Monday, April 21, 2025
Google search engine

Homeರಾಜ್ಯಕಾಂಗ್ರೆಸ್ ಗೆಲುವು ಕಂಡು ಬಿಜೆಪಿಗೆ ಗಾಬರಿಯಾಗಿದೆ: ಸಚಿವ ಎನ್.ಚಲುವರಾಯಸ್ವಾಮಿ ವಾಗ್ದಾಳಿ

ಕಾಂಗ್ರೆಸ್ ಗೆಲುವು ಕಂಡು ಬಿಜೆಪಿಗೆ ಗಾಬರಿಯಾಗಿದೆ: ಸಚಿವ ಎನ್.ಚಲುವರಾಯಸ್ವಾಮಿ ವಾಗ್ದಾಳಿ

ಮಂಡ್ಯ: ಬಿಜೆಪಿ-ಜೆಡಿಎಸ್ ಗೆ ವಿಚಾರಗಳು ಇಲ್ಲ, ಕಾರ್ಯಕ್ರಮ ಕೂಡ ಇಲ್ಲ. ಪಕ್ಷ ಕೆಟ್ಟ ಪರಿಸ್ಥಿತಿ ಎದುರಿಸುತ್ತಿದೆ. ಕಾಂಗ್ರೆಸ್ ಮೇಲೆ ಇಲ್ಲಸಲ್ಲದ ಆರೋಪ ಮಾಡ್ತಾರೆ. ನಮ್ಮ ಪಕ್ಷದಲ್ಲಿ ಯಾವ ಅಸಮಾಧಾನ ಕೂಡ ಇಲ್ಲ, ಒಗ್ಗಟ್ಟಿನಿಂದ ಪಾರ್ಲಿಮೆಂಟ್ ಚುನಾವಣೆ ಎದುರಿಸುತ್ತೇವೆ ಎಂದು ಬಿಜೆಪಿ ವಿರುದ್ದ ಸಚಿವ ಎನ್.ಚಲುವರಾಯಸ್ವಾಮಿ ವಾಗ್ದಾಳಿ ನಡೆಸಿದರು.

ಮಂಡ್ಯದಲ್ಲಿ ನಿಗಮ ಮಂಡಳಿ ಅಧ್ಯಕ್ಷರ ಆಯ್ಕೆ ವಿಚಾರವಾಗಿ ಮಾತನಾಡಿ, ಬಿಜೆಪಿ ಮುಖಂಡರು ಅನಾವಶ್ಯಕವಾಗಿ ಮಾತನಾಡ್ತಾರೆ. ಎಂಎಲ್ ಎಗಳು ಮಂತ್ರಿಯಾಗದಿರುವವರು ಅವರಿಗೂ ಅವಕಾಶ ಕೊಡಬೇಕು ಅಂತ ಒತ್ತಾಯ ಇದೆ. ಆದರಿಂದ ಸ್ವಲ್ಪ ತಡವಾಗಿದೆ ಆದಷ್ಟು ಬೇಗ ಎಲ್ಲಾ ಸರಿಪಡಿಸ್ತೇವೆ ಎಂದರು.

ಅಸ್ಸಾಂ ನಲ್ಲಿ ರಾಹುಲ್ ಗಾಂಧಿ ಯಾತ್ರೆಗೆ ಅಡ್ಡಿ ವಿಚಾರವಾಗಿ ಮಾತನಾಡಿ, ಚಂದ್ರಶೇಖರ್ ನಂತರ ಇಡೀ ರಾಷ್ಟ್ರವನ್ನ ಪ್ರಥಮವಾಗಿ ಸ್ವತಂತ್ರ ನಂತರ ಈ ವಯಸ್ಸಿನಲ್ಲಿ ಯಾರು ಪಾದಯಾತ್ರೆ ಮಾಡಿಲ್ಲ. ಭಾರತದ ಒಗ್ಗಟ್ಟಿಗೆ, ಜನರ ಬದುಕಿಗಾಗಿ ಪಾದಯಾತ್ರೆ ಮಾಡ್ತಿದ್ದಾರೆ. ಆಂದ್ರ ಮತ್ತು ಕರ್ನಾಟಕದಲ್ಲಿ ಫಲಿತಾಂಶ ಬದಲಾವಣೆ ಕಂಡು ಬಿಜೆಪಿಗೆ ಗಾಬರಿಯಾಗಿದೆ. ಅದನ್ನು ಪ್ರೋವಕ್ ಮಾಡ್ತಾರೆ ಅಷ್ಟೆ ಎಂದು ತಿಳಿಸಿದರು.

