ಹೆಚ್.ಡಿ.ಕೋಟೆ: ಎಸ್.ಎಸ್ ಫೌಂಡೇಶನ್ ಮತ್ತು ನ್ಯೂ ಹಾರಿಜಾನ್ ಸಂಸ್ಥೆಯ ವತಿಯಿಂದ ಎಚ್. ಡಿ. ಕೋಟೆ ತಾಲೂಕಿನ ಅಣ್ಣೂರು ಕೆರೆ ಹಾಡಿ, ಕೈಲಾಸಪುರ ಹಾಡಿ, ಹೊಸಳ್ಳಿ ಹಾಡಿ, ಮುಷ್ಕೆರೆ ಹಾಡಿಗಳ 125 ಕ್ಕೂ ಹೆಚ್ಚು ಕುಟುಂಬಗಳಿಗೆ 60,000 ಮೊತ್ತದ ಗೃಹೋಉಪಯೋಗಿ ಸಾಮಗ್ರಿಗಳನ್ನು ವಿತರಣೆ ಮಾಡಲಾಯಿತು.
ಈ ಸಂದರ್ಭದಲ್ಲಿ ಸಂಘಟನೆಯ ಪ್ರಮುಖರಾದ ಸೂರ್ಯನಾರಾಯಣ್, ಬೆಂಗಳೂರಿನ ಉದ್ಯಮಿ ವಿಕ್ರಂ ಜಿ , ವಿಹಿಂಪ ಜಿಲ್ಲಾ ಕಾರ್ಯದರ್ಶಿ ಮಹದೇವಪ್ಪ ಮತ್ತು ನ್ಯೂ ಹರಿಜಾನ್ ಸಂಸ್ಥೆಯ ಅಧ್ಯಾಪಕರು ಮತ್ತು 30 ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.
