ತುಮಕೂರು: ವಿಷಕಾರಿ ಆಹಾರ ಸೇವನೆಯಿಂದಾಗಿ 42 ಕುರಿಗಳು ಸಾವನ್ನಪ್ಪಿರುವ ಘಟನೆ ಶುಕ್ರವಾರ ಪಾವಗಡ ತಾಲೂಕಿನ ವಡ್ರೆವು ಗ್ರಾಮದ ಸಮೀಪದ ಜಮೀನೊಂದರಲ್ಲಿ ನಡೆದಿದೆ.
ವಡ್ರೆವು ಗ್ರಾಮದ ಗೋಪಾಲ, ಆಂಜನೇಯ,ರಂಗಮ್ಮ, ಎನ್ನುವರು ಕುರಿಗಳನ್ನುಹೊಲಗಳಲ್ಲಿ ಮೇಯಿಸಲು ಹೋಗಿದ್ದು ಈ ಸಂದರ್ಭದಲ್ಲಿ ಜಮೀನೊಂದರಲ್ಲಿ ಇದ್ದ ವಿಷಕಾರಿ ಸೊಪ್ಪನ್ನು ತಿಂದು ಮೂರು ರೈತರಿಗೆ ಸೇರಿದ ಸುಮಾರು 42 ಕುರಿಗಳು ಸಾವನಪ್ಪಿರುವ ಘಟನೆ ನಡೆದಿದೆ. ಗೋಪಾಲ ಅವರಿಗೆ ಸೇರಿದ 27 ಕುರಿಗಳು, ಅಂಜನೇಯನಿಗೆ ಸೇರಿದ 9 ಕುರಿಗಳು, ರಂಗಮ್ಮಗೆ ಸೇರಿದ 6 ಕುರಿಗಳು ಸತ್ತಿವೆ.
ಸ್ಥಳಕ್ಕೆ ಪಶುಪಾಲನಾ ಇಲಾಖೆಯ ಸಹಾಯಕ ನಿರ್ದೇಶಕರಾದ ಹೋರಕೇರಪ್ಪ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ಕುರಿಗಳ ಮರಣೋತ್ತರ ಪರೀಕ್ಷೆಯನ್ನು ನಡೆಸಿ ಒಂದಷ್ಟು ಮಾದರಿಗಳನ್ನು ಪ್ರಯೋಗಾಲಯಕ್ಕೆ ರವಾನಿಸಿದ್ದಾರೆ.
ಜೀವನಕ್ಕೆ ಕುರಿಗಳನ್ನೇ ಅವಲಂಬಿಸಿದ್ದ ರೈತರು.ತಾವು ಸಾಕಿದ್ದ ಕುರಿಗಳು ಸಾವಿಗೀಡಾದ ಹಿನ್ನೆಲೆ ಬಿಕ್ಕಿ ಬಿಕ್ಕಿ ಅತ್ತಿದ್ದಾರೆ.ಸೂಕ್ತ ಪರಿಹಾರ ನೀಡುವಂತೆ ಒತ್ತಾಯಿಸಿದ್ದಾರೆ. ರೈತರು ಬದುಕಿಗೆ ಏನು ಮಾಡಬೇಕೆಂದು ತಿಳಿಯದೆ ಕಂಗಾಲಾಗಿದ್ದಾರೆ. ತಿರುಮಣಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.