ಮಂಡ್ಯ ಜಿಲ್ಲೆಗೆ ಕಾಂಗ್ರೆಸ್ ಅಭ್ಯರ್ಥಿ ಆಯ್ಕೆ ವಿಚಾರವಾಗಿ ಮಾತನಾಡಿ, ನಮ್ಮಲ್ಲಿ ಅಂತಿಮ ಹಂತಕ್ಕೆ ತಲುಪಿದ್ದೇವೆ. ಮತ್ತೊಂದು ಬಾರಿ ಶಾಸಕರು, ಮುಖಂಡರು ಚರ್ಚೆ ಮಾಡಿ ಕೆಪಿಸಿಸಿಗೆ ಕೊಡ್ತೇವೆ. ಅವರು ಅಂತಿಮ ಅಭ್ಯರ್ಥಿ ಆಯ್ಕೆ ಮಾಡ್ತಾರೆ ಎಂದು ಹೇಳಿದರು.

ಪ್ರಿಯಾಂಕಾ ಖರ್ಗೆ ಹೇಳಿಕೆ ವಿಚಾರವಾಗಿ ಮಾತನಾಡಿ, ಅದು ಅವರ ವೈಯಕ್ತಿಕ, ನಾವು ರಾಮನ ಭಕ್ತರೇ ಎಂದರು.

ಸಿದ್ದರಾಮಯ್ಯ ಅವರೇ ಜೈ ಶ್ರೀ ರಾಮ್ ಅಂತ ಹೇಳಿಲ್ವಾ. ರಾಮ ಮಂದಿರ ಈಗಾಗಲೇ ಉದ್ಘಾಟನೆಯಾಗಿದೆ. ಬಿಜೆಪಿಯವರು ಚುನಾವಣೆಗಾಗಿ ಬಳಸಿಕೊಳ್ತಿದ್ದಾರೆ. ಚುನಾವಣೆ ಬಿಟ್ಟು ನಾವು ವೈಯಕ್ತಿಕವಾಗಿ ದೇವರ ಪೂಜೆ ಮಾಡ್ತೇವೆ ಎಂದು ಹೇಳಿದರು.

ದೇವೇಗೌಡ್ರು ಅವರನ್ನು ಅವರ ಮಕ್ಕಳು ಆ ಪರಿಸ್ಥಿತಿಗೆ ತಂದಿದ್ದಾರೆ

ಮೋದಿ ಮತ್ತೆ ಪ್ರಧಾನಿಯಾದ್ರೆ ನಾನು ದೇಶ ಬಿಟ್ಟೋಗ್ತಿನಿ ಅಂತ ದೇವೇಗೌಡ್ರು ಅಂದಿದ್ರು. ಧೃಡವಾದಂತ ಜಾತ್ಯಾತಿತ ಲೀಡರ್ ಶಿಪ್ ಕಟ್ಟಿಕೊಂಡು ಬಂದಿದ್ದ ದೇವೇಗೌಡ್ರುನ ಅವರ ಮಕ್ಕಳು ಆ ಪರಿಸ್ಥಿತಿಗೆ ತಂದಿದ್ದಾರೆ. ನನಗೆ ನೋವಾಗ್ತಿದೆ ನಮ್ಮ ನಾಯಕರು ಮಣ್ಣಿನ ಮಗ ಎಂದು ಹೇಳಿದರು.

ಇದೇ ಪ್ರಧಾನಿ ಮೋದಿ ಪ್ರಧಾನಿಯಾದ್ರೆ ನಾನು ದೇಶ ಬಿಟ್ಟೋಗ್ತಿನಿ ಅಂದಿದ್ರು. ನನಗೆ ನೋವಾಗ್ತಿದೆ.  ಅವರು ಬದುಕಿದ್ದಂಗೆನೆ ಸೆಕ್ಯೂಲರ್ ಅಂತನೇ ಬದುಕಿದ್ರು. ಇನ್ನೊಂದು ಪಕ್ಷಕ್ಕೆ ಸೇರ್ಪಡೆಯಾಗಿರಲಿಲ್ಲ. ಅವರನ್ನು ಪಕ್ಷದ ಮಕ್ಕಳು, ನಾಯಕರು ಅನೇಕರು ಅವರನ್ನು ಆ ಪರಿಸ್ಥಿತಿಗೆ ತಂದಿದ್ದಾರೆ. ಅದು ನನಗೆ ನೋವಾಗಿದೆ ಎಂದು ಬೇಸರ ವ್ಯಕ್ತ ಪಡಿಸಿದರು.

RELATED ARTICLES
- Advertisment -
Google search engine

Most Popular