Monday, April 21, 2025
Google search engine

Homeರಾಜ್ಯತಮ್ಮ ಶಾಸಕರು ಬೇರೆ ಪಕ್ಷಕ್ಕೆ ಹೋಗುವ ಭಯದಿಂದ ಟ್ರಿಪ್ ಕರೆದುಕೊಂಡು ಹೋಗುತ್ತಿರುವ ಕಾಂಗ್ರೆಸ್: ಕೆ ಎಸ್...

ತಮ್ಮ ಶಾಸಕರು ಬೇರೆ ಪಕ್ಷಕ್ಕೆ ಹೋಗುವ ಭಯದಿಂದ ಟ್ರಿಪ್ ಕರೆದುಕೊಂಡು ಹೋಗುತ್ತಿರುವ ಕಾಂಗ್ರೆಸ್: ಕೆ ಎಸ್ ಈಶ್ವರಪ್ಪ 

ಶಿವಮೊಗ್ಗ: ತಮ್ಮ ಶಾಸಕರು ಬೇರೆ ಪಕ್ಷಕ್ಕೆ ಹೋಗುವ ಭಯದಿಂದ ಅವರನ್ನು ಟ್ರಿಪ್ ಕರೆದುಕೊಂಡು ಹೋಗುತ್ತಿದ್ದಾರೆ ಎಂದು ಬಿಜೆಪಿ ಹಿರಿಯ ನಾಯಕ ಕೆ ಎಸ್ ಈಶ್ವರಪ್ಪ  ಅವರು ದೆಹಲಿಯಲ್ಲಿ ರಾಜ್ಯ ಕಾಂಗ್ರೆಸ್ ಆಯೋಜಿಸಿರುವ ಪ್ರತಿಭಟನೆಯನ್ನು ವ್ಯಂಗ್ಯವಾಡಿದ್ದಾರೆ.

ಹೆಚ್ಚಿನ ಅನುದಾನಕ್ಕಾಗಿ ಕೇಂದ್ರ ಸರ್ಕಾರದ ವಿರುದ್ಧ ಕರ್ನಾಟಕ ಕಾಂಗ್ರೆಸ್ ಸರ್ಕಾರ ದೆಹಲಿಯ ಜಂತರ್ ಮಂತರ್ ​​ನಲ್ಲಿ ನಾಳೆ ಪ್ರತಿಭಟನೆ ನಡೆಸಲಿದೆ.

ಈ ಬಗ್ಗೆ ಶಿವಮೊಗ್ಗದಲ್ಲಿ ಮಾತನಾಡಿದ ಕೆಎಸ್ ಈಶ್ವರಪ್ಪ, ಕರ್ನಾಟಕ ರಾಜ್ಯ ಸರ್ಕಾರ ದೆಹಲಿಗೆ ಹೋಗುತ್ತಿದೆ. ಮಹಾತ್ಮ ಗಾಂಧಿ ಚಿತ್ರ ಮತ್ತು ಅದರ ಪಕ್ಕದಲ್ಲಿ ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ಪೋಟೋ ಹಾಕಿಕೊಂಡು ಹೋರಾಟಕ್ಕೆ ಹೋಗುತ್ತಿದ್ದಾರೆ. ಕಾಂಗ್ರೆಸ್​ನಿಂದ ಈ ಹೋರಾಟ ಹಮ್ಮಿಕೊಂಡಿದ್ದರೆ ನಮ್ಮ ಅಭ್ಯಾಂತರ ಇಲ್ಲ. ಯಾಕೇ ಸರ್ಕಾರದಿಂದ ಪ್ರತಿಭಟನೆ ಮಾಡಲು ಉದ್ದೇಶಿಸಿರುವುದು ಸರ್ಕಾರದ ಹಣ ಖರ್ಚು ಮಾಡಲು ಎಂದರು.

