Sunday, April 20, 2025
Google search engine

Homeರಾಜ್ಯಸುದ್ದಿಜಾಲ‘ಕಾಕನಕೋಟೆ ಬಾನಾಡಿಗಳು’ ಕೃತಿ ಲೋಕಾರ್ಪಣೆ

‘ಕಾಕನಕೋಟೆ ಬಾನಾಡಿಗಳು’ ಕೃತಿ ಲೋಕಾರ್ಪಣೆ

ಎಡತೊರೆ ಮಹೇಶ್

ಹೆಚ್.ಡಿ.ಕೋಟೆ: ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ಪಟ್ಟಣದ ಜೈನಭವನದಲ್ಲಿ ಏರ್ಪಡಿಸಿದ್ದ ಗೌಸ್ ಮೋದಿನ್ ಸಿಂಚರಕಿ ಬರೆದಿರುವ ‘ಕಾಕನಕೋಟೆ ಬಾನಾಡಿಗಳು’ ಎಂಬ ಕೃತಿ ಲೋಕಾರ್ಪಣೆ ಕಾರ್ಯಕ್ರಮವನ್ನು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ನಿಕಟಪೂರ್ವ ಅಧ್ಯಕ್ಷರಾದ ಡಾ. ವೈ.ಡಿ.ರಾಜಣ್ಣ, ಸಾಹಿತಿಗಳು, ತಹಶೀಲ್ದಾರ್ ಶ್ರೀನಿವಾಸ್ ಸೇರಿದಂತೆ ವೇದಿಕೆ ಗಣ್ಯರು ದೀಪ ಬೆಳಗಿಸಿ ಉದ್ಘಾಟಿಸಿ ನಂತರ ಪುಸ್ತಕ ಲೋಕಾರ್ಪಣೆ ಮಾಡಿದರು.

ಜಿಲ್ಲಾ ಸಾಹಿತ್ಯ ಪರಿಷತ್ತು ನಿಕಟಪೂರ್ವ ಅಧ್ಯಕ್ಷ ಡಾ. ವೈ.ಡಿ. ರಾಜಣ್ಣ ಅವರು ಕೃತಿ ಲೋಕಾರ್ಪಣೆ ಮಾಡಿ ಮಾತನಾಡಿ ತಾಲ್ಲೂಕಿನಲ್ಲಿ ಕಳೆದ ೧೫ ವರ್ಷಗಳಿಂದ ಕನ್ನಡ ಸಾಹಿತ್ಯ ಪರಿಷತ್ತು ಹಲವಾರು ಜನಮುಖಿ ಕಾರ್ಯಕ್ರಮಗಳನ್ನು ಮಾಡಿಕೊಂಡು ಬಂದಿದೆ. ಗೌಸ್ ಮೋದಿನ್ ಸಿಂಚರಕಿ ಅವರು ಕಂದಾಯ ಇಲಾಖೆಯಲ್ಲಿ ಕೆಲಸ ನಿರ್ವಹಿಸುತ್ತಿದ್ದು, ಪ್ರಸ್ತುತವಾಗಿ ತಾಲ್ಲೂಕಿನಲ್ಲಿ ಪಕ್ಷಿಗಳ ಬಗ್ಗೆ ಕುರಿತು ಮಾಹಿತಿಯನ್ನು ಕಲೆಹಾಕಿ ಪುಸ್ತಕ ಬರೆದಿರುವುದು ಸಂತಸದ ವಿಚಾರವಾಗಿದೆ. ಪಕ್ಷಿಗಳು ಆಕಾಶದಲ್ಲಿ ಹಾರಾಡುವುದೇ ಖುಷಿ, ಪಕ್ಷಿಗಳು ಸಾಹಿತಿಗಳಿಗೆ, ಕವಿಗಳಿಗೆ ಸ್ಪೂರ್ತಿಯ ಚಿಲುಮೆಯಾಗಿವೆ. ಅಂತಹ ಪಕ್ಷಿಗಳ ಕುರಿತಂತೆ ಕೃತಿ ಬರೆದು ಲೋಕಾರ್ಪಣೆ ಮಾಡಲಾಗಿದೆ ಮತ್ತಷ್ಟು ಕೃತಿ ಬರೆಯಲು ಮುಂದಾಗಲಿ ಎಂದು ಆಶಿಸಿದರು.

