ವರದಿ: ವಿನಯ್ ದೊಡ್ಡಕೊಪ್ಪಲು
ಕೆ.ಆರ್.ನಗರ: ಸಂವಿಧಾನ ಈ ದೇಶದ ಆತ್ಮವಾಗಿದ್ದು, ಭಾರತ ದೇಶ ವಿಶ್ವದಲ್ಲಿಯೇ ಶ್ರೇಷ್ಠ ಸ್ಥಾನ ಹೊಂದಲು ಸಂವಿಧಾನವೂ ಪ್ರಮುಖ ಕಾರಣವಾಗಿದೆ ಎಂದು ಹಳಿಯೂರು ಗ್ರಾಪಂ ಅಧ್ಯಕ್ಷೆ ರೇಖಾ ಜಗದೀಶ್ ಹೇಳಿದರು.
ಸಾಲಿಗ್ರಾಮ ತಾಲ್ಲೋಕಿನ ಹೊಸೂರು ಗ್ರಾಮದಲ್ಲಿ ಸಂವಿಧಾನ ಜಾಗೃತಿ ರಥವನ್ನು ಸ್ವಾಗತಿಸಿ ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಮಾತನಾಡಿದ ಅವರು ಇಂದು ಸಂವಿಧಾನದ ಆಶಯಗಳು ಪರಿಣಾಮಕಾರಿಯಾಗಿ ಜಾರಿಯಾಗಬೇಕಾದರೆ ಅದರ ತಿಳುವಳಿಕೆ ಬಹಳ ಮುಖ್ಯವಾಗಿದ್ದು ಗ್ರಾಮಾಂತರ ಪ್ರದೇಶದ ಜನರಿಗೆ ಸಂವಿಧಾನದ ಮಹತ್ವ ತಿಳಿಸುವ ಇಂತಹ ಜಾಗೃತಿ ಯಾತ್ರೆ ಬಹಳ ಮುಖ್ಯವಾಗಿದೆ ಎಂದು ತಿಳಿಸಿದರು.
ಜಾಥದ ಅಂಗವಾಗಿ ಹೋಬಳಿಯ ಕುಪ್ಪೆ ಗ್ರಾಪಂ ಮಾಯಿಗೌಡನಹಳ್ಳಿ,ಹೊಸಕೋಟೆ ಗ್ರಾಪಂ ವ್ಯಾಪ್ತಿಯಲ್ಲಿ ಜಾಗೃತಿ ಜಾಥ ನಡೆಯಿತು.ಪೂರ್ಣಕುಂಭ ಕಳಶದ ಸ್ವಾಗತ ನೀಡಿ ವಿವಿಧ ಸಂದೇಶ ನೀಡುವ ಗೀತೆಗಳ ಮೂಲಕ ಸಂವಿಧಾನದ ಕುರಿತು ಅರಿವು ಮೂಡಿಸುವ ಕಾರ್ಯ ಮಾಡಲಾಯಿತು.
ಈ ಸಂಧರ್ಭದಲ್ಲಿ ಸಮಾಜ ಕಲ್ಯಾಣ ಇಲಾಖೆಯ ಅಶೋಕ್,ಗ್ರಾಪಂ ಉಪಾಧ್ಯಕ್ಷ ನೂತನ್,ಸದಸ್ಯರಾದ ಮಂಜುಳಮ್ಮ,ರೇಣುಕಾ,ಸಾಧಿಕ್,ಪಿಡಿಒ ಚಿದಾನಂದ್,ಕಾರ್ಯದರ್ಶಿ ಸುನಿಲ್,ಡಿಇಒ ಹರೀಶ್,ಸಾಮಾಜಿಕ ಅರಣ್ಯ ಹರಿಪ್ರಸಾದ್,ಮುಖಂಡರಾದ ಹಳಿಯೂರು ಜಗದೀಶ್,ದಲಿತ ಮುಖಂಡ ಮಹಾಲಿಂಗಯ್ಯ,ಸತೀಶ್ ಸೇರಿದಂತೆ ಮತ್ತಿತರರು ಹಾಜರಿದ್ದರು.