ಮಂಡ್ಯ: ಕುರುಬ ಸಂಘದ ಕಟ್ಟಡದ ಮೇಲೆ ಕಲ್ಲು ತೂರಾಟ ಪ್ರಕರಣ ಖಂಡಿಸಿ ಕುರುಬ ಸಂಘದಿಂದ ಮಂಡ್ಯ ತಾಲೂಕು ಕುರುಬ ಸಂಘದ ಕಚೇರಿ ಮುಂಭಾಗ ಪ್ರತಿಭಟನೆ ನಡೆಸಲಾಯಿತು.
ಧ್ವಜ ಮರುಸ್ಥಾಪನೆಗಾಗಿ ಹಿಂದೂ ಪರ ಸಂಘಟನೆ ಕಾರ್ಯಕರ್ತರು ಕೆರಗೋಡಿನಿಂದ ಮಂಡ್ಯದವರೆಗೆ ಪ್ರತಿಭಟನೆ ಮಾಡಿದ್ದರು.
ಈ ವೇಳೆ ಕಿಡಿಗೇಡಿಳಿಂದ ಸಂಘದ ಕಟ್ಟಡದ ಮೇಲೆ ಹಾಕಲಾಗಿದ್ದ ಸಿಎಂ ಸಿದ್ದರಾಮಯ್ಯ ಫ್ಲೆಕ್ಸ್’ಗೆ ಕಿಡಿಗೇಡಿಗಳು ಕಲ್ಲು ತೂರಿದ್ದರು.
ಸದರಿ ಘಟನೆ ಖಂಡಿಸಿ ಕಿಡಿಗೇಡಿಗಳನ್ನ ಬಂಧಿಸುವಂತೆ ಒತ್ತಾಯಿಸಿ ಇಂದು ಕುರುಬ ಸಂಘದಿಂದ ಪ್ರತಿಭಟನೆ ನಡೆಸಲಾಗಿದೆ.