ಮಂಡ್ಯ: ಸರ್ಕಾರಕ್ಕೆ ರಾಮ ಅಂದ್ರೆ ಯಾಕೆ ದ್ವೇಷ, ಇವರಿಗೆ ರಾಮ ಏನು ಮಾಡಿದ್ದಾರೆ? ಇದನ್ನು ನಾವು ಸಂಪೂರ್ಣವಾಗಿ ಖಂಡಿಸುತ್ತೇವೆ. ನಾವು ರಾಜಕಾರಣ ಮಾಡಲ್ಲ. ಕಾಂಗ್ರೆಸ್ ನವರು ರಾಕ್ಷಸತನ ವ್ಯಕ್ತಪಡಿಸುತ್ತಿದ್ದಾರೆ. ರಾಮನ ರೀತಿ ನಡೆದುಕೊಳ್ಳಿ, ರಾಕ್ಷಸರು ಅಂತ ತೋರಿಸಿಕೊಳ್ತಿದ್ದಾರೆ ಎಂದು ಮಾಜಿ ಸಚಿವ ಅಶ್ವಥ್ ನಾರಾಯಣ ತೀವ್ರ ವಾಗ್ದಾಳಿ ನಡೆಸಿದರು.
ಸ್ವಂತ ದುಡ್ಡಿನಲ್ಲಿ ಜನರು ಧ್ವಜ ನಿರ್ಮಿಸಿದ್ದಾರೆ. ಸರ್ಕಾರದ ದುಡ್ಡಿನಲ್ಲಿ ನಿರ್ಮಿಸಿಲ್ಲ. ರಾಷ್ಟ್ರ ಧ್ವಜ, ನಾಡ ಧ್ವಜವನ್ನು ಸಹ ಹಾರಿಸಿದ್ದಾರೆ. ಅಯೋಧ್ಯೆಯಲ್ಲಿ ರಾಮನ ಪ್ರಾಣ ಪ್ರತಿಷ್ಟಾಪನೆ ಆಗಿದೆ. ಜನರು ಭಾವನಾತ್ಮಕವಾಗಿ ಹನುಮ ಧ್ವಜ ಹಾರಿಸಿದ್ದಾರೆ. ಇಡೀ ಕರ್ನಾಟಕದಲ್ಲಿ ಇದೊಂದೆ ಕಂಡಿದ್ದ ಇವರಿಗೆ ಎಂದು ಕಿಡಿಕಾರಿದರು.
ಕಾನೂನಾತ್ಮಕವಾಗಿ ನಿರ್ಣಯ ಮಾಡಿದ್ದಾರೆ. ನೋಟಿಸ್ ಕೊಟ್ಟು ಕಾನೂನು ಉಲ್ಲಂಘನೆ ಬಗ್ಗೆ ಮಾಹಿತಿ ತೆಗೆದುಕೊಳ್ಳಬೇಕಿತ್ತು. ಏಕಾಏಕಿ ರಾತ್ರೋರಾತ್ರಿ ಜನರ ಮೇಲೆ ಲಾಠಿಚಾರ್ಜ್ ಮಾಡಿರುವುದು ಸರಿಯಲ್ಲ ಎಂದು ಹರಿಹಾಯ್ದರು.
ರಾಷ್ಟ್ರ ಧ್ವಜ ಹಾರಿಸುವುದಕ್ಕೆ ವಿರೋಧ ಇಲ್ಲ. ಕಾಂಗ್ರೆಸ್ ಮುಂದೆ ದೇಶ ಭಕ್ತಿ ತೋರುವ ಅವಶ್ಯಕತೆ ಇಲ್ಲ. ಇಲ್ಲ ಹನುಮ ಧ್ವಜ ಹಾರಿಸುವುದೆ ನಮ್ಮ ಗುರಿ ಹಾರಿಸುತ್ತೇವೆ ಎಂದರು.