ಎಡತೊರೆ ಮಹೇಶ್
ಎಚ್.ಡಿ.ಕೋಟೆ:ಪಟ್ಟಣದ ಮಿನಿ ವಿಧಾನ ಸೌಧದ ಎದುರು ಇರುವ ಜಯರಾಮ್ ರವರಿಗೆ ಸೇರಿದ ಹೀರೋ ಶೋರೂಂ ಇಂದು ಬೆಳ್ಳಂಬೆಳಗ್ಗೆ ಸುಮಾರು 6 ಗಂಟೆ ಸಮಯದಲ್ಲಿ ವಿದ್ಯುತ್ ಸ್ಯಾಟ್ ಸರ್ಕ್ಯೂಟ್ ಆಗಿ ಇದ್ದಕ್ಕಿದ್ದಂತೆ ಇಡಿ ಕಟ್ಟಡವೇ ಧಗಧಗನೆ ಹೊಗೆಯಿಂದ ಆವೃತವಾಗಿ ಸುತ್ತಮುತ್ತಲಿನ ಜನರಲ್ಲಿ ಭಯದ ವಾತಾವರಣ ನಿರ್ಮಾಣವಾಯಿತು.
ನಂತರ ಸ್ಥಳಾಕ್ಕಾಗಮಿಸಿದ ಆಗ್ನಿಶ್ಯಾಮಕ ದಳದ ಸಹಾಯದಿಂದ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಯಿತು. ಈ ಆಗ್ನಿ ಅವಘಡದಿಂದ 25 ಕ್ಕೂ ಹೊಸ ಬೈಕ್ ಗಳು, ಸ್ಪೆರ್ ಪಾರ್ಡ್ಸ್ಗಳು, ಗಣಕ ಯಂತ್ರಗಳು, ಪೀಠೋಪಕರಣಗಳು ಮತ್ತಿತರ ಬೆಲೆಬಾಳುವ ಸಾಮಾಗ್ರಿಗಳು ಸಂಪೂರ್ಣ ನಾಶವಾಗಿ ಸುಮಾರು 1 ಕೋಟಿಗೂ ಅಧಿಕ ಮೌಲ್ಯದ ರೂಗಳು ನಷ್ಟವಾಗಿದೆ ಎಂದು ಹೇಳಲಾಗುತ್ತಿದೆ. ಸದ್ಯ ಎಚ್.ಡಿ.ಕೋಟೆ ಪೋಲಿಸ್ ನವರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
