Saturday, April 19, 2025
Google search engine

Homeರಾಜ್ಯಸುದ್ದಿಜಾಲಕೆ.ಆರ್.ನಗರ : ನೂತನ ತುರ್ತುವಾಹನ(ಆಂಬುಲೆನ್ಸ್)ಲೋಕಾರ್ಪಣೆ

ಕೆ.ಆರ್.ನಗರ : ನೂತನ ತುರ್ತುವಾಹನ(ಆಂಬುಲೆನ್ಸ್)ಲೋಕಾರ್ಪಣೆ

ವರದಿ : ವಿನಯ್ ದೊಡ್ಡಕೊಪ್ಪಲು
ಕೆ.ಆರ್.ನಗರ : ಸಾಲಿಗ್ರಾಮ ತಾಲೂಕಿನ ಭೇರ್ಯ ಪ್ರಾಥಮಿಕ ಆರೋಗ್ಯ ಮತ್ತು ಕ್ಷೇಮ ಕೇಂದ್ರಕ್ಕೆ ನೂತನ ತುರ್ತುವಾಹನ (ಆಂಬುಲೆನ್ಸ್ ) ನ್ನು ಶಾಸಕ ಡಿ. ರವಿಶಂಕರ್ ಇಂದು ಲೋಕಾರ್ಪಣೆ ಮಾಡಿದರು.

ಬಳಿಕ ಮಾತನಾಡಿದ ಅವರು ಭೇರ್ಯ ಗ್ರಾಮ ಹೇಳಿ ಕೇಳಿ ರಾಷ್ಟ್ರೀಯ ಹೆದ್ದಾರಿಯಲ್ಲಿದೆ. ಈ ಆಸ್ಪತ್ರೆಗೆ ಅಕ್ಕಪಕ್ಕದ ಎರಡು ತಾಲೂಕಿನ ಸಂಪರ್ಕ ಇದ್ದು ಚಿಕಿತ್ಸೆಗಾಗಿ ಹೆಚ್ಷಿನ ಜನರು ಇಲ್ಲಿಗೆ ಬರುತ್ತಾರೆ ಎಂದು ತಿಳಿಸಿದರು.

ಪ್ರತಿಯೊಂದು ಜೀವಗಳು ಅಮೂಲ್ಯವಾಗಿದ್ದು, ಅಪಘಾತ ಸಂಭವಿಸಿದ ಮೊದಲ ಒಂದು ಗಂಟೆ ಅತೀ ಮುಖ್ಯವಾಗಿರುತ್ತದೆ. ತತ್‌ಕ್ಷಣ ಆಂಬುಲೆನ್ಸ್ ಸೇವೆ ಲಭ್ಯವಾದರೆ ಆಸ್ಪತ್ರೆಗೆ ದಾಖಲಿಸಿ ಜೀವ ಉಳಿಸಲು ಸಾಧ್ಯವಾಗುತ್ತದೆ ಏಕೆಂದರೆ ಕಳೆದ ತಿಂಗಳು ಮಹಿಳೆಯೊಬ್ಬರಿಗೆ ಹೃದಯಘಾತವಾಗಿ ಸಾವನ್ನಪ್ಪಿದರು, ಸರಿಯಾದ ಸಮಯಕ್ಕೆ ಆಂಬುಲೆನ್ಸ್ ಬಂದಿದ್ದರೆ ಆ ಮಹಿಳೆ ಸಾಯುತ್ತಿರಲಿಲ್ಲ, ಕುಟುಂಬದವರು ಹಾಗೂ ಯುವಕರು ಆಸ್ಪತ್ರೆಯ ಮುಂದೆ ಪ್ರತಿಭಟನೆ ಮಾಡಿದ್ದರು ಇದನ್ನೆಲ್ಲ ಮನಗಂಡು ಜಿಲ್ಲಾಧಿಕಾರಿಗಳಾದ ಕೆ.ವಿ.ರಾಜೇಂದ್ರಕುಮಾರ್ ಮತ್ತು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳ ಅವರ ಜೊತೆ ಚರ್ಚಿಸಿ ಭೇರ್ಯ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ನೂತನ ಆಂಬುಲೆನ್ಸ್ ಕೊಡಿಸಿದ್ದೇನೆ ಎಂದರು.

ಸಾಲಿಗ್ರಾಮ ಪಟ್ಟಣದ ಆಸ್ಪತ್ರೆಯನ್ನು ತಾಲೂಕು ಆಸ್ಪತ್ರೆಯಾಗಿ ಪರಿವರ್ತನೆ ಆದ ತಕ್ಷಣವೇ ಭೇರ್ಯ ಗ್ರಾಮದ ಆರೋಗ್ಯ ಕೇಂದ್ರವನ್ನು ಮೇಲ್ದರ್ಜೆಗೆರಿಸಿ ಸಮುದಾಯ ಆರೋಗ್ಯ ಕೇಂದ್ರ ಮಾಡಲು ಈಗಾಗಲೇ ಮುಖ್ಯಮಂತ್ರಿಗಳಿಗೆ ಹಾಗೂ ಆರೋಗ್ಯ ಸಚಿವರಿಗೆ ಪತ್ರ ಬರೆದು ಮನವಿ ಮಾಡಿದಲ್ಲದೆ ಜರೂರಾಗಿ ಮಂಜೂರು ಮಾಡುವಂತೆ ನಮ್ಮ ನಾಯಕರಾದ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಅವರನ್ನು ಒತ್ತಾಯ ಮಾಡಿರುವುದಾಗಿ ತಿಳಿಸಿದರು.

