Saturday, April 19, 2025
Google search engine

Homeಸ್ಥಳೀಯನಾರಿ ಶಕ್ತಿಗೆ ಮುರಿದ ಮತ್ತೊಂದು ಕೆಎಸ್‌ ಆರ್‌ ಟಿಸಿ ಬಸ್ ಡೋರ್

ನಾರಿ ಶಕ್ತಿಗೆ ಮುರಿದ ಮತ್ತೊಂದು ಕೆಎಸ್‌ ಆರ್‌ ಟಿಸಿ ಬಸ್ ಡೋರ್

ಮಂಡ್ಯ:ರಾಜ್ಯ ಸರ್ಕಾರದಿಂದ ಜಾರಿಗೊಳಿಸಲಾದ ಶಕ್ತಿ ಯೋಜನೆಯಡಿ ಉಚಿತವಾಗಿ ಬಸ್‌ನಲ್ಲಿ ಪ್ರಯಾಣ ಮಾಡುತ್ತಿರುವ ಮಹಿಳೆಯರು ನೂಕುನುಗ್ಗಲಿನಲ್ಲಿ ಕೊಳ್ಳೇಗಾಲದಲ್ಲಿ ಕೆಎಸ್‌ ಆರ್‌ ಟಿಸಿ ಬಸ್‌ ಬಾಗಿಲನ್ನು ಮುರಿದಿದ್ದರು.ಈಗ ಮಂಡ್ಯ ಜಿಲ್ಲೆಯ ಮಳವಳ್ಳಿಯಲ್ಲಿ ಮತ್ತೊಂದು ಬಸ್‌ ಬಾಗಿಲನ್ನು ಮುರಿದು ಹಾಕಿರುವ ಘಟನೆ ನಡೆದಿದೆ.
ರಾಜ್ಯಾದ್ಯಂತ ಕಳೆದ ಎಂಟು ದಿನಗಳ ಹಿಂದೆ ಮಹಿಳಯರಿಗೆ ಉಚಿತವಾಗಿ ಸಂಚಾರ ಮಾಡಲು ‘ಶಕ್ತಿ’ ಯೋಜನೆಯನ್ನು ಜಾರಿಗೊಳಿಸಲಾಗಿದೆ. ಉಚಿತ ಪ್ರಯಾಣದ ಲಾಭ ಪಡೆಯುತ್ತಿರುವ ಮಹಿಳೆಯರು ಬಸ್‌ನ ನೂಕು ನುಗ್ಗಲು ಮೂಲಕ ಪ್ರಯಾಣ ಮಾಡುತ್ತಿದ್ದಾರೆ.
ಮಣ್ಣೆತ್ತಿನ ಅಮವಾಸ್ಯೆಯ ಹಿನ್ನೆಲೆಯಲ್ಲಿ ಚಾಮರಾಜನಗರದ ಮಲೈ ಮಹದೇಶ್ವರ ಬೆಟ್ಟಕ್ಕೆ ಪ್ರಯಾಣ ಮಾಡುವಾಗ ಮಹಿಳೆಯರು ಕೊಳ್ಳೇಗಾಲದಲ್ಲಿ ಬಸ್‌ ಹತ್ತುವಾಗ ಬಾಗಿಲನ್ನು ಮುರಿದು ಹಾಕಿದ್ದರು.ಇದಾದ ಎರಡೇ ದಿನದಲ್ಲಿ ಮಳವಳ್ಳಿಯಲ್ಲಿ ಮತ್ತೊಂದು ಸಾರಿಗೆ ಬಸ್‌ನ ಬಾಗಿಲು ಮುರಿದು ಹಾಕಿದ್ದಾರೆ.
ಬಸ್‌ ನಿಲ್ದಾಣಕ್ಕೆ ಬಂದಾಗ ಸೀಟು ಹಿಡಿಯುಲು ಉಂಟಾದ ಜನರಿಂದ ನೂಕು ನುಗ್ಗಲು ಉಂಟಾಗಿತ್ತು. ಈ ವೇಳೆ ಬಾಗಿಲು ಹಿಡಿದು ಬಸ್‌ ಹತ್ತಲು ಮುಂದಾದ ಮಹಿಳೆಯು ಸೇರಿ ಪುರುಷ ಪ್ರಯಾಣಿಕರು ಬಾಗಿಲು ಮುರಿದು ಹಾಕಿದ್ದಾರೆ ಎಂದು ತಿಳಿದುಬಂದಿದೆ.
ಶಕ್ತಿ ಯೋಜನೆ ಘೋಷಣೆ ಬಳಿಕ ಮಹಿಳಾ ಪ್ರಯಾಣಿಕರ ಸಂಖ್ಯೆ ಗಣನೀಯ ಹೆಚ್ಚಳವಾಗಿದೆ. ಇದರಿಂದ ನೂಕುನುಗ್ಗಲು ಉಂಟಾಗಿದ್ದು, ಬಾಗಿಲು ಕಿತ್ತು ಬಂದಿದೆ. ಬಾಗಿಲು ಕಿತ್ತು ಬಂದ ಕಾರಣ ಬಸ್ ನ ಪ್ರಯಾಣಿಕರನ್ನು ಸಾರಿಗೆ ಸಿಬ್ಬಂದಿ ಕೆಳಗಿಳಿಸಿದ್ದಾರೆ. ಕಿತ್ತು ಹೋದ ಡೋರ್ ಅನ್ನು ನಿಲ್ದಾಣದ ಸಿಬ್ಬಂದಿಗೆ ಕಂಡಕ್ಟರ್‌ ಹಸ್ತಾಂತರಿಸಿದ್ದಾರೆ.ನಂತರ ಬಸ್‌ನಲ್ಲಿ ಭರ್ತಿಯಾಗಿ ಪ್ರಯಾಣಿಕರನ್ನು ತುಂಬಿಕೊಳ್ಳದೇ ಬಾಗಿಲ ಬಳಿ ಯಾರನ್ನೂ ನಿಲ್ಲಿಸದೇ ಪ್ರಯಾಣಿಕರನ್ನು ಕರೆದೊಯ್ಯ
ಲಾಯಿತು.ನಂತರ, ಅದನ್ನು ದುರಸ್ತಿ ಮಾಡಿಸುವುದಾಗಿ ಸಾರಿಗೆ ಸಿಬ್ಬಂದಿ ಮಾಹಿತಿ ನೀಡಿದ್ದಾರೆ.

RELATED ARTICLES
- Advertisment -
Google search engine

Most Popular