ಎಡತೊರೆ ಮಹೇಶ್
ಎಚ್ ಡಿ ಕೋಟೆ: ವಿಘ್ನೇಶ್ವರನ ಪ್ರತಿಷ್ಠಾಪನೆಯ ಮೊದಲನೇ ವರ್ಷದ ವಿಶೇಷ ಪೂಜೆ ನೆರವೇರಿತು.
ಎಚ್ ಡಿ ಕೋಟೆ ತಾಲೂಕು ,ಕೆ ಎಡತೊರೆ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ವರಸಿದ್ಧಿ ವಿನಾಯಕನ ಪೂಜೆ ಹಮ್ಮಿಕೊಂಡಿದ್ದರು. ಹೆಣ್ಣು ಮಕ್ಕಳು ಮತ್ತು ಪುಟಾಣಿಗಳು , ಚಿಕ್ಕಿ ಹೆಬ್ಬಾಳದಿಂದ ಕಳಸ ಹೊತ್ತು ಮೆರವಣಿಗೆಯಲ್ಲಿ ಸಾಗಿದರು.

ಬೆಳಗ್ಗೆಯಿಂದ ಪ್ರಾರಂಭವಾದ ಪೂಜೆಯಲ್ಲಿ ಅಭಿಷೇಕ ಹೋಮ ನೆರವೇರಿತು ನಂತರ ನಡೆದ ಕಾರ್ಯಕ್ರಮದ ಅಂಗವಾಗಿ ಹೆಣ್ಣು ಮಕ್ಕಳಿಗೆ ಹಗ್ಗ ಎಳೆಯುವ ಸ್ಪರ್ಧೆ, ಮ್ಯೂಸಿಕಲ್ ಚೇರ್, ಮಡಿಕೆ ಹೊಡೆಯುವ ಸ್ಪರ್ಧೆ , ಮಕ್ಕಳಿಗೆ ಬ್ರೆಡ್ ತಿನ್ನುವ ಸ್ಪರ್ಧೆ ಏರ್ಪಡಿಸಿದರು. ಸ್ಪರ್ಧೆಯಲ್ಲಿ ಗೆದ್ದ ಎಲ್ಲಾ ವಿಜೇತರಿಗೆ ಬಹುಮಾನ ವಿತರಣೆ ಮಾಡಿದರು.

ಮಹಿಳೆಯರು ನೃತ್ಯ ಮಾಡಿದರು ಇಲ್ಲಿ ವಿಶೇಷವೆಂದರೆ ತಮಿಳಿಯರು ಮತ್ತು ಕನ್ನಡಿಗರು ಒಟ್ಟಿಗೆ ಸೇರಿ ಅದ್ದೂರಿಯಾಗಿ ಕಾರ್ಯಕ್ರಮ ಆಯೋಜಿಸಿದರು.
ಕಾರ್ಯಕ್ರಮದಲ್ಲಿ ಗ್ರಾಮದ ಯಜಮಾನರುಗಳು ಮುಖಂಡರುಗಳು ಹಾಗೂ ಮಹಿಳೆಯರು ಸೇರಿದಂತೆ ಸಾರ್ವಜನಿಕರು ಭಾಗವಹಿಸಿದ್ದರು.