Sunday, April 20, 2025
Google search engine

Homeರಾಜಕೀಯಸಿದ್ದಗಂಗಾ ಡಾ. ಶಿವಕುಮಾರ ಶ್ರೀಗಳಿಗೂ ಭಾರತ ರತ್ನ ಪ್ರಶಸ್ತಿ ಕೊಡಬೇಕಿತ್ತು: ಡಿ.ಕೆ.ಶಿವಕುಮಾರ

ಸಿದ್ದಗಂಗಾ ಡಾ. ಶಿವಕುಮಾರ ಶ್ರೀಗಳಿಗೂ ಭಾರತ ರತ್ನ ಪ್ರಶಸ್ತಿ ಕೊಡಬೇಕಿತ್ತು: ಡಿ.ಕೆ.ಶಿವಕುಮಾರ

ವಿಜಯಪುರ: ಹಿರಿಯ ರಾಜಕೀಯ ನಾಯಕ ಲಾಲ್ ಕೃಷ್ಣ ಅಡ್ವಾಣಿ ಅವರಿಗೆ ಕೇಂದ್ರ ಸರ್ಕಾರ ಭಾರತರತ್ನ ಪ್ರಶಸ್ತಿ ಘೋಷಣೆ ಮಾಡಿರುವುದಕ್ಕೆ ನಮ್ಮ ತಕರಾರಿಲ್ಲ. ಆದರೆ ಜ್ಞಾನ ದಾಸೋಹಿ ಸಿದ್ದಗಂಗಾ ಡಾ. ಶಿವಕುಮಾರ ಶ್ರೀಗಳಿಗೂ ಭಾರತ ರತ್ನ ಪ್ರಶಸ್ತಿ ಕೊಡಬೇಕಿತ್ತು ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ಪ್ರತಿಕ್ರಿಯಿಸಿದ್ದಾರೆ.

ಶನಿವಾರ ಜಿಲ್ಲೆಯ ಬಸವನ ಬಾಗೇವಾಡಿ ಪಟ್ಟಣದಲ್ಲಿ ಮೂಲ ನಂದೀಶ್ವರನಿಗೆ ಪೂಜೆ ಸಲ್ಲಿಸಿದ ಬಳಿಕ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ನಾಡಿನಲ್ಲಿ ಅನ್ನದಾಸೋಹ, ಜ್ಞಾನದಾಸೋಹದ ಮೂಲಕ ಹೆಸರಾದವರು ಸಿದ್ಧಗಂಗಾ ಮಠದ ಡಾ.ಶಿವಕುಮಾರ ಶ್ರೀಗಳು ಎಂದರು.

ದಾಸೋಹ ಮೂರ್ತಿ ಸಿದ್ಧಗಂಗಾ ಡಾ.ಶಿವಕುಮಾರ ಶ್ರೀಗಳಿಗೆ ಭಾರತರತ್ನ ಪ್ರಶಸ್ತಿ ಕೊಡುವಂತೆ ರಾಜ್ಯ ಸರ್ಕಾರದಿಂದಲೂ ಕೇಂದ್ರಕ್ಕೆ ಮನವಿ ಮಾಡಿದ್ದೆವು. ದಾಸೋಹಮೂರ್ತಿಗೆ ಭಾರತರತ್ನ ಗೌರವ ಸಿಗಬೇಕು ಎಂಬುದು ನಮ್ಮ ಅಶಯ, ಒತ್ತಾಯವೂ ಹೌದು ಎಂದರು.

RELATED ARTICLES
- Advertisment -
Google search engine

Most Popular