Saturday, April 19, 2025
Google search engine

Homeದೇಶಕಾರಿನಲ್ಲಿ ಆಟವಾಡುತ್ತಿದ್ದ ಮೂವರು ಮಕ್ಕಳು ಉಸಿರುಗಟ್ಟಿ ಸಾವು

ಕಾರಿನಲ್ಲಿ ಆಟವಾಡುತ್ತಿದ್ದ ಮೂವರು ಮಕ್ಕಳು ಉಸಿರುಗಟ್ಟಿ ಸಾವು

ಮಹಾರಾಷ್ಟ್ರ: ಕಾರಿನಲ್ಲಿ ಆಟವಾಡುತ್ತಿದ್ದ ಮೂವರು ಮಕ್ಕಳು ಉಸಿರುಗಟ್ಟಿ ಸಾವನ್ನಪ್ಪಿರುವ ಹೃದಯ ವಿದ್ರಾವಕ ಘಟನೆ ಮಹಾರಾಷ್ಟ್ರದ ನಾಗ್ಪುರ್​​​ ಜಿಲ್ಲೆಯ ಫಾರೂಖ್​ ನಗರದಲ್ಲಿ ನಡೆದಿದೆ.

ಫಾರುಕ್ ನಗರದ ನಿವಾಸಿಗಳಾದ ತೌಫಿಕ್ ಫಿರೋಜ್ ಖಾನ್ (4), ಆಲಿಯಾ ಫಿರೋಜ್ ಖಾನ್ (6) ಮತ್ತು ಅಫ್ರಿನ್ ಇರ್ಷಾದ್ ಖಾನ್ (6) ಮೃತ ದುರ್ದೈವಿ ಮಕ್ಕಳು.

ಮಕ್ಕಳು ಆಟವಾಡಲು ಹೋಗಿದ್ದರು. ಪೋಷಕರು ಹತ್ತಿರದ ಫೀಲ್ಡ್​ಗೆ ಹೋಗಿರಬಹುದು ಎಂದುಕೊಂಡಿದ್ದರು. ರಾತ್ರಿವರೆಗೂ ಹಿಂದಿರುಗದಿದ್ದಾಗ ಪೊಲೀಸರನ್ನು ಸಂಪರ್ಕಿಸಿ ಅಪಹರಣ ಪ್ರಕರಣ ದಾಖಲಿಸಲಾಗಿತ್ತು. ಭಾನುವಾರ ಸಂಜೆ 7 ಗಂಟೆ ಸುಮಾರಿಗೆ ಎಸ್ ​ಯುವಿ ನಿಂತಿರುವುದ ಕಂಡರು ಕಾರಿನಲ್ಲಿ ಶವವಿರುವುದು ಬೆಳಕಿಗೆ ಬಂದಿದೆ. ಹಳೆಯ ಕಾರಿನಲ್ಲಿ ಆಟವಾಡುತ್ತಿದ್ದಾಗ ಡೋರ್​​ ಲಾಕ್​ ಆಗಿ ದುರಂತ ಸಂಭವಿಸಿದೆ.

ತೌಫಿಕ್ ಮತ್ತು ಆಲಿಯಾ ಒಡಹುಟ್ಟಿದವರಾಗಿದ್ದು, ಅಫ್ರಿನ್ ಪಕ್ಕದ ಮನೆಯವರಾಗಿದ್ದರು.

ಫಾರೂಖ್​ ನಗರದ ಪಂಚಪಾವಲಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

RELATED ARTICLES
- Advertisment -
Google search engine

Most Popular