Sunday, April 20, 2025
Google search engine

Homeಸ್ಥಳೀಯಹಾಲು ಉತ್ಪಾದಕರ ಸಹಕಾರ ಸಂಘದ ಚುನಾವಣೆ: ಅಧ್ಯಕ್ಷರಾಗಿ ಲಲಿತಮ್ಮಜಗದೀಶ್ ಉಪಾಧ್ಯಕ್ಷರಾಗಿ ಭಾರತಿಅಶೋಕ್ ಅವಿರೋಧವಾಗಿ ಆಯ್ಕೆ

ಹಾಲು ಉತ್ಪಾದಕರ ಸಹಕಾರ ಸಂಘದ ಚುನಾವಣೆ: ಅಧ್ಯಕ್ಷರಾಗಿ ಲಲಿತಮ್ಮಜಗದೀಶ್ ಉಪಾಧ್ಯಕ್ಷರಾಗಿ ಭಾರತಿಅಶೋಕ್ ಅವಿರೋಧವಾಗಿ ಆಯ್ಕೆ

ಹೊಸೂರು :  ಸಾಲಿಗ್ರಾಮ ತಾಲೂಕಿನಲ್ಲಿ ತೀವ್ರ ಕುತೂಹಲ ಕೆರಳಿಸಿದ್ದ  ಹೊಸೂರು ಹಾಲು ಉತ್ಪಾದಕರ ಸಹಕಾರ ಸಂಘದ ಚುನಾವಣೆಯಲ್ಲಿ ಜೆಡಿಎಸ್ ಬೆಂಬಲಿತ ಅಧ್ಯಕ್ಷರಾಗಿ ಲಲಿತಮ್ಮಜಗದೀಶ್ ಉಪಾಧ್ಯಕ್ಷರಾಗಿ ಭಾರತಿಅಶೋಕ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

   ಸಂಘದ ಕಚೇರಿಯಲ್ಲಿ ನಡೆದ ಚುನಾವಣೆಯಲ್ಲಿ ಅಧ್ಯಕ್ಷ  ಸ್ಥಾನಕ್ಕೆ ಸ್ಪರ್ದಿಸಿದ್ದ  ಹೆಚ್.ಜೆ ರಮೇಶ್ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಸ್ಪರ್ದಿಸಿದ್ದ  ನಾಗರಾಜ ಅವರು ನಾಮಪತ್ರ ವಾಪಸ್ ಪಡೆದ ಕಾರಣ ಅಧ್ಯಕ್ಷರಾಗಿ ಲಲಿತಮ್ಮ ಹಾಗೂ ಉಪಾಧ್ಯಕ್ಷರಾಗಿ  ಭಾರತಿಅಶೋಕ್ ಅವರ ಅವಿರೋಧ ಆಯ್ಕೆಯನ್ನು ಚುನಾವಣಾಧಿಕಾರಿ ಹುಣಸೂರು ಸಹಕಾರ ಇಲಾಖೆಯ ಗಿರೀಶ್ ಘೋಷಿಸಿದರು.

 ಆಯ್ಕೆ ಪ್ರಕಟವಾಗುತ್ತಿದ್ದಂತೆ ಎಪಿಎಂಸಿ ಮಾಜಿ ಅಧ್ಯಕ್ಷ ರಾಜೇಗೌಡ,ಗ್ರಾಪಂ ಮಾಜಿಸದಸ್ಯ ಶಿವಣ್ಣ,ಗುತ್ತಿಗೆದಾರರಾದ ಎಚ್.ಕೆ.ಕೀರ್ತಿ ಕೀರ್ತಿ,ದರ್ಶನ್,ದೇಸೇಗೌಡ, ಗಣೇಶ, ಅವರುಗಳು ನೂತನ ಅಧ್ಯಕ್ಷ ಉಪಾಧ್ಯಕ್ಷರನ್ನು ಅಭಿನಂಧಿಸಿದರು ಪಟಾಕಿ ಸಿಡಿಸಿ ಸಿಹಿ ಹಂಚಿ ಸಂಭ್ರಮಿಸಿದರು.

   ಚುನಾವಣಾ  ಸಭೆಯಲ್ಲಿ ಸಂಘದ ನಿರ್ದೇಶಕರಾದ ಸ್ವಾಮಿ,ರಂಗೇಗೌಡ,ಬುದ್ದಿಸಾಗರ,ಆಶಾ,ಅಕ್ಕಮ್ಮ,ಪರಶುರಾಮ್, ಯದುಕುಮಾರ,ನಾಮನಿರ್ದೇಶಿತ ಸದಸ್ಯ ಪ್ರಸನ್ನ,ಸಂಘದ ಕಾರ್ಯದರ್ಶಿ ಶಂಕರ್,ಹಾಲುಪರೀಕ್ಷಕ ಮಹದೇವ್ ಹಾಜರಿದ್ದರು.

    ನೂತನವಾಗಿ ಚುನಾವಣೆ ನಡೆದು ಕಳೆದ ೨ತಿಂಗಳಿನಿಂದಲೂ ಚುನಾವಣಾ ಸಭೆಗಳಿಗೆ ಗೈರಾಗುವ ಮೂಲಕ ಚುನವಣಾ ಸಭೆ ರದ್ದಾಗುತ್ತಾ ಪಕ್ಷರಾಜಕೀಯಕ್ಕೆ ತಿರುಗಿದ್ದ ಅಧ್ಯಕ್ಷ ಉಪಾಧ್ಯಕ್ಷರ ಚುನಾವಣೆಗೆ ಇಂದು ದಿನಾಂಕ ನಿಗದಿಯಾಗಿತ್ತು,ಇಂದಿನ ಸಭೆಯೂ ರದ್ದಾಗಿದ್ದರೆ ಸಂಘ ಸೂಪರ್ ಸೀಡ್ ಆಗುವ ಆತಂಕ ಎದುರಾಗಿತ್ತು

RELATED ARTICLES
- Advertisment -
Google search engine

Most Popular