Sunday, April 20, 2025
Google search engine

Homeಅಪರಾಧಕುಡಿದ ಅಮಲಿನಲ್ಲಿ ಬಾಲಕಿ ಮೇಲೆ ಅತ್ಯಾಚಾರವೆಸಗಿದ ಯುವಕ: ಆರೋಪಿ ಪರಾರಿ

ಕುಡಿದ ಅಮಲಿನಲ್ಲಿ ಬಾಲಕಿ ಮೇಲೆ ಅತ್ಯಾಚಾರವೆಸಗಿದ ಯುವಕ: ಆರೋಪಿ ಪರಾರಿ

ತುಮಕೂರು: ಕುಡಿದ ಅಮಲಿನಲ್ಲಿ ಯುವಕನೋರ್ವ 6 ವರ್ಷದ ಬಾಲಕಿ ಮೇಲೆ ಅತ್ಯಾಚಾರ ಮಾಡಿರುವ ಘಟನೆ  ತುಮಕೂರು ಜಿಲ್ಲೆ ಕೊರಟಗೆರೆ ಪಟ್ಟಣದಲ್ಲಿ ನಡೆದಿದೆ.

ಮನೆಯಲ್ಲಿ ಯಾರು ಇಲ್ಲದ ಸಮಯ ನೋಡಿ  ಮನೆಯ ಮುಂದೆ ಕುಂಟೆಬಿಲ್ಲೆ ಆಟವಾಡುತ್ತಿದ್ದ ಬಾಲಕಿಯನ್ನ ಎಳೆದೊಯ್ದು ಅತ್ಯಾಚಾರ ನಡಸಿದ್ದಾನೆ. ಬಾಲಕಿ ಕಿರುಚಿಕೊಂಡಿದನ್ನ ಕೇಳಿಸಿಕೊಂಡು ಅಕ್ಕ-ಪಕ್ಕದ  ಮನೆಯವರು ಓಡಿಬಂದಿದ್ದಾರೆ.

ಕೂಡಲೇ ಆರೋಪಿ ಐ.ಡಿ.ಹಳ್ಳಿ ಮೂಲದ ಪವನ್(23) ಸ್ಥಳದಿಂದ ಪರಾರಿಯಾಗಿದ್ದಾನೆ.

ಆರೋಪಿ ಪವನ್ ಕೊರಟಗೆರೆ ಪಟ್ಟಣದ  ಹೊಟೇಲ್ ನಲ್ಲಿ ಕೆಲಸ ಮಾಡುತ್ತಿದ್ದ ಎನ್ನಲಾಗಿದೆ.

ಬಾಲಕಿಗೆ ಕೊರಟಗೆರೆ ಸಾರ್ವಜನಿಕ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ಕೊಡಿಸಿ, ನಂತರ ಜಿಲ್ಲಾಸ್ಪತ್ರೆಗೆ ರವಾನಿಸಲಾಗಿದೆ.

ಸ್ಥಳಕ್ಕೆ ಸಿಪಿಐ ಅನಿಲ್ ಮತ್ತು ಪಿಎಸ್ ಐ ಚೇತನ್ ಕುಮಾರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕೊರಟಗೆರೆ ಪೊಲೀಸ್ ಠಾಣೆಯಲ್ಲಿ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.

RELATED ARTICLES
- Advertisment -
Google search engine

Most Popular