ರಾಮನಗರ: ಸ್ಪರ್ಶ್ ಕುಷ್ಠ ರೋಗ ಜಾಗೃತಿ ಅಭಿಯಾನದಡಿಯಲ್ಲಿ ಜನವರಿ-೩೦ ರಿಂದ ಫೆಬ್ರವರಿ-೧೩ರ ವರೆಗೆಜಿಲ್ಲೆ ಯಾದ್ಯಂತ ಅರಿವು ಮೂಡಿಸಲಾಗುತ್ತದೆ.ಕುಷ್ಠರೋಗವು ಮೈಕೋಬ್ಯಾಕ್ಟೀರಿಯಂಲೆಪ್ರೆ ಎಂಬ ರೋಗಾಣುವಿನಿಂದ ಬರುತ್ತದೆ. ದೇಹದ ಮೇಲೆ ಯಾವುದೇ ಸ್ಪರ್ಶಜ್ಞಾನವಿಲ್ಲದ ತಿಳಿ-ಬಿಳಿ ಅಥವಾತಾಮ್ರ ಬಣ್ಣ ಮಚ್ಚೆಗಲು ಕಾಣಿಸುವುದು, ಕೈ ಕಾಲುಗಳಲ್ಲಿ ಜೋಮು ಹಿಡಿದು ಸ್ಪರ್ಶಜ್ಞಾನವಿಲ್ಲದಿರುವುದು, ಮುಖ ಅಥವಾ ಕೈಕಾಲುಗಳಲ್ಲಿ ಎಣ್ಣೆ ಸವರಿದಂತೆ ಹೊಳಪು ಇರುವುದುರೋಗದ ಲಕ್ಷಣವಾಗಿದ್ದು, ಲಕ್ಷಣಗಳು ಕಂಡುಬಂದಲ್ಲಿ ಹತ್ತಿರದ ಸರ್ಕಾರಿಆಸ್ಪತ್ರೆಯಲ್ಲಿ ಪರೀಕ್ಷಿಸಿಕೊಳ್ಳಿ ರೋಗವನ್ನು ಬಹುಔಷಧಿಚಿಕಿತ್ಸೆಯಿಂದಸಂಪೂರ್ಣವಾಗಿಗುಣ ಪಡಿಸಬಹುದುಎಂದುಜಿಲ್ಲಾಕುಷ್ಠರೋಗ ನಿರ್ಮೂಲನಾಧಿಕಾರಿಡಾ. ಮಂಜುನಾಥ್‌ಅವರು ತಿಳಿಸಿದರು.
ಅವರು ಡಿ. ೩೦ರ ಮಂಗಳವಾರ ನಗರದಜಿಲ್ಲಾಆರೋಗ್ಯ ಮತ್ತುಕುಟುಂಬ ಕಲ್ಯಾಣಾಧಿಕಾರಿಗಳ ಕಚೇರಿಆವರಣದಲ್ಲಿ ಜಿಲ್ಲಾಡಳಿತ,ಜಿಲ್ಲಾ ಪಂಚಾಯತ್, ಜಿಲ್ಲಾಆರೋಗ್ಯ ಮತ್ತುಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾಕುಷ್ಟರೋಗ ನಿರ್ಮೂಲನಾಧಿಕಾರಿಗಳ ಕಚೇರಿವತಿಯಿಂದಆಯೋಜಿಸಲಾಗಿದ್ದ ಸ್ಪರ್ಶ್ ಕುಷ್ಠ ರೋಗಅರಿವುಜಾಥಾಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. ಸಮುದಾಯದಲ್ಲಿಕುಷ್ಠರೋಗದ ಬಗ್ಗೆ ಇರುವ ಕಳಂಕವನ್ನು ಕೊನೆಗೊಳಿಸಿ-ಘನತೆಯನ್ನು ಎತ್ತಿಹಿಡಿಯುವ ಮೂಲಕ ಕುಷ್ಠರೋಗ ಮುಕ್ತ ಸಮಾಜ ನಿರ್ಮಿಸಲು ಸಹಕರಿಸುವಂತೆತಿಳಿಸಿದರು.
ಜಿಲ್ಲಾಆರೋಗ್ಯ ಶಿಕ್ಷಣಾಧಿಕಾರಿ ಬಿ.ಎಸ್. ಗಂಗಾಧರ್‌ಅವರುಮಾತನಾಡಿ, ರಾಷ್ಟ್ರಪಿತ ಮಹಾತ್ಮಗಾಂಧೀಜಿಯವರು ಹುತಾತ್ಮ ದಿನವಾದಇಂದು ಕುಷ್ಠರೋಗಿಗಳನ್ನು ಪ್ರೀತಿ ವಿಶ್ವಾಸದಿಂದ ಡಿಕೊಂಡುಅವರಆತ್ಮಗೌರವಕ್ಕೆದಕ್ಕೆಬಾರದಂತೆ ನೋಡಿಕೊಳ್ಳಬೇಕು ಕುಷ್ಠರೋಗಕ್ಕೆಅಂಟಿರುವ ಕಳಂಕ ತಾರತಮ್ಯ ಹೋಗಲಾಡಿಸಲು ಬದ್ಧರಾಗಿ ಸಮಾಜದ ಮುಖ್ಯವಾಹಿನಿಯಲ್ಲಿಗೌರವಯುತವಾಗಿ ಬದುಕಲು ಅವಕಾಶ ಕಲ್ಪಿಸಬೇಕು. ತ್ಮಗಾಂಧೀಜಿಯವರಕನಸಾದಕುಷ್ಠರೋಗ ಮುಕ್ತ ಭಾರತಕಟ್ಟಲುಕಾಯ, ವಾಚ, ಮನಸ, ಶ್ರಮಿಸಬೇಕೆಂದು ಪ್ರತಿಜ್ಞಾವಿಧಿ ಬೋಧಿಸಿದರು.
ಜಾಗೃತಿಜಾಥಾರಾಮನಗರಟೌನ್ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಘೋಷಣೆ ಮತ್ತುಕರಪತ್ರ ವಿತರಣೆ ಮೂಲಕ ಅರಿವು ಮೂಡಿಸಿ ನಂತರ ವಾಟರ್‌ಟ್ಯಾಂಕ್ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಲಾಗಿತ್ತು. ಈ ಕಾರ್ಯಕ್ರಮದಲ್ಲಿಜಿಲ್ಲಾ ಆರ್.ಸಿ.ಎಚ್.ಅಧಿಕಾರಿಡಾ.ರಾಜು, ಮನೋವೈದ್ಯಡಾ. ಆದರ್ಶ್, ಆರೋಗ್ಯ ಮೇಲ್ವಿಚಾರಣಾಧಿಕಾರಿ ವಿನಯ್‌ಕುಮಾರ್, ಮೇಲ್ವಿಚಾರಕರಾದರಾಜು, ಅನುರೂಪ್, ಮನೋವೈದ್ಯಕೀಯಕಾರ್ಯಕರ್ತೆ ಪದ್ಮರೇಖಾ, ಆರೋಗ್ಯ ಸಿಬ್ಬಂದಿ, ಪೊಲೀಸ್ ಅಧಿಕಾರಿಗಳು, ವಿದ್ಯಾರ್ಥಿಗಳು, ಆಶಾ ಕಾರ್ಯಕರ್ತೆಯರು ಹಾಗೂ ಸಾರ್ವಜನಿಕರು ಹಾಜರಿದ್ದರು.