Monday, April 21, 2025
Google search engine

Homeರಾಜ್ಯವಿಜಯಪುರದ ಜನವಸತಿ ಪ್ರದೇಶದಲ್ಲಿ ವಿದ್ಯುತ್ ಟ್ರಾನ್ಸಫಾರ್ಮರ್ ಸ್ಫೋಟ

ವಿಜಯಪುರದ ಜನವಸತಿ ಪ್ರದೇಶದಲ್ಲಿ ವಿದ್ಯುತ್ ಟ್ರಾನ್ಸಫಾರ್ಮರ್ ಸ್ಫೋಟ

ವಿಜಯಪುರ: ಜಿಲ್ಲೆಯ ತಿಕೋಟಾ ಪಟ್ಟಣದ ಜನವಸತಿ ಪ್ರದೇಶದಲ್ಲಿ ವಿದ್ಯುತ್ ಟ್ರಾನ್ಸಫಾರ್ಮರ್ ಸ್ಫೋಟಗೊಂಡು ಹೊತ್ತಿ ಉರಿದ ಘಟನೆ ಜರುಗಿದ್ದು, ಅದೃಷ್ಟವಶಾತ್ ಯಾವುದೇ ಅಪಾಯ ಸಂಭವಿಸಿಲ್ಲ.

ಭಾನುವಾರ ರಾತ್ರಿ ತಿಕೋಟಾ ಪಟ್ಟಣದ ಬನಶಂಕರಿ ನಗರದ ಮಹಾಂತೇಶ ಬಂದಿ ಎಂಬವರ ಮನೆಯ ಮುಂದಿದ್ದ ವಿದ್ಯುತ್ ಟ್ರಾನ್ಸಫಾರ್ಮರ್ ಏಕಾಏಕಿ ಸ್ಫೋಟಗೊಂಡಿದ್ದು, ಬೆಂಕಿಯಿಂದ ಹೊತ್ತಿ ಉರಿದಿದೆ. ವಿದ್ಯುತ್ ಒತ್ತಡದಿಂದ ಟ್ರಾನ್ಸಫಾರ್ಮರ್ ಸ್ಫೋಟಗೊಂಡು ಬೆಂಕಿಯಿಂದ ಹೊತ್ತಿ ಉರಿದಿದೆ.

ಸ್ಫೋಟದಿಂದ ತೀವ್ರತೆಯಿಂದಾಗಿ ಮಹಾಂತೇಶ ಅವರ ಮನೆಯ ಆವರಣದಲ್ಲಿ ಬೆಂಕಿ ಹರಡಿಕೊಂಡಿತ್ತು. ಮನೆಯಲ್ಲಿ ಯಾರೂ ಇರಲಿಲ್ಲ. ಹೀಗಾಗಿ ಸಂಭವನೀಯ ಅಪಾಯ ತಪ್ಪಿದೆ.

ಸ್ಫೋಟದ ದೃಶ್ಯ ಸಿಸಿ ಕೆಮೆರಾದಲ್ಲಿ ಸೆರೆಯಾಗಿದ್ದು, ಮನೆಗೆ ಹತ್ತಿರದಲ್ಲಿರುವ ಕಾರಣ ಟ್ರಾನ್ಸಫಾರ್ಮರ್ ಸ್ಥಳಾಂತರಕ್ಕೆ ಹಲವು ಬಾರಿ ಮನವಿ ಮಾಡಿದರೂ ಯಾರೂ ಸ್ಪಂದಿಸಿಲ್ಲ ಎಂದು ಮಹಾಂತೇಶ ಕುಟುಂಬದವರು ದೂರಿದ್ದಾರೆ.

RELATED ARTICLES
- Advertisment -
Google search engine

Most Popular