ಮೈಸೂರು: ವಾಹನಗಳನ್ನ ಅಡ್ಡಗಟ್ಟಿ ಹಣ ಸುಲಿಗೆ ಮಾಡುತ್ತಿದ್ದ ಇಬ್ಬರು ಯುವಕರನ್ನ ಹೆಚ್.ಡಿ.ಕೋಟೆ ಠಾಣಾ ಪೊಲೀಸರು ಬಂಧಿಸಿದ್ದಾರೆ.
ಹೆಚ್.ಡಿ.ಕೋಟೆ ಕೋಳಗಾಲದ ಇಬ್ಬರು ಯುವಕರನ್ನ ಪೊಲೀಸರು ಕಾರ್ಯಾಚರಣೆ ನಡೆಸಿ ವಶಕ್ಕೆ ಪಡೆದಿದ್ದಾರೆ.
ಮಾನಂದವಾಡಿ ಮುಖ್ಯರಸ್ತೆಯಲ್ಲಿ ವಾಹನ ಅಡ್ಡಗಟ್ಟಿ ದರೋಡೆಕೋರರು ಹಣ ವಸೂಲಿ ಮಾಡುತ್ತಿದ್ದರು. ಈ ವೇಳೆ ಪುಂಡರು ಲಾರಿಯೊಂದನ್ನ ಅಡ್ಡಗಟ್ಟಿ ಹಣಕ್ಕಾಗಿ ಚಾಲಕನಿಗೆ ಡಿಮ್ಯಾಂಡ್ ಮಾಡಿದ್ದರು. ಈ ವೇಳೆ ಹಣ ಇಲ್ಲ ಎಂದು ಚಾಲಕ ಹೇಳಿದ್ದು, ಬಳಿಕ ಹಣವನ್ನ ಆನ್ ಲೈನ್ ನಲ್ಲಿ ದರೋಡೆಕೋರರು ವರ್ಗಾಯಿಸಿಕೊಂಡಿದ್ದಾರೆ.
ಆನ್ ಲೈನ್ ಮೂಲಕ ಹಣ ವರ್ಗಾವಣೆ ಜಾಡು ಹಿಡಿದ ಪೊಲೀಸರು ಇಬ್ಬರು ದರೋಡೆಕೋರರನ್ನ ಬಂಧಿಸಿದ್ದು, ಮತ್ತಿಬ್ಬರಿಗಾಗಿ ಶೋಧ ಕಾರ್ಯ ನಡೆಸುತ್ತಿದ್ದಾರೆ. ಹಣ ವಸೂಲಿ ಮಾಡಿದ್ದ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ಲಾಗಿತ್ತು. ಇದೀಗ ಗೂಗಲ್ ಫೇ ನಲ್ಲಿ ಹಣ ವರ್ಗಾವಣೆ ಮಾಡಿಸಿಕೊಂಡು ಕಿರಾತಕರು ಸಿಕ್ಕಿಬಿದ್ದಿದ್ದಾರೆ.