ವಿಶೇಷವಾಗಿ ರಾಜ್ಯದಲ್ಲಿ ಹೆಗ್ಗಡದೇವನಕೋಟೆ ಮಹತ್ವದ ಕ್ಷೇತ್ರವಾಗಿದ್ದು, ವನ್ಯಜೀವಿ ಅರಣ್ಯ ಸಂಪತ್ತು ಹೊಂದಿದೆ. ಈ ಕೃತಿಯಲ್ಲಿ ಪಕ್ಷಿಗಳ ಅಳಿವು-ಉಳಿವಿನ ಕುರಿತು ಸಮಗ್ರವಾಗಿ ಗೌಸ್ ಮೋದಿನ್‌ರವರು ವಿವರಿಸಿದ್ದಾರೆ. ಪಕ್ಷಿ ಸಂಕುಲವನ್ನು ಕಾಪಾಡಿಕೊಳ್ಳಬೇಕಾದದ್ದು ಮಾನವರಾದ ನಮ್ಮೆಲ್ಲರ ಜವಬ್ದಾರಿಯಾಗಿದೆ ಎಂದರು.

ಕಾಕನಕೋಟೆ ಬಾನಾಡಿಗಳು ಕೃತಿಯ ಲೇಖಕರಾದ ಗೌಸ್ ಮೋದಿನ್ ಸಿಂಚರಕಿ ಮಾತನಾಡಿ ಬಾಲ್ಯದಲ್ಲೆ ನನಗೆ ಪಕ್ಷಿಗಳ ಬಗ್ಗೆ ತಿಳಿದುಕೊಳ್ಳುವ ಆಸಕ್ತಿ ಇದ್ದ ಕಾರಣ ಕಾಕನಕೋಟೆ ಬಾನಾಡಿಗಳು ಎಂಬ ಕೃತಿ ಬರೆಯಲು ಸಾಧ್ಯವಾಯಿತು. ಪ್ರಪಂಚದಲ್ಲಿ ಲೇಖಕರಾದ ಸಲೀಂ ಅಲಿ ಅವರು ಬರೆದಿರುವ ಬರ್ಡ್ಸ್ ಆಫ್ ಇಂಡಿಯಾ ಪುಸ್ತಕದ ಪ್ರಕಾರ ೧೦೮೦೦ ವಿವಿಧ ಬಗೆಯ ಪಕ್ಷಿಗಳಿದ್ದು, ಅದೇ ರೀತಿ ೧೩೪೮ ಹಲವು ಬಗೆಯ ಪಕ್ಷಿಗಳು ಭಾರತದಲ್ಲಿವೆ. ವಿಶೇಷವಾಗಿ ದಕ್ಷಿಣ ಕರ್ನಾಟಕದಲ್ಲಿ ೫೪೦ ಪಕ್ಷಿಗಳು ಕಾಕನಕೋಟೆಯಲ್ಲಿರುವುದು ಬಹಳ ವಿಶೇಷವಾಗಿದೆ. ಇತ್ತೀಚಿನ ದಿನಗಳಲ್ಲಿ ಮಾನವ ಸ್ವಾರ್ಥತೆಯಿಂದಾಗಿ ಪಕ್ಷಿಗಳು ಅಳಿವಿನಂಚಿನಲ್ಲಿದ್ದು, ಪಕ್ಷಿಗಳಿಗೆ ಬೇಕಾದ ವಾತಾವರಣ ಸೃಷ್ಠಿಸಿ ಪಕ್ಷಿ ಸಂಕುಲವನ್ನು ಉಳಿಸಿಕೊಳ್ಳಬೇಕಾದ ಅನಿವಾರ್ಯತೆ ಇದೆ   ಶೀಘ್ರದಲ್ಲೇ ಮತ್ತೊಂದು “ನಾ ಬೇಟೆಗಾರ” ಎಂಬ ಕೃತಿಯನ್ನ್ನು ಪಕ್ಷಿಗಳ ಬೇಟೆ ಕುರಿತಂತೆ ಸಿದ್ದಪಡಿಸಿದ್ದು, ಮುಂದಿನ ದಿನಗಳಲ್ಲಿ ಲೋಕಾರ್ಪಣೆ ಮಾಡಲಾಗುವುದು ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಕನ್ನಡಪ್ರಮೋದ, ಸಾಹಿತಿಗಳು ಹಾಗೂ ಸಂಸ್ಕೃತಿ ಚಿಂತಕರಾದ ಅಂಕನಹಳ್ಳಿ ಕುಮಾರ್, ಗ್ರೇಟ್ ೨ ತಹಶೀಲ್ದಾರ್ ಸಣ್ಣರಾಮಪ್ಪ, ಜೀವಿಕ ಉಮೇಶ್, ಅಂಬೇಡ್ಕರ್ ಸೇನೆ ಅಧ್ಯಕ್ಷ ಮಹದೇವಸ್ವಾಮಿಕೋಟೆ ಗೌಸ್ ಮೋದಿನ್ ಸಿಂಚರಕಿ ಧರ್ಮಪತ್ನಿ ಹೀನಾ,   ಕಂದಾಯ ಅಧಿಕಾರಿ ವರ್ಗದವರು ಹಾಗೂ ಪ್ರಮುಖರು ಭಾಗವಹಿಸಿದ್ದರು.

RELATED ARTICLES
- Advertisment -
Google search engine

Most Popular