Sunday, April 20, 2025
Google search engine

Homeರಾಜ್ಯಫೆ.೧೦ರಂದು ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನವನದಲ್ಲಿ ರೈತರ ಬೃಹತ್ ಸಮಾವೇಶ

ಫೆ.೧೦ರಂದು ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನವನದಲ್ಲಿ ರೈತರ ಬೃಹತ್ ಸಮಾವೇಶ

ವರದಿ: ವಿನಯ್ ದೊಡ್ಡಕೊಪ್ಪಲು

ಕೆ.ಆರ್.ನಗರ : ರೈತಸಂಘದ ಹಿರಿಯ ಚೇತನ ಪ್ರೊ.ಎಂ.ಡಿ.ನಂಜುಂಡಸ್ವಾಮಿಯವರ ನೆನಪಿಗೋಸ್ಕರ ಫೆ.೧೦ರ ಶನಿವಾರ ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನವನದಲ್ಲಿ ರೈತರ ಬೃಹತ್ ಸಮಾವೇಶ ಮತ್ತು ಕೇಂದ್ರ-ರಾಜ್ಯ ಸರಕಾರಗಳು ರೈತಪರ ಬಜೆಟ್ ರೂಪಿಸಲು ಹಕ್ಕೊತ್ತಾಯ ಮಂಡನೆ ಮಂಡಿಸಲಾಗುವುದು ಎಂದು ರೈತಸಂಘದ ಜಿಲ್ಲಾಧ್ಯಕ್ಷ ಹೊಸೂರುಕುಮಾರ್ ಹೇಳಿದರು.

ಪಟ್ಟಣದ ಪ್ರವಾಸಿಮಂದಿರದಲ್ಲಿ ಸಮಾವೇಶ ಸಂಬಂಧ ನಡೆದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಅಂದು ಬೆಳಿಗ್ಗೆ ೧೧ ಗಂಟೆಗೆ ನಡೆಯುವ ಸಮಾವೇಶದಲ್ಲಿ ಸರಕಾರ ಬಜೆಟ್‌ನಲ್ಲಿ ಯಾವ ಅಂಶಗಳನ್ನು ಸೇರಿಸಬೇಕು ಯಾವ ರೈತರಿಗೆ ಆಗಬೇಕಾದ ಕಾರ್ಯಕ್ರಮಗಳನ್ನು ಜಾರಿಗೆ ತರಬೇಕೆಂಬ ಎಂಬ ಉದ್ಧೇಶ ಮುಂದಿಟ್ಟುಕೊಂಡು ಸಮಾವೇಶ ಮಾಡಲಾಗುತ್ತಿದ್ದು ಸಮಾವೇಶಕ್ಕೆ ರಾಜ್ಯದ ಎಲ್ಲೆಡೆಯಿಂದ ೫೦ ಸಾವಿರಕ್ಕೂ ಹೆಚ್ಚುಮಂದಿ ಪಾಲ್ಗೊಳ್ಳಲಿದ್ದು ಅಂದಿನ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿಗಳಿಗೆ ಮುಂದಿನ ಬಜೆಟ್‌ನಲ್ಲಿ ರೈತಪರ ಬಜೆಟ್ ಮಂಡಿಸುವಂತೆ ಹಾಗೂ ರೈತಪರ ಯಾವ ಯಾವ ತೀರ್ಮಾನ ಕೈಗೊಳ್ಳುತ್ತಾರೆ ಎಂಬ ಬಗ್ಗೆ ಚರ್ಚೆಮಾಡಿ ಹಲವಾರು ಒತ್ತಾಯಗಳನ್ನು ಮನವಿ ಪತ್ರದ ಮೂಲಕ ಸಲ್ಲಿಸಲಾಗುವುದು ಎಂದರು.

ರೈತಸಂಘದ ರಾಜ್ಯಾಧ್ಯಕ್ಷ ಬಡಗಲಪುರನಾಗೇಂದ್ರ ಅಂದಿನ ಸಭೆಯ ಅಧ್ಯಕ್ಷತೆ ವಹಿಸಿ ಹಕ್ಕೊತ್ತಾಯ ಮಂಡಿಸಲಿದ್ದಾರೆ, ಸಮಾಜ ಕಲ್ಯಾಣ ಸಚಿವ ಡಾ.ಹೆಚ್.ಸಿ.ಮಹದೇವಪ್ಪ, ಮುಖ್ಯಮಂತ್ರಿಗಳ ಸಲಹೆಗಾರ ಬಿ.ಆರ್.ಪಾಟೀಲ್, ಶಾಸಕ ದರ್ಶನ್‌ಪುಟ್ಟಣ್ಣಯ್ಯ, ರಾಜ್ಯ ರೈತಸಂಘದ ಗೌರವಾಧ್ಯಕ್ಷ ಚಾಮರಸಮಾಲೀ ಪಾಟೀಲ್ ಹಾಗೂ ರೈತಸಂಘದ ವಿವಿಧ ನಾಯಕರು ಪಾಲ್ಗೊಳ್ಳಲಿದ್ದಾರೆ ಎಂದರು.

ಈ ಒಂದು ಮಹತ್ವದ ಕಾರ್ಯಕ್ರಮಕ್ಕೆ ಕೇವಲ ರೈತಮುಖಂಡರು ಮಾತ್ರ ಭಾಗವಹಿಸುವುದಲ್ಲ ಪ್ರತಿಯೊಬ್ಬ ರೈತರು, ರೈತಕಾರ್ಮಿಕರು, ರೈತಮಹಿಳೆಯರು, ರೈತಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ರೈತಹೋರಾಟ ಬೆಂಬಲಿಸುವAತೆ ಹೇಳಿದರು. 

ಸಭೆಯಲ್ಲಿ ರೈತಸಂಘದ ಜಿಲ್ಲಾಕಾರ್ಯದರ್ಶಿ ವಿನಯ್‌ಕುಮಾರ್, ತಾಲೂಕು ಅಧ್ಯಕ್ಷ ಎಂ.ಜೆ.ಮಲ್ಲೇಶ್, ಸಾಲಿಗ್ರಾಮ ತಾಲೂಕು ಅಧ್ಯಕ್ಷ ಶೇಖರ್, ಗೌರವಾಧ್ಯಕ್ಷ ಎಂ.ಎಸ್.ನಟರಾಜ್, ರಾಜ್ಯ ಮಹಿಳಾ ಕಾರ್ಯದರ್ಶಿ ನೇತ್ರಾವತಿ, ಮುಖಂಡರಾದ ಕೆ.ಎಲ್.ಸ್ವಾಮಿ, ತಿಪ್ಪೂರುಮಲ್ಲೇಶ್, ಕಾಳೇಗೌಡ, ಎ.ಡಿ.ಮಂಜುನಾಥ್, ಪಟೇಲ್‌ಬಸಪ್ಪ, ಶಿವಣ್ಣ, ಬ್ಯಾಡರಹಳ್ಳಿಕುಬೇರಪ್ಪ, ಎಂ.ಎಸ್.ಕುಮಾರ್, ಕುಮಾರಸ್ವಾಮಿ, ಮಂಜು, ಶ್ರೀನಿವಾಸ್, ಮತ್ತಿತರರು ಪಾಲ್ಗೊಂಡಿದ್ದರು.

RELATED ARTICLES
- Advertisment -
Google search engine

Most Popular