ಮೈಸೂರು: ಫೆ.7 ರಿಂದ 10ರವರೆಗೆ ದೆಹಲಿಯಲ್ಲಿನ ಯಮುನಾ ಸ್ಪೋರ್ಟ್ಸ್ ಕಾಂಪ್ಲೆಕ್ಸ್ ನಲ್ಲಿ ನಡೆಯಲಿರುವ 9ನೇ ಸಾಲಿನ ರಾಷ್ಟ್ರೀಯ ಡ್ಯೂ ಬಾಲ್ ರಾಷ್ಟ್ರೀಯ ಪಂದ್ಯಾವಳಿಗೆ ಮೈಸೂರಿನ ಎಸ್.ಬಿ.ಆರ್.ಆರ್.ಮಹಾಜನ ಕಾಲೇಜಿನ ವಿದ್ಯಾರ್ಥಿಗಳಾದ ಭೂಮಿಕ. ಎಮ್, ಇಚ್ಛಾ ಎಚ್. ಆರ್ ಮತ್ತು ಸೌಮ್ಯ .ಬಿ .ಎಮ್ ಆಯ್ಕೆಯಾಗಿರುತ್ತಾರೆ.
ಇವರ ಪರಿಶ್ರಮವೇ ಈ ಸಾಧನೆಗೆ ಕಾರಣ ಎನ್ನತ್ತಾರೆ ತರಬೇತುದಾರರಾದ ಸಂಸ್ಥೆಯ ಸಿದ್ದರಾಜು ಹಾಗೂ ಇವರ ಸಾಧನೆಗೆ ಕಾಲೇಜಿನ ಪ್ರಾಂಶುಪಾಲರು ಮತ್ತು ಸಿಬ್ಬಂದಿ ವರ್ಗ ಅಭಿನಂದನೆಗಳನ್ನು ಸಲ್ಲಿಸಿ ದೆಹಲಿಯಲ್ಲಿ ಭಾಗವಹಿಸುತ್ತಿರುವುದಕ್ಕೆ ಶುಭಾಶಯ ಕೋರಿದ್ದಾರೆ.