ಸರ್ಕಾರದ ಹಣ ಖರ್ಚು ಮಾಡಲು ದೆಹಲಿಗೆ ಹೋಗುತ್ತಿದ್ದಾರೆ. ಹೋಗಿ ಬರುವ ಖರ್ಚು, ಊಟ ಹಾಗೂ ತಿಂಡಿಗೆ ಸರ್ಕಾರದ ಹಣವನ್ನೇ ಬಳಕೆ ಮಾಡುತ್ತಾರೆ. ಸರ್ಕಾರವನ್ನು ದುರುಪಯೋಗ ಮಾಡಿಕೊಳ್ಳುತ್ತಿದ್ದಾರೆ. ಚುನಾವಣಾ ಪ್ರಚಾರಕ್ಕೆ ಮಾಡುತ್ತಿರುವ ಕುತಂತ್ರ ಇದು ಎಂದು ಆಕ್ರೋಶ ಹೊರಹಾಕಿದರು.

ಅನುದಾನ ವಿಚಾರವಾಗಿ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಈಗಾಗಲೇ ಉತ್ತರ ಕೊಟ್ಟಿದ್ದಾರೆ. ಇವರಿಗೆ (ಕಾಂಗ್ರೆಸ್) ಸಮಾಧಾನ ತಂದಿಲ್ಲವೆಂದರೆ ದೆಹಲಿಗೆ ಹೋಗಿ ಕೇಳಬೇಕಿತ್ತು. ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಇಬ್ಬರೇ ಹೋಗಿ ಮಾತನಾಡಬಹುದಿತ್ತು. ಆದರೆ, ಇವರಿಗೆ ಎಲ್ಲಿ ತಮ್ಮ ಶಾಸಕರು ಬೇರೆ ಪಕ್ಷಕ್ಕೆ ಹೋಗುತ್ತಾರೋ ಎಂಬ ಭಯ. ಅದಕ್ಕೆ ಅವರನ್ನು ಟ್ರೀಪ್ ಕರೆದುಕೊಂಡು ಹೋಗುತ್ತಿದ್ದಾರೆ ಎಂದು ವ್ಯಂಗ್ಯವಾಡಿದರು.

ರಾಜ್ಯ ಸರ್ಕಾರ ಪಾಪರ್ ಆಗಿದೆ. 750 ಕೋಟಿ ರೈತರ ಹಾಲಿನ ಹಣ ಕೊಟ್ಟು ಹೋಗಿ ಎಂದು ಹೇಳಿದ ಈಶ್ವರಪ್ಪ, ಅನುದಾನದ ಬಗ್ಗೆ ಶ್ವೇತ್ರಪತ್ರವನ್ನು ಮುಖ್ಯಮಂತ್ರಿ ಹೊರಡಿಸಲ್ಲ. ಅಧಿಕೃತ ಶ್ವೇತಪತ್ರ ಹೊರಡಿಸಬೇಕು. ಆಗ ಕೇಂದ್ರ ಸರ್ಕಾರ ಉತ್ತರ ಕೋಡುತ್ತಾರೆ. ದೆಹಲಿಗೆ ಹೋಗಿಬಂದ ಮೇಲೆ ಆದರೂ ಶ್ವೇತಪತ್ರ ಹೊರಡಿಸಬೇಕು ಎಂದು ಒತ್ತಾಯಿಸಿದರು.

ಸಿದ್ದರಾಮಯ್ಯ ನೇತೃತ್ವದ ನಾಟಕ ಕಂಪನಿ ದೆಹಲಿಗೆ ಹೋಗುತ್ತಿದೆ. ಸೈನ್ಯ ತಗೊಂಡು ಯುದ್ದಕ್ಕೆ ಹೋಗುತ್ತಿದ್ದೀರಾ? ಶಾಸಕರನ್ನು ಪಿಕ್ನಿಕ್ ಕರೆದುಕೊಂಡು ಹೋಗಿ ಪಕ್ಷದಲ್ಲಿ ಉಳಿಸಿಕೊಳ್ಳುವ ಪ್ರಯತ್ನ ಇದು. ಲೋಕಸಭೆ ಚುನಾವಣೆ ತನಕ ಶಾಸಕರನ್ನು ಗುಡ್ಡೆ ಹಾಕಿಕೊಳ್ಳಬಹುದು. ಲೋಕಸಭೆ ಚುನಾವಣೆ ಮುಗಿದ ಮೇಲೆ ಶಾಸಕರು ಛೀದ್ರ ಎದ್ದು ಹೋಗುತ್ತಾರೆ. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಇರಲ್ಲ ಎಂದರು.

RELATED ARTICLES
- Advertisment -
Google search engine

Most Popular