ಮಂಡ್ಯ: ಮೈ- ಬೆಂ ಹೆದ್ದಾರಿಯಲ್ಲಿ ಹೈಟೆನ್ಷನ್ ಲೇನ್ ನ ಎತ್ತರದ ವಿದ್ಯುತ್ ಕಂಬಗಳ ನಟ್ಟು, ಬೋಲ್ಟ್ ಹಾಗೂ ಪ್ಲೇಟ್ ಕಳ್ಳತನದಿಂದ ವಿದ್ಯುತ್ ಕಂಬ ಬಾಗಿ ನಿಂತಿದ್ದು, ಅಪಾಯಕ್ಕೆ ಆಹ್ವಾನ ನೀಡಿದೆ.
ಇತ್ತೀಚೆಗೆ ಮಂಡ್ಯದ ರಾಗಿಮುದ್ದನಹಳ್ಳಿ ಬಳಿ ಹೈವೆಗೆ ಉರುಳಿ ಬಿದ್ದು ಭಾರೀ ಅನಾಹುತವೊಂದು ತಪ್ಪಿ ಹೋಗಿತ್ತು ಅಂದು ಬೈಕ್ ಮೇಲೆ ವಿದ್ಯುತ್ ಕಂಬ ಬಿದ್ದಿದ್ದು, ಸವಾರ ಅದೃಷ್ಟವಶಾತ್ ಸವಾರ ಪಾರಾಗಿದ್ದ.

ಈ ಬೆನ್ನಲ್ಲೆ ಮಂಡ್ಯದಿಂದ ಮೈಸೂರಿನವರೆಗಿನ ಸರ್ವೀಸ್ ರಸ್ತೆಯಲ್ಲಿ ಬಹುತೇಕ ಹೈಟೆನ್ಷನ್ ಲೈನ್ ನ ಕಂಬಗಳು ವಾಲುವ ಸ್ಥಿತಿಯಲ್ಲಿವೆ.
ಈ ಕಂಬಗಳಲ್ಲಿ ದುಷ್ಕರ್ಮಿಗಳು ನಟ್ಟು ಬೋಲ್ಟ್,ಪ್ಲೇಟ್ ಕಳ್ಳತನ ಮಾಡಿದ್ದಾರೆ. ದುಷ್ಕರ್ಮಿಗಳ ಈ ಕೃತ್ಯದ ಹಿಂದೆ ಮೋದಿ ಹಾಗೂ ಸಂಸದ ಪ್ರತಾಪ ಸಿಂಹ ಹೆಸರು ಕೆಡಿಸುವ ಹುನ್ನಾರ ಇದೆ ಎಂಬ ಆರೋಪ ಕೇಳಿಬಂದಿದೆ. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಅನಾಹುತದ ಕಂಬಗಳನ್ನು ಕಂಡರೂ ಜಾಣ ಕುರುಡು ಪ್ರದರ್ಶಿಸುತ್ತಿದೆ.
ಈ ಕೂಡಲೇ ಉರುಳಿ ಬೀಳುವ ಹಂತದಲ್ಲಿರೋ ಕಂಬಗಳ ದುರಸ್ಥಿ ಮಾಡಬೇಕೆಂದು ವಾಹನ ಸವಾರರು ಆಗ್ರಹಿಸಿದ್ದಾರೆ.
ಒಂದು ವೇಳೆ ಅನಾಹುತವಾದರೆ ಸರ್ಕಾರ ಮತ್ತು ಹೆದ್ದಾರಿ ಪ್ರಾಧಿಕಾರವೇ ಹೊಣೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದು, ವಿದ್ಯುತ ಕಂಬಗಳನ್ನು ದುರಸ್ಥಿಗೊಳಿಸದಿದ್ದರೆ ದಶಪಥ ಹೆದ್ದಾರಿ ತಡೆದು ಪ್ರತಿಭಟನೆ ನಡೆಸುವುದಾಗಿ ಮ.ರ.ವೇ ಸಂಘಟನೆ ಎಚ್ಚರಿಕೆ ನೀಡಿದೆ.