ಮೈಸೂರು: ಮೈಸೂರಿನ ಹೆಬ್ಬಾಳ್ ಪ್ರದೇಶದಲ್ಲಿರುವ ಭಾರತ್ ಕ್ಯಾನ್ಸರ್ ಹಾಸ್ಪಿಟಲ್ ಎದುರು ಜೊತಿರ್ಗಮಯ ಮ್ಯಾನ್ಷನ್ ಹಾಲ್ ನಲ್ಲಿ ಕೇಂದ್ರದ ಪ್ರಾಧಿಕಾರ ನಡೆಸುವ JEE ಇಂಜಿನಿಯರಿಂಗ್ ಪದವಿ ಪ್ರವೇಶ ಪರೀಕ್ಷೆ ಇಂದು (ಫೆಬ್ರವರಿ1) ಸೆಂಟರ್ ನೀಡಿದೆ. ಆದರೆ ಪರೀಕ್ಷೆ ಬರೆಯುತ್ತಿರುವ ವಿದ್ಯಾರ್ಥಿಗಳಿಗೆ ಬಹಳಷ್ಟು ಅನಾನುಕೂಲವಾಗಿದೆ.
ಇಲ್ಲಿಯ ಜೋಡಿ ರಸ್ತೆ ಸಾಕಷ್ಟು ಟ್ರಾಫಿಕ್ ನಿಂದ ಕೂಡಿದ್ದು, ಸುಡು ಬಿಸಿಲಿನಲ್ಲಿ ನಿಲ್ಲಿಸಿ ವಿದ್ಯಾರ್ಥಿಗಳ ದಾಖಲೆ ತಪಾಸಣೆ ಮಾಡಲಾಗುತ್ತಿದೆ.

ಇದೇ ಸಮಯದಲ್ಲಿ ವಿದ್ಯಾರ್ಥಿಗಳ ಬ್ಯಾಗ್ ಗಳನ್ನು ಸೆಂಟರ್ ನಲ್ಲಿ ಇರಿಸಿಕೊಳ್ಳಲು 10-15 ರೂ. ಗಳನ್ನು ಅಲ್ಲಿನ ಸಿಬ್ಬಂದಿಗಳು ವಸೂಲಿ ಮಾಡುತ್ತಿದ್ದಾರೆ. ಪ್ರವೇಶ ಪರೀಕ್ಷೆ ನಡೆಸಲು ಹಲವಾರು ಶೈಕ್ಷಣಿಕ ಸಂಸ್ಥೆಗಳು ಲಭ್ಯವಿದ್ದರೂ.. ಮೈಸೂರು ಹೊರಗಡೆ ಈ ರೀತಿಯ ಮ್ಯಾನ್ ಷನ್ ಹಾಲ್ ಗಳಲ್ಲಿ ನಡೆಸುವುದು ಎಷ್ಟು ಸರಿ. ಅಲ್ಲಿ ಮೂಲಭೂತ ಸೌಲಭ್ಯಗಳ ಕೊರತೆಯಿದ್ದು, ರಸ್ತೆ ಕಿರಿದಾಗಿದೆ.
ಮಾತ್ರವಲ್ಲದೇ ಬಾರಿ ಟ್ರಕ್ ಮತ್ತು ಲಗೇಜ್ ವಾಹನಗಳು ಓಡಾಡುತ್ತಿದ್ದು, ಪರೀಕ್ಷೆ ನಡೆಸಲು ಇರಬೇಕಾದ ಅಗತ್ಯ ವಾತಾವರಣ ಇಲ್ಲದಿರುವುದು ವಿಷಾದನೀಯ ಸಂಗತಿಯಾಗಿದೆ.
ಸಂಬಂದಿಸಿದ ಅಧಿಕಾರಿಗಳು ಇತ್ತ ಗಮನ ಹರಿಸಿ ಪ್ರವೇಶ ಪರೀಕ್ಷೆ ನಡೆಸಲು ಇರಬೇಕಾದ ಕನಿಷ್ಠ ಸೌಲಭ್ಯ ಗಳ ಕುರಿತು ಚರ್ಚೆ ಮಾಡಿ ನಂತರ ಅನುಮತಿ ನೀಡಬೇಕು ಎಂದು ವಿದ್ಯಾರ್ಥಿಗಳು ಒತ್ತಾಯಿಸಿದ್ದಾರೆ.