ ಉಸಿರುಗಟ್ಟಿ ಸಾವನ್ನಪ್ಪಿದ್ದಾನೆ.

ಹುಡುಗನ ಪೋಷಕರು ಹರ್ ಕಿ ಪೌರಿ ದಡದಲ್ಲಿ ಮಂತ್ರಗಳನ್ನು ಪಠಿಸುತ್ತಲೇ ಇದ್ದರು, ಆದರೆ ಅವನ ಚಿಕ್ಕಮ್ಮ ಅವನ ಜೋರಾದ ಕೂಗನ್ನು ನಿರ್ಲಕ್ಷಿಸದೆ ಗಂಗಾದಲ್ಲಿ ಪದೇ ಪದೇ ಅದ್ದಿದ್ದಾರೆ ಕೊನೆಗೆ ಉಸಿರುಗಟ್ಟಿ ಸಾವನ್ನಪ್ಪಿದ್ದಾನೆ.

ಪಕ್ಕದಲ್ಲಿದ್ದವರು ಮಹಿಳೆಯನ್ನು ತಡೆಯಲು ಪ್ರಯತ್ನಿಸಿದರು ಆದರೆ ಅವರು ಅವರ ಮಾತನ್ನು ಕೇಳಲು ಸಿದ್ಧರಿರಲಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. ಘಟನೆಯನ್ನು ಪ್ರತ್ಯಕ್ಷದರ್ಶಿಗಳು ಪೊಲೀಸರಿಗೆ ತಿಳಿಸಿದ್ದಾರೆ.

ಮಗುವಿನ ಪೋಷಕರು ಮತ್ತು ಚಿಕ್ಕಮ್ಮನನ್ನು ವಿಚಾರಣೆಗೆ ಒಳಪಡಿಸಲಾಗಿದೆ ಎಂದು ಎಸ್‌ಎಚ್‌ ಒ ತಿಳಿಸಿದ್ದಾರೆ. ಪ್ರಕರಣದ ಕುರಿತು ಹೆಚ್ಚಿನ ವಿಚಾರಣೆ ನಡೆಯುತ್ತಿದೆ.

RELATED ARTICLES
- Advertisment -
Google search engine

Most Popular