ನಂತರ ತಾಲೂಕು ಆರೋಗ್ಯಾಧಿಕಾರಿ ಡಾ.ಡಿ.ನಟರಾಜು ಮಾತನಾಡಿ ಭೇರ್ಯ ಆರೋಗ್ಯ ಕೇಂದ್ರದ ಭಾಗದಲ್ಲಿ ಅಫಘಾತ, ವಿಷಸೇವನೆ ಸೇರಿದಂತೆ ಅನೇಕ ಅವಘಡಗಳು ಸಂಬವಿಸಿದರು ಅಂಬ್ಯೂಲೆನ್ಸ್ ಬೇರೆ ಕಡೆಯಿಂದ ಬರಬೇಕಿತ್ತು ಅಷ್ಟರಲ್ಲಿ ಅವಘಡ ಉಂಟಾದ ರೋಗಿಗೆ ಚಿಕಿತ್ಸೆ ಲಬ್ಯವಿಲ್ಲದೆ ಜೀವ ಹೋಗುವ ಪರಿಸ್ಥಿತಿ ಇತ್ತು,, ಇಂತಹ ಪರಿಸ್ಥಿತಿಯ ಬಗ್ಗೆ ಶಾಸಕರ ಗಮನಕ್ಕೆ ತಂದು, ಸರ್ಕಾರದಿಂದ. ಆಂಬುಲೆನ್ಸ್ ಕೊಡಿಸುವಂತೆ ಮನವಿ ಮಡಿದ ಹಿನ್ನೆಲೆಯಲ್ಲಿ ಶಾಸಕರು ಮನವಿಗೆ ಸ್ಪಂದಿಸಿ ವಾರದೊಳಗೆ ಆಂಬುಲೆನ್ಸ್ ಕೊಡಿಸಿದ್ದಾರೆ ಇಲಾಖೆಯ ಮುಖ್ಯಸ್ಥನಾಗಿ ಧನ್ಯವಾದ ಜೊತಗೆ ಅಭಿನಂದಿಸುತ್ತೇನೆ ಎಂದು ಹೇಳಿದರು.

ಗ್ರಾ.ಪಂ.ಅಧ್ಯಕ್ಷೆ ಜಯಲಕ್ಷ್ಮೀಕೃಷ್ಣೇಗೌಡ, ಉಪಾಧ್ಯಕ್ಷೆ ರೂಪಹರೀಶ್, ಅರ್ಜುನಹಳ್ಳಿ ಗ್ರಾ.ಪಂ. ಅಧ್ಯಕ್ಷ ದಿಲೀಪ್, ಜಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಕುಮಾರಸ್ವಾಮಿ, ಆಸ್ಪತ್ರೆಯ ವೈದ್ಯಾಧಿಕಾರಿ ಡಾ.ಸೌಜನ್ಯ, ತಾಲೂಕು ಶರಣ ಸಾಹಿತ್ಯ ಪರಿಷತ್ತ್ ಅಧ್ಯಕ್ಷ ಸಿ.ಪಿ.ರಮೇಶ್, ಗ್ರಾ.ಪಂ.ಮಾಜಿ ಅಧ್ಯಕ್ಷ ಬಿ.ಹೆಚ್.ಮಹದೇವ್, ಗ್ರಾ.ಪಂ.ಸದಸ್ಯರಾದ ಮಂಜಪ್ಪ, ಬಿ.ಎಲ್.ರಾಜಶೇಖರ್, ಕೃಷ್ಣೇಗೌಡ, ಸಾಲಿಗ್ರಾಮ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಉದಯ್ ಶಂಕರ್, ಜಿಲ್ಲಾ ಗ್ರಾಮಾಂತರ ಯುವ ಕಾಂಗ್ರೆಸ್ ಎಸ್.ಟಿ.ಘಟಕದ ಕಾರ್ಯದರ್ಶಿ ಮಹದೇವ್, ತಾಲೂಕು ಹಿರಿಯ ಆರೋಗ್ಯ ನಿರೀಕ್ಷಕ ಕೆ.ವಿ.ರಮೇಶ್, ಕಾಂಗ್ರೆಸ್ ಮುಖಂಡರಾದ ಟಿ.ಸಿ.ಮಂಜು, ಹೊಸೂರು ಕಾಂತ, ಸಂದರ್ಶನ್, ಡಿ.ತಮ್ಮಯ್ಯ ಸೇರಿದಂತೆ ಆಸ್ಪತ್ರೆಯ ಸಿಬ್ಬಂದಿ ವರ್ಗ, ಆಶಾ ಕಾರ್ಯಕರ್ತೆಯರು ಇದ್ದರು.

RELATED ARTICLES
- Advertisment -
Google search engine

Most Popular