Sunday, April 20, 2025
Google search engine

Homeಸ್ಥಳೀಯರಾಜ್ಯದ ಮೇಲೆ ಕೇಂದ್ರ ದ್ವೇಷದ ರಾಜಕಾರಣ: ಬಡಗಲಪುರ ನಾಗೇಂದ್ರ

ರಾಜ್ಯದ ಮೇಲೆ ಕೇಂದ್ರ ದ್ವೇಷದ ರಾಜಕಾರಣ: ಬಡಗಲಪುರ ನಾಗೇಂದ್ರ

ಮೈಸೂರು: ಗೋದಾಮುಗಳಲ್ಲಿ ದಾಸ್ತಾನು ಇದ್ದರೂ  ಕೇಂದ್ರ ಸರ್ಕಾರ ರಾಜ್ಯಕ್ಕೆ ಅಕ್ಕಿ ಬಿಡುಗಡೆ ಮಾಡದೇ ರಾಜ್ಯದ ಮೇಲೆ  ಕೇಂದ್ರ ಸರ್ಕಾರ ದ್ವೇಷದ ರಾಜಕಾರಣ ಮಾಡುತ್ತಿದೆ ಎಂದು ರಾಜ್ಯ ರೈತ ಸಂಘದ ರಾಜ್ಯಾಧ್ಯಕ್ಷ ಬಡಗಲಪುರ ನಾಗೇಂದ್ರ ಕಿಡಿಕಾರಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಚುನಾವಣೆಯಲ್ಲಿ ಬಿಜೆಪಿ ಸರ್ಕಾರವನ್ನು ಸೋಲಿಸಿದ ರಾಜ್ಯದ ಮತದಾರರ ಮೇಲೆ ಕೇಂದ್ರ ಸರ್ಕಾರ ದ್ವೇಷದ ರಾಜಕಾರಣ ಮಾಡುತ್ತಿದೆ. ಮೊದಲೇ ನಮ್ಮ ರಾಜ್ಯದಲ್ಲಿ ಅಕ್ಕಿ, ರಾಗಿ ಭತ್ತ, ಮುಂತಾದ ಬೆಳೆಗಳಿಗೆ ಬೆಂಬಲ ಸಿಗದೇ ಗಣನೀಯವಾಗಿ ಕಡಿಮೆಯಾಗುತ್ತಿದೆ. ಹೀಗಾಗಿ ಸ್ಥಳೀಯ ರೈತರಿಂದ ಅಕ್ಕಿ ಖರೀದಿಸಿ  ಪ್ರೋತ್ಸಹಿಸಬೇಕು ಎಂದರು.

ಅಕ್ಕಿ ಬದಲಿಗೆ ರಾಗಿ ಮತ್ತು ಜೋಳವನ್ನು ಖರೀದಿಸಿ ಪಡಿತರ ವಿತರಣೆ ಮಾಡಬೇಕು  ಎಂದು ಬಡಗಲಪುರ ನಾಗೇಂದ್ರ ಸರ್ಕಾರಕ್ಕೆ ಮನವಿ ಮಾಡಿದರು.

RELATED ARTICLES
- Advertisment -
Google search engine

Most Popular