ರಾಮನಗರ: ಬೆಂಕಿ ಕಿಡಿಯಿಂದಾಗಿ ಹೂ, ಗಿಡಗಳು ಹೊತ್ತಿ ಉರಿದಿರುವಂತಹ ಘಟನೆ ಬೆಂಗಳೂರು-ಮೈಸೂರು ಎಕ್ಸ್ಪ್ರೆಸ್ ಹೈವೇಯ ಮಾಯಗಾನಹಳ್ಳಿ ಸಮೀಪ ನಡೆದಿದೆ. ಸಿಗರೇಟ್ ಸೇದಿ ಬಿಸಾಕಿದ ಪರಿಣಾಮ ಕಿಡಿ ಹತ್ತಿಕೊಂಡಿರುವ ಶಂಕೆ ವ್ಯಕ್ತವಾಗಿದೆ. ಸುಂದರವಾಗಿ ಕಾಣಿಸಲು ರಾಷ್ಟ್ರೀಯ ಹೆದ್ದಾರಿಯ ಡಿವೈಡರ್ನಲ್ಲಿ ನೆಡಲಾಗಿದ್ದ ಹೂ, ಗಿಡಗಳಿಗೆ ಬೆಂಕಿ ತಗುಲಿದೆ. ರಾಷ್ಟ್ರೀಯ ಹೆದ್ದಾರಿಯಲ್ಲಿ ಹೊಗೆ ಆವರಿಸಿಕೊಂಡಿದ್ದು, ಸಾರ್ವಜನಿಕರ ವಾಹನ ತಡೆದು ಪೊಲೀಸರು ನೀರು ಹಾಕುತ್ತಿದ್ದಾರೆ. ರಾಷ್ಟ್ರೀಯ ಹೆದ್ದಾರಿ ಸುಂದರವಾಗಿ ಕಾಣಿಸಲು ಕೋಟ್ಯಾಂತರ ರೂ. ವೆಚ್ಚದಲ್ಲಿ ಗಿಡಗಳನ್ನು ಬೆಳೆಸುವುದಕ್ಕೆ ಖರ್ಚು ಮಾಡಲಾಗಿದೆ.
ನೀರಿನ ವಾಹನ ಬರಲು ತಡವಾದ ಹಿನ್ನೆಲೆ ಸಾರ್ವಜನಿಕರ ವಾಹನ ತಡೆದು ಬಾಟಲ್ ನೀರು ಹಾಕಲಾಗುತ್ತಿದೆ. ಇನ್ನಷ್ಟು ಬೆಂಕಿ ಹರಡದಂತೆ ಪೊಲೀಸರು ಬಾಟಲ್ ನೀರು ಹಾಕುತ್ತಿದ್ದಾರೆ. ಎಷ್ಟೇ ಬಾಟಲ್ ನೀರು ಹಾಕಿದರೂ ಬೆಂಕಿ ಮಾತ್ರ ಆರುತ್ತಿಲ್ಲ.