ಎಡತೊರೆ ಮಹೇಶ್
ಹೆಚ್ ಡಿ ಕೋಟೆ: ಹೆಚ್ ಡಿ ಕೋಟೆ ಪಟ್ಟಣದ ಶ್ರೀ ಆದಿಚುಂಚನಗಿರಿ ಶಿಕ್ಷಣ ಸಂಸ್ಥೆಯಲ್ಲಿ ಯುವ ಸಬಲೀಕರಣ ಕ್ರೀಡಾ ಇಲಾಖೆ ಹಾಗೂ ಮಹದೇಶ್ವರ ಕಲಾಬಳಗ ಮಲಾರ ಮಹದೇವಸ್ವಾಮಿ ತಂಡ ಕಾರ್ಯಕ್ರಮ ಆಯೋಜಿಸಿದರು.
ಕಾರ್ಯಕ್ರಮವನ್ನು ಉದ್ಘಾಟನೆಯನ್ನು ಹಿರಿಯ ಪತ್ರಕರ್ತ ಬಸವರಾಜು ಹಾಗೂ ವೇದಿಕೆಯ ಗಣ್ಯರು ನಡೆಸಿಕೊಟ್ಟರು.

ಕಾರ್ಯಕ್ರಮಕ್ಕೆ ವಿಶೇಷ ಉಪನ್ಯಾಸ ನೀಡಲು ಆಗಮಿಸದ ಪ್ರೌಢ ಶಾಲೆ ಶಿಕ್ಷಕ ರಂಗರಾಜೇಗೌಡ ಮಾತನಾಡಿ ವಿದ್ಯಾರ್ಥಿಗಳು ವಿವೇಕಾನಂದರ ಜೀವನವನ್ನು ಹೆಚ್ಚು ಅಧ್ಯಯನವನ್ನು ಮಾಡಿ ತಮ್ಮ ಜೀವನದಲ್ಲಿ ಅಳವಡಿಸಿಕೊಂಡರೆ ಉತ್ತಮ ವ್ಯಕ್ತಿತ್ವ ರೂಪಿಸಿಕೊಳ್ಳಲು ಸಾಧ್ಯ ಅದರಿಂದ ವಿದ್ಯಾರ್ಥಿಗಳು ದುಷ್ಟ ಚಟಾಗಳಿನಿಂದ ದೂರ ಇರಬೇಕು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಪದ್ಮಶ್ರೀ ಪುರಸ್ಕೃತ ಮೊತ್ತ ಸೋಮಣ್ಣರನ್ನು ವಿಶೇಷವಾಗಿ ಅಭಿನಂದಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಶ್ರೀ ಆದಿಚುಂಚನಗಿರಿ ಶಿಕ್ಷಣ ಸಂಸ್ಥೆ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಬೈರೇಗೌಡ ಮಾತನಾಡಿ ವಿದ್ಯಾರ್ಥಿಗಳು ಮಾದಕ ವಸ್ತುಗಳಿಂದ ದೂರವಿದ್ದು ದರ್ಶನಿಕರ ತತ್ವದರ್ಶಗಳನ್ನು ಮೈಗುಡಿಸಿಕೊಂಡು ತಮ್ಮ ಗುರಿಯತ್ತ ಸಾಗಬೇಕು ಎಂದು ಹೇಳಿದರು.

ಕಾರ್ಯಕ್ರಮದ ಸಂಘಟಕ ಮಲಾರ ಮಹದೇವಸ್ವಾಮಿ ಕಾರ್ಯಕ್ರಮದ ಎಲ್ಲಾ ಗಣ್ಯರನ್ನು ಸ್ವಾಗತಿಸಿ ಪ್ರಸ್ತವಿಕ ನುಡಿಗಳನ್ನು ನುಡಿದರು. ಕಾರ್ಯಕ್ರಮಕ್ಕೆ ಗೀತಾ ಗಾಯನ ಮೆರುಗು ನೀಡಿ ಯುವಕರ ಉತ್ಸಹ ಹೆಚ್ಚಿಸಿತು.
ಕಾರ್ಯಕ್ರಮದಲ್ಲಿ, ಮೊತ್ತ ಸೋಮಣ್ಣ, ಬಸವರಾಜು, ಮಹಿಳಾ ಹೋರಾಟಗಾರರದ ಜಾಸೀಲಾ, ಪೊಲೀಸ್ ಇಲಾಖೆ ಸುರೇಶ ನಾಯಕ್, ಪುರುಷೋತ್ತಮ್, ರಂಗರಾಜೇಗೌಡ, ಬೈರೇಗೌಡ, ಗಣೇಶ್, ಮಲರಮಹಾದೇವಸ್ವಾಮಿ, ಹಾಗೂ ನೂರಾರು ಯುವಕರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದರು.