Tuesday, April 22, 2025
Google search engine

Homeಸ್ಥಳೀಯಕೆ.ಆರ್.ಆಸ್ಪತ್ರೆಗೆ ಕರ್ನಾಟಕ ಮಾನವ ಹಕ್ಕುಗಳ ಆಯೋಗದ ಅಧ್ಯಕ್ಷರ ದಿಢೀರ್ ಭೇಟಿ, ಪರಿಶೀಲನೆ

ಕೆ.ಆರ್.ಆಸ್ಪತ್ರೆಗೆ ಕರ್ನಾಟಕ ಮಾನವ ಹಕ್ಕುಗಳ ಆಯೋಗದ ಅಧ್ಯಕ್ಷರ ದಿಢೀರ್ ಭೇಟಿ, ಪರಿಶೀಲನೆ

ಮೈಸೂರು : ನಗರದ ಕೆ.ಆರ್.ಆಸ್ಪತ್ರೆಗೆ ಕರ್ನಾಟಕ ರಾಜ್ಯ ಮಾನವ ಹಕ್ಕುಗಳ ಆಯೋಗದ ಅಧ್ಯಕ್ಷರಾದ ಎಲ್. ನಾರಾಯಣಸ್ವಾಮಿ ಅವರು ಇಂದು ಸಂಜೆ ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ಸಂದರ್ಭದಲ್ಲಿ ವಾರ್ಡ್ಗಳು ಹಾಗೂ ರೇಡಿಯೋ ಡಯಾಗ್ನೋಸಿಸ್ ವಿಭಾಗ, ಎಕ್ಸ್ ರೇ ವಿಭಾಗ, ಆಪರೇಷನ್ ಥಿಯೇಟರ್‌ಗಳು ಮತ್ತು ಇತರೆ ಸ್ಥಳಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಬಳಿಕ ಔಷಧಗಳ ದಾಸ್ತಾನು ದಾಖಲಾತಿಯನ್ನು ಹಾಗೂ ರೋಗಿಗಳು ಹಾಗೂ ರೋಗಿಗಳ ಸಂಬAಧಿಕರ ಕುಂದುಕೊರತೆಗಳ ಆಲಿಸಿದರು. ಗ್ರಾಮೀಣ ಪ್ರದೇಶದಿಂದ ಆಸ್ಪತ್ರೆಗೆ ಬರುವವವರು ಬಡವರು ಉತ್ತಮವಾದ ಆರೋಗ್ಯ ಸೇವೆ ದೊರೆಯಬೇಕು. ಆಸ್ಪತ್ರೆಯಲ್ಲಿ ಶುಚಿತ್ವ ಕಾಪಾಡಿಕೊಳ್ಳಬೇಕು. ಈ ಸಂಬoಧ ಭೇಟಿ ನೀಡಿ ಪರಿಶೀಲನೆ ನಡೆಸಲಾಗಿದ್ದು ಯಾವುದೇ ಗುರುತರವಾದ ಸಮಸ್ಯೆ ಕಂಡು ಬಂದಿರುವುದಿಲ್ಲ ಎಂದು ಅವರು ತಿಳಿಸಿದರು. ಆದರೆ ಮರಣ ಪ್ರಮಾಣ ಪತ್ರ ವಿತರಣೆ ತಡವಾಗುತ್ತಿರುವ ಬಗ್ಗೆ ಅಧಿಕಾರಿಗಳು ಗಮನಹರಿಸಿ ಬೇಗ ಸಿಗುವಂತೆ ಅಗತ್ಯ ಕ್ರಮ ವಹಿಸಬೇಕು ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ಮಾನವ ಹಕ್ಕುಗಳ ಆಯೋಗದ ಸದಸ್ಯರಾದ ಡಾ ಟಿ .ಶ್ಯಾಮ್ ಭಟ್, ಡಾ ಎಸ್.ಕೆ. ವೆಂಟಗೋಡಿ , ಆರ್.ಎಂ.ಓ ಡಾ. ನಯಜ್ ಹಾಗೂ ಮೆಡಿಕಲ್ ಸೂಪರಿಂಟೆoಡೆoಟ್ ಡಾ. ಶೋಭಾ ಹಾಗೂ ವೈದ್ಯರು ಉಪಸ್ಥಿತರಿದ್ದರು.

RELATED ARTICLES
- Advertisment -
Google search engine

Most Popular