ಮದ್ದೂರು: ನಾಲೆಗಳಿಗೆ ನೀರು ಹರಿಸುವಂತೆ ಒತ್ತಾಯಿಸಿ ಮದ್ದೂರಿನ ನೀರಾವರಿ ಇಲಾಖೆ ಕಚೇರಿ ಎದುರು ರೈತರು ಪ್ರತಿಭಟನೆ ನಡೆಸಿದರು.
ಮದ್ದೂರಮ್ಮ ಕೆರೆಯ ಅಚ್ಚುಕಟ್ಟು ಪ್ರದೇಶದಲ್ಲಿ ಕಬ್ಬು ಒಣಗುತ್ತಿದೆ. ಹಾಗೂ ಕಪು ತಳಿ ರೋಗದಿಂದ ಬಳಲುತ್ತಿರುವ ತೆಂಗಿನ ಮರವನ್ನ ರಕ್ಷಿಸಲು ರೈತರು ಆಗ್ರಹಿಸಿದರು.
ನೀರಾವರಿ ಇಲಾಖಾಧಿಕಾಗಳ ವಿರುದ್ಧ ಘೋಷಣೆ ಕೂಗಿ ಆಕ್ರೋಶ ಹೊರಹಾಕಿದರು.
ಮದ್ದೂರಮ್ಮನ ಕೆರೆಯಲ್ಲಿ ನೀರು ಇದ್ದರೂ ಕೆಮ್ಮಣ್ಣುನಾಲೆ, ಚಾಮನಹಳ್ಳಿ ನಾಲೆಗಳಿಗೆ ನೀರು ಬಿಡುತ್ತಿಲ್ಲ. ಕೂಡಲೇ ನೀರನ್ನ ನಾಲೆಗಳಿಗೆ ಹರಿಸಬೇಕು ಬೆಳೆಗಳನ್ನ ರಕ್ಷಣೆ ಮಾಡುವಂತೆ ಒತ್ತಾಯಿಸಿದರು.
ಪ್ರಗತಿಪರ ಚಿಂತಕ ನ.ಲ್ಲಿ ಕೃಷ್ಣ ನೇತೃತ್ವದಲ್ಲಿ ಪ್ರತಿಭಟನೆ ಹಮ್ಮಿಕೊಂಡಿದ್ದು, ಪ್ರತಿಭಟನೆಯಲ್ಲಿ ತಾಲ್ಲೂಕಿನ ರೈತ ಮುಖಂಡರು ಹಾಗೂ ರೈತರು ಭಾಗಿಯಾಗಿದ್ದರು.