Sunday, April 20, 2025
Google search engine

Homeರಾಜ್ಯಸುದ್ದಿಜಾಲವಿದ್ಯಾರ್ಥಿಗಳಲ್ಲಿ ಸಮಯ ನಿರ್ವಹಣೆ ಬಹಳ ಮುಖ್ಯ: ಡಾ. ಶಿವಕುಮಾರ್

ವಿದ್ಯಾರ್ಥಿಗಳಲ್ಲಿ ಸಮಯ ನಿರ್ವಹಣೆ ಬಹಳ ಮುಖ್ಯ: ಡಾ. ಶಿವಕುಮಾರ್

ರಾಮನಗರ: ವಿದ್ಯಾಥಿಗಳು ತಮ್ಮ ಅಮೂಲ್ಯವಾದ ಜೀವನದಲ್ಲಿ ಯೋಜಿತರೂಪದಲ್ಲಿ ಅಭ್ಯಾಸ ಮಾಡುವ ಮೂಲಕ ಜ್ಞಾನವನ್ನು ವೃದ್ಧಿಸಿಕೊಳ್ಳಬೇಕು ಎಂದು ಅಕ್ಕ ಐಎಎಸ್‌ಅಕಾಡೆಮಿಯ ಸಂಸ್ಥಾಪಕ ಡಾ.ಶಿವಕುಮಾರ್ ಅವರು ತಿಳಿಸಿದರು. ಅವರು ಜ. ೩೦ರ ಮಂಗಳವಾರ ಬೆಂಗಳೂರು ವಿಶ್ವವಿದ್ಯಾಲಯದ ರಾಮನಗರ ಸ್ನಾತಕೋತ್ತರ ಕೇಂದ್ರದಲ್ಲಿ ಆಯೋಜಿಸಲಾಗಿದ್ದ ಶೈಕ್ಷಣಿಕ ಮುನ್ನೋಟ ಹಾಗೂ ಕಿರಿಯ ವಿದ್ಯಾರ್ಥಿಗಳಿಗೆ ಸ್ವಾಗತ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.

ವಿದ್ಯಾರ್ಥಿಗಳು ತಮಗೆ ದೊರೆಯುವ ಸಮಯವನ್ನುಯೋಜಿತವಾಗಿ ಬಳಸಿಕೊಂಡು ಪಠ್ಯಚಟುವಟಿಕೆಗಳಲ್ಲಿ ತೊಡಗಿಕೊಳ್ಳಬೇಕು, ಶಿಕ್ಷಣ ಪೂರ್ಣಗೊಳ್ಳುವ ವರೆಗೂಅದನ್ನು ಶ್ರದ್ದೆಯಿಂದ ಪಾಲಿಸುವುದನ್ನು ಅಳವಡಿಸಿಕೊಳ್ಳಬೇಕು, ಅದರಿಂದಜೀವನದಲ್ಲಿಯಶಸ್ಸುಕಾಣಲು ಸಾಧ್ಯ.೧೫-೨೫ರ ವಯಸ್ಸಿನಲ್ಲಿ ವಿದ್ಯಾರ್ಥಿಗಳು ಕನಿಷ್ಠ ದಿನಕ್ಕೆ ೬ ಗಂಟೆಗಳ ಕಾಲ ಅಭ್ಯಾಸಮಾಡುವುದನ್ನು ರೂಢಿಸಿಕೊಂಡಲ್ಲಿ ಮುಂದಿನ ಭವಿಷ್ಯಉಜ್ವಲವಾಗಿರುತ್ತದೆ ಎಂದರು. ಜ್ಞಾನವೇ ಶಕ್ತಿ.ಜ್ಞಾನಕ್ಕೆಜಗತ್ತಿನಾದ್ಯಂತ ಬೆಲೆಯಿದೆಆದರಿಂದ ನಿಮ್ಮಧನಾತ್ಮಕವಾದಆಸಕ್ತಿಯನ್ನು ಗುರುತಿಸಿಕೊಂಡು ಅದಕ್ಕೆ ಪೂರಕವಾದ ಸಿದ್ಧತೆ, ತರಬೇತಿ ಮತ್ತು ಮಾರ್ಗದರ್ಶನವನ್ನುತೆಗೆದುಕೊಂಡಲ್ಲಿ ಮಾತ್ರಯಶಸ್ಸುಕಾಣಲು ಸಾಧ್ಯವಾಗುತ್ತದೆಎಂದು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ರಾಮನಗರ ಸ್ನಾತಕೋತ್ತರ ಕೇಂದ್ರದ ನಿರ್ದೇಶಕ ಡಾ.ಡೊಮಿನಿಕ್‌ ಅವರು ಮಾತನಾಡಿ, ಪ್ರಸ್ತುತ ಸಮಾಜದಲ್ಲಿ ಹೆಚ್ಚು ಉದ್ಯೋಗಾವಕಾಶಗಳಿರುವ ಸೇವಾವಲಯ, ಸ್ವಉದ್ಯೋಗ, ತಂತ್ರಜ್ಞಾನ ಮುಕ್ತ ಆವಿಷ್ಕಾರಜಾಗತಿಕತಂತ್ರಜ್ಞಾನ ಕ್ಷೇತ್ರಗಳತ್ತ ವಿದ್ಯಾರ್ಥಿಗಳುತಮ್ಮ ಗಮನ ಹರಿಸುವುದರೊಂದಿಗೆತಮ್ಮ ಬದುಕನ್ನುರೂಪಿಸಕೊಳ್ಳಲು ಮುಂದಾಗಬೇಕುಎಂದು ವಿದ್ಯಾರ್ಥಿಗಳಲ್ಲಿ ಶಿಸ್ತು, ನೈತಿಕತೆಅತ್ಯಗತ್ಯಎಂದರು. ಸಮಾರಂಭದಲ್ಲಿಎಲ್ಲಾ ವಿಭಾಗದಅಧ್ಯಾಪಕರು, ಬೋಧಕೇತರ ಸಿಬ್ಬಂದಿ ವರ್ಗದವರು ಹಾಗೂ ವಿದ್ಯಾರ್ಥಿಗಳು ಹಾಜರಿದ್ದರು.

RELATED ARTICLES
- Advertisment -
Google search engine

Most Popular