Saturday, April 19, 2025
Google search engine

Homeರಾಜ್ಯಬಿಡಿಎ ಅಧ್ಯಕ್ಷರಾಗಿ ಎನ್ಎ ಹ್ಯಾರಿಸ್ ಅಧಿಕಾರ ಸ್ವೀಕಾರ

ಬಿಡಿಎ ಅಧ್ಯಕ್ಷರಾಗಿ ಎನ್ಎ ಹ್ಯಾರಿಸ್ ಅಧಿಕಾರ ಸ್ವೀಕಾರ

ಬೆಂಗಳೂರು: ಬೆಂಗಳೂರು ನಗರಾಭಿವೃದ್ಧಿ ಪ್ರಾಧಿಕಾರದ ನೂತನ ಅಧ್ಯಕ್ಷರಾಗಿ ಶಾಂತಿನಗರ ಶಾಸಕ ಎನ್.ಎ ಹ್ಯಾರಿಸ್ ಅಧಿಕಾರ ವಹಿಸಿಕೊಂಡಿದ್ದಾರೆ.

ನಿಗಮ ಮಂಡಳಿ ಅಧ್ಯಕ್ಷರ ಮೊದಲ ಪಟ್ಟಿಯಲ್ಲಿ ಹ್ಯಾರೀಸ್ ಆಯ್ಕೆ ಆಗಿದ್ದರು. ಒಟ್ಟು 36 ಶಾಸಕರಿಗೆ ವಿವಿಧ ನಿಗಮ-ಮಂಡಳಿಗಳಲ್ಲಿ ಸ್ಥಾನ ಸಿಕ್ಕಿದ್ದು ಬಿಡಿಎ ಕೇಂದ್ರ ಕಚೇರಿಯಲ್ಲಿ ಡಿಸಿಎಂ ಡಿ.ಕೆ. ಶಿವಕುಮಾರ್ ಅವರ ಸಮ್ಮುಖದಲ್ಲಿ ಶಾಸಕ ಎನ್.ಎ. ಹ್ಯಾರಿಸ್ ಬಿಡಿಎ ನೂತನ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡರು. ಶಾಸಕ ಜಮೀರ್ ಅಹ್ಮದ್ ಕೂಡ ಕಚೇರಿಗೆ ಆಗಮಿಸಿ ಶುಭ ಕೋರಿದರು.

ಬೆಂಗಳೂರು ನಗರದ ಬಗ್ಗೆ ನನಗೆ ಗೊತ್ತಿದೆ. ಈಗಾಗಲೇ ನಾಲ್ಕು ಬಾರಿ ಶಾಸಕನಾಗಿ ಕೆಲಸ ಮಾಡಿದ್ದೇನೆ. ಟ್ರಾನ್ಸ್ಫರೆನ್ಸಿ ತರುವಲ್ಲಿ ಪ್ರಯತ್ನಿಸುತ್ತೇನೆ. ಬಿಡಿಎ ಯನ್ನು ಜನಸ್ನೇಹಿ ಮಾಡಲು ಯತ್ನಿಸುತ್ತೇನೆ. ಸಿಎಂ, ಡಿಸಿಎಂ, ಬಿಡಿಎ ಜನಸ್ನೇಹಿ ಮಾಡಿ ಎಂದಿದ್ದಾರೆ. ಹೊಸ ಲೇಔಟ್ ಬಗ್ಗೆಯೂ ಯೋಜನೆ ಇದೆ ಎಂದು ತಿಳಿಸಿದರು.

ಶಾಂತಿನಗರ ಅಭಿವೃದ್ಧಿಯಾಗಿಲ್ಲ ಈಗ ನಿಮ್ಮನ್ನ ಬಿಡಿಎ ಅಧ್ಯಕ್ಷರನ್ನಾಗಿ ಮಾಡಿರುವುದಕ್ಕೆ ವಿರೋಧ ವ್ಯಕ್ತವಾಗಿದೆ ಎಂಬ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ಹ್ಯಾರಿಸ್, ರಾಜಕೀಯವಾಗಿ ಮಾತನಾಡಿದರೆ ನಾನು ರಾಜಕೀಯ ಮಾತನಾಡ್ತೇನೆ. ಬೆಂಗಳೂರು‌ ಎಲ್ಲವೂ ಬಿಡಿಎ ನಲ್ಲಿ ಬರಲ್ಲ. ಎಲ್ಲರ ಸಲಹೆಯನ್ನ ತೆಗೆದುಕೊಂಡು ಕೆಲಸ ಮಾಡ್ತೇನೆ. ಬಿಡಿಎಯನ್ನ ಇನ್ನಷ್ಟು ಅಭಿವೃದ್ಧಿ ಮಾಡ್ತೇವೆ. ಸಂಪನ್ಮೂಲಗಳ‌ ಕ್ರೋಢೀಕರಣಕ್ಕೆ ಮುಂದಾಗುತ್ತೇವೆ ಎಂದರು.

RELATED ARTICLES
- Advertisment -
Google search engine

Most Popular