Sunday, April 20, 2025
Google search engine

Homeರಾಜ್ಯಸುದ್ದಿಜಾಲಕೇಂದ್ರ ಬಜೆಟ್ ಚುನಾವಣಾ ಗಿಮಿಕ್ : ಸಚಿವ ಎನ್ ಚಲುವರಾಯಸ್ವಾಮಿ

ಕೇಂದ್ರ ಬಜೆಟ್ ಚುನಾವಣಾ ಗಿಮಿಕ್ : ಸಚಿವ ಎನ್ ಚಲುವರಾಯಸ್ವಾಮಿ

ಮಂಡ್ಯ: ಈ ಬಾರಿ ಕೇಂದ್ರ ಬಜೆಟ್ ಕೃಷಿಕರಿಗೆ ಮತ್ತೆ ನಿರಾಸೆ ಮೂಡಿಸಿದೆ . ಇದೊಂದು ಚುನಾವಣಾ ಗಿಮಿಕ್ ಬಜೆಟ್ ಎಂದಷ್ಟೇ ಹೇಳಬಹುದು ಎಂದು ಕೃಷಿ ಸಚಿವ ಎನ್ ಚಲುವರಾಯಸ್ವಾಮಿ ಪ್ರತಿಕ್ರಿಯೆ ನೀಡಿದ್ದಾರೆ. ಕೇವಲ ಅನ್ನದಾತರಿಗೆ ಆದ್ಯತೆ ಎಂಬ ಘೋಷಣೆ ಇದೆ.ಅದರೆ ನಿರೀಕ್ಷಿತ ದೂರ ದೃಷ್ಟಿ ಚಿಂತನೆಯ ಯೋಜನೆಗಳು ಇದರಲ್ಲಿ ಕಾಣುತ್ತಿಲ್ಲ ಎಂದು ಸಚಿವರು ಅಭಿಪ್ರಾಯ ಪಟ್ಟಿದ್ದಾರೆ.

ರಸಗೊಬ್ಬರಗಳ ಬೆಲೆ ಇಳಿಸಬೇಕೆಂಬ ರೈತರ ಕೂಗಿಗೆ ಯಾವುದೇ ಸ್ಪಂದನೆ ದೊರೆತಿಲ್ಲ. ಕಳೆದ ೧೦ ವರ್ಷಗಳಿಂದ ಗೊಬ್ಬರದ ಬೆಲೆ ಏರಿಕೆಯಿಂದ ಕೃಷಿಕ ದೊಡ್ಡ ಹೊರೆ ಹೊರುವಂತಾಗಿದೆ. ಸಬ್ಸಿಡಿಯೂ ಹೆಚ್ಚಳ ಮಾಡಿಲ್ಲ .

ಬರ ನಿರ್ವಹಣೆ: ಸಂಕಷ್ಟದಲ್ಲಿ ಇರುವ ರೈತರಿಗೆ ನೆರವಿನ ಯೋಜನೆಗಳು ಇಲ್ಲ. ಕರ್ನಾಟಕದ ಪಾಲಿಗಂತೂ ತಂಬಾ ನಿರಾಶಾದಾಯಕವಾಗಿದೆ.

ನೇರ ತೆರಿಗೆ ಹೆಚ್ಚಳವಾಗಿದೆ: ಅಲ್ಲದೆ ಆದಾಯ ತೆರಿಗೆ ಸ್ಲಾಬ್ ಪರಿಷ್ಕರಣೆ ಮಾಡಬಹುದೆಂಬ ನಿರೀಕ್ಷೆ ಹುಸಿಯಾಗಿದೆ ಎಂದು ಚಲುವರಾಯಸ್ವಾಮಿ ಹೇಳಿದ್ದಾರೆ.

RELATED ARTICLES
- Advertisment -
Google search engine

Most Popular